ಗಟ್ಟಿ ಬಸವಣ್ಣ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸಚಿವ ಸಂಪುಟ ಅನುಮೋದನೆ….

ಬೆಳಗಾವಿ,ನವೆಂಬರ್,12,2020(www.justkannada.in): ಗೋಕಾಕ್ ನಗರ ಮತ್ತು ಸುತ್ತುಮುತ್ತಲಿನ ಹಳ್ಳಿಗಳ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಗಟ್ಟಿ ಬಸವಣ್ಣ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.kannada-journalist-media-fourth-estate-under-loss

995 ಕೋಟಿ ರೂ. ವೆಚ್ಚದಲ್ಲಿ ಮಾರ್ಕಾಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಗೋಕಾಕ್ ತಾಲ್ಲೂಕಿನ ಜನರಿಗೆ ಕುಡಿಯುವ ನೀರು ಒದಗಿಸುವ ಸಚಿವ ರಮೇಶ್ ಜಾರಕಿಹೊಳಿ‌ ಅವರ ಕನಸಿನ ಯೋಜನೆ ಅನುಷ್ಠಾನಕ್ಕೆ ಇಂದು ನಡೆದ ಸಚಿವ ಸಂಪುಟದ ಸಭೆ, ಅನುಮತಿ ನೀಡಿದೆ. Cabinet -approval - implementation –gatti basavanna- Drinking Water- Project

ಗೋಕಾಕ್ ತಾಲ್ಲೂಕಿನ ಸುತ್ತಮುತ್ತ ಅಂತರ್ಜಲ ಮಟ್ಟ ತೀವ್ರ ಕುಸಿದಿರುವ ಹಿನ್ನೆಲೆಯಲ್ಲಿ ಗಟ್ಟಿ ಬಸವಣ್ಣ ಯೋಜನೆ ಅನುಷ್ಠಾನದಿಂದ ಗೋಕಾಕ್ ಸುತ್ತಲಿನ ಜನರಿಗೆ ಕುಡಿಯುವ ನೀರು ಒದಗಲಿದೆ.

Key words: Cabinet -approval – implementation –gatti basavanna- Drinking Water- Project