ಬಿಡಬ್ಲ್ಯುಎಫ್ ವರ್ಲ್ಡ್ ಟೂರ್: ಬೆಳ್ಳಿಗೆ ತೃಪ್ತಿಪಟ್ಟ ಪಿ.ವಿ.ಸಿಂಧು

kannada t-shirts

ಬೆಂಗಳೂರು, 06 ಡಿಸೆಂಬರ್, 2021 (www.justkannada.in): ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್‌ನಲ್ಲಿ ಪಿವಿ ಸಿಂಧು ಫೈನಲ್ ನಲ್ಲಿ ಸೋಲುವ ಮೂಲಕ ಮತ್ತೊಮ್ಮೆ ಚಿನ್ನದ ಪದಕ ವಂಚಿತರಾಗಿದ್ದಾರೆ.

ದಕ್ಷಿಣ ಕೊರಿಯಾದ ಆನ್ ಸೆಯೊಂಗ್ ವಿರುದ್ಧ 21-16, 21-12 ಸೆಟ್‌ಗಳಿಂದ ಸೋತರು. ಟೋಕಿಯೊ ಒಲಿಂಪಿಕ್ಸ್-2020ರಲ್ಲಿ ಸಿಂಧು ಕಂಚಿನ ಪದಕ ಗೆದ್ದಿದ್ದರು. ಬಳಿಕ ಯಾವುದೇ ಪ್ರಶಸ್ತಿ ಸಿಂಧು ಕೈ ಸೇರಿರಲಿಲ್ಲ.

ಇದೀಗ ಸಿಂಧು ಈ ಟೂರ್ನಿಯಲ್ಲಿ ಮೂರನೇ ಬಾರಿ ಫೈನಲ್‌ ಪ್ರವೇಶಿಸಿದ್ದರು. ಅವರು 2018 ರಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯರಾಗಿದ್ದಾರೆ.

ಆದರೆ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಭಾರತದ ಸ್ಟಾರ್ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಫೈನಲ್ ನಲ್ಲಿ ಸೋಲುವ ಮೂಲಕ ಮತ್ತೊಮ್ಮೆ ಚಿನ್ನದ ಪದಕ ವಂಚಿತರಾಗಿದ್ದಾರೆ.

 

website developers in mysore