ಸಂಪುಟ ವಿಸ್ತರಣೆ ಬಗ್ಗೆ ಟೀಕೆ: ಸಿಎಂ ಬದಲಾವಣೆ ಹೇಳಿಕೆ ಕುರಿತು ಉಲ್ಟಾ ಹೊಡೆದ ಮಾಜಿ ಸಿಎಂ ಸಿದ್ಧರಾಮಯ್ಯ…

ಮೈಸೂರು,ಜನವರಿ,13,2021(www.justkannada.in): ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಹುತೇಕ ಫೈನಲ್ ಆಗಿದ್ದು ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.jk-logo-justkannada-mysore

7 ಜನರನ್ನ ಸೇರಿಸಿಕೊಂಡರು ಈ ಸರ್ಕಾರ ಟೇಕ್ ಆಫ್ ಆಗೋಲ್ಲ. ಮಂತ್ರಿ ಮಂಡಲ ಪೂರ್ತಿಯಾದ ತಕ್ಷಣ ಈ ಸರ್ಕಾರ ಪರಿಪೂರ್ಣ ಆಗೋಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಲೇವಡಿ ಮಾಡಿದ್ದಾರೆ.

ಸಂಪುಟ ವಿಸ್ತರಣೆ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿದ ಸಿದ್ಧರಾಮಯ್ಯ  ಸರ್ಕಾರ ಈಗಲೇ ಅದೋಗತಿಗೆ ಹೋಗಿದೆ. ಸಂಪುಟ ವಿಸ್ತರಣೆಯ ಅಸಮಾಧಾನದಿಂದ ಮತ್ತಷ್ಟು ಅದೋಗತಿಗೆ ಹೋಗಲಿದೆ. ಯಾರ್ಯಾರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೋ ಅಂತ ನಾನು ನೋಡೋಕೆ ಹೋಗಿಲ್ಲ. ಅಥವಾ ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತಾನು ವಿಚಾರಿಸಲು ಹೋಗಿಲ್ಲ. ನನಗೇನು ಗೊತ್ತು ಯಾರ್ಯಾರು ಏನೇನು ಮಾತನಾಡಿಕೊಂಡಿದ್ದರೂ ಅಂತ. ಅದರ ಬಗ್ಗೆ ನಾನು ಮಾತನಾಡಲು ಹೋಗಲ್ಲ ಎಂದರು.

ಸಿಎಂ ಬದಲಾವಣೆ ಹೇಳಿಕೆ  ಉಲ್ಟಾ ಹೊಡೆದ ಸಿದ್ದರಾಮಯ್ಯ…

ನನಗಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಇದೀಗ ತಮ್ಮ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದಾರೆ. ಮಂತ್ರಿ ಮಂಡಲ ವಿಸ್ತರಣೆಯಿಂದಾಗಿ ಬಿಎಸ್‌ ವೈ ಇನ್ನು ಸ್ವಲ್ಪ ದಿನ ಮುಂದುವರಿಯಬಹುದು. ಈಗ ಸಂಪುಟ ವಿಸ್ತರಣೆ ಆಗಿರೋದನ್ನ ನೋಡಿದ್ರೆ ಇನ್ನು ಸ್ವಲ್ಪ ದಿನ ಯಡಿಯೂರಪ್ಪರೆ ಸಿಎಂ ಆಗಿ ಇರಬಹುದು. ಬಹುಶಃ ಸಂಪುಟ ವಿಸ್ತರಣೆ ಆದ ನಂತರ ರಾಜೀನಾಮೆ ಕೊಡ್ತಿನಿ ಅಂತ ಹೇಳಿರಬಹುದೇನೋ. ನಮಗಿದ್ದ ಮಾಹಿತಿ ಪ್ರಕಾರ ಹೈಕಮಾಂಡ್ ಸಿಎಂ ರಾಜೀನಾಮೆ ಕೇಳಿದ್ದರು. ಬಹುಶಃ ಸಂಪುಟ ವಿಸ್ತರಣೆ ಬಜೆಟ್ ಮಂಡನೆ ಮಾಡಿ ಕೊಡ್ತಿನಿ ಅಂತ ಹೇಳಿರಬಹುದು. ಹಾಗಾಗಿ ಇನ್ನು ಸ್ವಲ್ಪ ದಿನ ಅವರೇ ಸಿಎಂ ಆಗಿ ಉಳಿಯುವ ಸಾಧ್ಯತೆ ಇದೆ ಎಂದು ಹೇಳಿಕೆ ನೀಡಿದ್ದಾರೆ.Cabinet expansion.- Former CM Siddaramaiah- Criticized

ಬಜೆಟ್ ಮಂಡನೆ ಸಿದ್ದತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಯಡಿಯೂರಪ್ಪ ಬಜೆಟ್ ಮಂಡಿಸಲೇಬೇಕು. ಇಲ್ಲವಾದರೇ ಮಾರ್ಚ್ ನಂತರ ಒಂದು ರೂಪಾಯಿಯೂ ಖರ್ಚು ಮಾಡೋಕೆ ಆಗೋಲ್ಲ. ನನ್ನ ಬಜೆಟ್ ಸ್ಟೈಲ್ ಬೇರೆ ಇತ್ತು. ಇವರ ಬಜೆಟ್ ಸ್ಟೈಲ್ ಬೇರೆ ಇದೆ. ಈಗ ಮೀಟಿಂಗ್ ಮಾಡ್ತಿದ್ದೀವಿ ಅಂತ ಹೇಳಿದ್ದಾರೆ. ನೋಡೋಣ ಏನ್ ಮಾಡ್ತಾರೆ ಅಂತ ಎಂದರು.

Key words: Cabinet expansion.- Former CM Siddaramaiah- Criticized