ಹೊಸ ವರ್ಷಕ್ಕೂ ಮುನ್ನ ಕೇಂದ್ರ ಸರಕಾರಿ ನೌಕರರಿಗೆ ಬಂಪರ್ ಗಿಫ್ಟ್ ?!

Promotion

ಬೆಂಗಳೂರು, ಡಿಸೆಂಬರ್ 26, 2021 (www.justkannada.in): ಹೊಸ ವರ್ಷದ ಮುನ್ನಾದಿನದಂದು ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಬಂಪರ್‌ ಉಡುಗೊರೆ ನೀಡಬಹುದು ಎನ್ನಲಾಗಿದೆ.

ಮೋದಿ ಸರ್ಕಾರವು ಫಿಟ್ಮೆಂಟ್ ಅಂಶವನ್ನ ಹೆಚ್ಚಿಸಲು ಯೋಚಿಸುತ್ತಿದೆ ಎನ್ನಲಾಗಿದೆ. ಈ ಫಿಟ್ ಮೆಂಟ್ ಅಂಶವು ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಮೂಲ ವೇತನವನ್ನಸರಿಪಡಿಸುತ್ತೆ.

ಫಿಟ್ ಮೆಂಟ್ ಅಂಶವನ್ನು ಹೆಚ್ಚಿಸಿದರೆ ಉದ್ಯೋಗಿಗಳ ಕನಿಷ್ಠ ಮೂಲ ವೇತನವು 26,000ಕ್ಕೆ ಏರಬಹುದು. ಬಜೆಟ್ʼಗೆ ಮೊದಲು ಕ್ಯಾಬಿನೆಟ್ ಅನುಮೋದನೆ ಪಡೆದರೆ ಇದು ಜಾರಿಗೆ ಬರಲಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ತಮ್ಮ ಫಿಟ್ ಮೆಂಟ್ ಅಂಶವನ್ನ ಶೇಕಡಾ 2.57 ರಿಂದ ಶೇಕಡಾ 3.68ಕ್ಕೆ ಹೆಚ್ಚಿಸಬೇಕೆಂದು ದೀರ್ಘಕಾಲದಿಂದ ಒತ್ತಾಯಿಸುತ್ತಿದ್ದಾರೆ.