ಸಂಪುಟ ವಿಸ್ತರಣೆಯಾದ್ರೆ ಸರ್ಕಾರದಲ್ಲಿ ಸ್ಪೋಟ: -ಹೊಸಬಾಂಬ್ ಸಿಡಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ…

ಮೈಸೂರು,ಜ,20,2020(www.justkannada.in): ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿಸ್ಥಾನ ಕೊಡಲ್ಲ. ಸಚಿವ ಸ್ಥಾನ ಕೊಡದಿದ್ದರೆ ನೋಡಿಕೊಳ್ಳಿ ಅಂತ ಈಗಾಗಲೇ ವಿಶ್ವನಾಥ್ ಹೇಳಿದ್ದಾರೆ. ಮುಂದೆ ನೀವೆ ನೋಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್‌ ಸಿಡಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಉಪಚುನಾವಣೆಯಲ್ಲಿ ಗೆದ್ದವರ ಸ್ಥಿತಿ ಅಂತರ್ ಪಿಶಾಚಿಗಳಂತೆ. ಇದೀಗಾ ಅವರುಗಳು ಅಂತರ್ ಪಿಶಾಚಿಗಳಾಗಿದ್ದಾರೆ. ಅಮಿತ್ ಶಾ ಅವರ ಭೇಟಿಗೂ ಅವಕಾಶ ಕೊಟ್ಟಿಲ್ಲ. ಒಂದು ವೇಳೆ ಸಂಪುಟ ವಿಸ್ತರಣೆಯಾದ್ರೆ ನನಗಿರುವ ಮಾಹಿತಿ ಪ್ರಕಾರ ಸರ್ಕಾರದಲ್ಲಿ ಸ್ಪೋಟವಾಗುತ್ತೆ. ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿ ಕೊಡಲ್ಲ. ಮಂತ್ರಿ ಕೊಡದಿದ್ದರೆ ನೋಡಿಕೊಳ್ಳಿ ಅಂತ ಈಗಾಗಲೇ ವಿಶ್ವನಾಥ್ ಹೇಳಿದ್ದಾರೆ. ಮುಂದೆ ನೀವೆ ನೋಡಿ ಎಂದು ಹೇಳಿದರು.

ರಾಜ್ಯದಲ್ಲಿ ಸರ್ಕಾರವೆ ಇಲ್ಲ. ಮೈತ್ರಿ ಸರ್ಕಾರ ನಂತರ ಈ ಸರ್ಕಾರ ಬಂದು ಆರು ತಿಂಗಳಾಗಿದೆ. ಅಂದಿನಿಂದ ಸರ್ಕಾರವೆ ಇಲ್ಲ. ಇವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಇನ್ನು ಮಂತ್ರಿ ಮಂಡಲ ರಚನೆಯಾಗಿಲ್ಲ. ಇಲ್ಲದ ಸರ್ಕಾರಕ್ಕೆ ಸರ್ಕಾರ ಟೇಕಾಫ್ ಆಗ್ತಾ ಇದೆ ಅಂತ ಹೇಳಲು ಆಗಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಲೇವಡಿ ಮಾಡಿದರು.

ಕೆ.ಪಿ.ಸಿ.ಸಿ‌ ಅಧ್ಯಕ್ಷರ ನೇಮಕಾತಿ ವಿಚಾರ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ಇದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಯಾರು ಆಗಬೇಕು ಎಂಬುದನ್ನ ಹೈಕಮಾಂಡ್ ಗೆ ತಿಳಿಸಿದ್ದೇನೆ. ಬೇಗ ನೇಮಕವಾಗಲಿ ಅಂತ ನಾನು ಹೇಳುತ್ತೇನೆ. ಆಗಂತ ಯಾರು ನೇಮಕವಾಗಬೇಕು ಅಂತಾ ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ಇದು ದೊಡ್ಡ ವಿಚಾರವಲ್ಲ, ಇದಕ್ಕಿಂತ ದೊಡ್ಡವಿಚಾರ ಮಂತ್ರಿ ಮಂಡಲ ವಿಚಾರ ಎಂದರು.

ಸಿಎಎ ಜಾರಿಗೊಳಿಸಲು ಗೌವರ್ನರ್ ಗೆ ಪರಮಾಧಿಕಾರ ಇಲ್ಲ…

ಸಿಎಎ ಜಾರಿಗೊಳಿಸಲು ಗೌವರ್ನರ್ ಗೆ ಪರಮಾಧಿಕಾರ ಇಲ್ಲ. ಚುನಾವಣೆ ವ್ಯವಸ್ಥೆಗಿಂತ ದೊಡ್ಡವರಲ್ಲ. ಅವರು ಕೇಂದ್ರದಿಂದ ನೇಮಕವಾದವರು. ದೇಶದ 13 ರಾಜ್ಯಗಳು ಸಿಎಎ ವಿರೋಧ ಮಾಡಿದೆ. ಎನ್ ಡಿ.ಎ ಮಿತ್ರ ಪಕ್ಷಗಳೇ ಸಿಎಎಯನ್ನ ವಿರೋಧ ಮಾಡುತ್ತಿವೆ.. ನಿಮಗೆ ತಾಕತ್ತಿದ್ದರೆ ಮೈತ್ರಿ ಸರ್ಕಾರ ಇರೋ ಕಡೆ ಸರ್ಕಾರವನ್ನ ವಜಾ ಮಾಡಿ. ಇಲ್ಲ ಬೆಂಬಲವನ್ನ ವಾಪಸ್ಸು ಪಡೆಯಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

Key words: Cabinet expansion –bjp govrnament- Explosion-Former CM -Siddaramaiah