ಬಜೆಟ್ ನಲ್ಲಿ ರಂಗಾಯಣ ಹೆಸರು ಪ್ರಸ್ತಾಪ: ಇಡೀ ಕನ್ನಡನಾಡಿನ ಕಲೆಗೆ ಕೊಟ್ಟ ಬಹುದೊಡ್ಡ ಗೌರವ -ಅಡ್ಡಂಡ ಕಾರ್ಯಪ್ಪ 

ಮೈಸೂರು,ಮಾರ್ಚ್,10,2021(www.justkannada.in) : ಇತಿಹಾಸದಲ್ಲಿ ಮೊದಲ ಬಾರಿಗೆ ಬಜೆಟ್ ನಲ್ಲಿ ರಂಗಾಯಣ ಹೆಸರು ಪ್ರಸ್ತಾಪವಾಗಿದೆ. ಇದು ರಂಗಾಯಣಕ್ಕೆ ಇಡೀ ಕನ್ನಡನಾಡಿನ ಕಲೆಗೆ ಕೊಟ್ಟ ಬಹುದೊಡ್ಡ ಗೌರವ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.

jkಬುಧವಾರ ರಂಗಾಯಣ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು.ಬಜೆಟ್ ನಲ್ಲಿ ರಂಗಾಯಣ ಹೆಸರು ಪ್ರಸ್ತಾಪಿಸಿ ಪರ್ವ ನಾಟಕ ಪ್ರದರ್ಶನಕ್ಕೆ ಒಂದು ಕೋಟಿ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೆ ರಂಗಾಯಣದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಎಸ್ ಎಲ್ ಬೈರಪ್ಪ ಅವರ ಪರ್ವ ನಾಟಕಕ ಪ್ರದರ್ಶನ ಒಂದು ಮೈಲಿಗಲ್ಲಾಗಬೇಕು ಎಂಬ ಆಸೆ ಹೊತ್ತಿದ್ದೆವು. ರಾಜ್ಯದಾದ್ಯಂತ ಇದರ ಪ್ರದರ್ಶನಕ್ಕೆ ಹಣಕಾಸಿನ ನೆರವು ಕೇಳಿದ್ದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಜಿಲ್ಲಾ ಉಸ್ತುವಾರಿ  ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ನಾಗೇಂದ್ರ ಅವರಿಗೆ ಮನವಿ ಮಾಡಲಾಗಿತ್ತು. ಬಜೆಟ್ ನಲ್ಲಿ ಹಣ ಕೊಡಿಸುವುದಾಗಿ ತಿಳಿಸಿದ್ದರು ಎಂದು ಮಾಹಿತಿ ನೀಡಿದರು.

key words : budget-Rangayana-Name-Proposal-whole-Kannada-art-Given-Large-Honor-Rangayana-Director-addanda-karyappa