ದೀಪಾವಳಿ ಗಿಫ್ಟ್ ಜೊತೆ ಪತ್ರಕರ್ತರಿಗೆ ಲಂಚ ನೀಡಿದ ಆರೋಪ: ಸಿಎಂ ಬೊಮ್ಮಾಯಿ ರಾಜೀನಾಮೆಗೆ ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹ.

Promotion

ನವದೆಹಲಿ,ಅಕ್ಟೋಬರ್,29,2022(www.justkannada.in): ಸರ್ಕಾರದ ವಿರುದ್ಧ ದೀಪಾವಳಿ ಗಿಫ್ಟ್ ಜೊತೆ ಪತ್ರಕರ್ತರಿಗೆ ಲಂಚ ನೀಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹಿಸಿದ್ದಾರೆ.

ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು. ಕರ್ನಾಟಕ ಸರ್ಕಾರ ದೇಶದ ಅತ್ಯಂತ ಭ್ರಷ್ಟ ಸರ್ಕಾರ. ಕರ್ನಾಟಕದಲ್ಲಿ ಲಂಚ ನೀಡದಿದ್ದರೇ ಯಾವುದೇ ಕೆಲಸ ಆಗುವುದಿಲ್ಲ. ಅನುದಾನ ಪಡೆಯಲು ಸ್ವಾಮೀಜಿಗಳು ಕಮಿಷನ್ ಕೊಡಬೇಕಾಗಿದೆ.   ಪಿಎಸ್ ಐ ನೇಮಕಾತಿಗಾಗಿ 80 ಲಕ್ಷ ಲಂಚ ಕೊಡಬೇಕಾಗಿದೆ.  ಪೊಲೀಸ್ ಇನ್ಸ್ ಪೆಕ್ಟರ್ ಪೋಸ್ಟಿಂಗ್ ಗೂ 80 ಲಕ್ಷ ಲಂಚ ಕೊಡಬೇಕು ಎಂದು ಆರೋಪಿಸಿದರು.

ಸಿಎಂ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರ ಕೇಸ್ ಹಾಕಬೇಕು. ಕಾಂಗ್ರೆಸ್ ಆಡಳಿತದ ವೇಳೆ ಪರ್ತಕರ್ತರಿಗೆ ಎಂದು ಹಣ ನೀಡಿಲ್ಲ. ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪವನ್ನ ತಿರಸ್ಕರಿಸುವೆ . ನಮ್ಮ ಸರ್ಕಾರ ಬಂದರೇ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದರು.

ಸರ್ಕಾರದ ಭ್ರಷ್ಟಾಚಾರವನ್ನ ಬಯಲಿಗೆಳೆದು ‍ ಮಾಧ್ಯಮಗಳು ವರದಿ ಮಾಡುತ್ತಿವೆ. ಹೀಗಾಗಿ ಸರ್ಕಾರ ಮಾಧ್ಯಮಗಳಿಗೆ ಲಂಚ ನೀಡಲು ಪ್ರಯತ್ನಿಸುತ್ತಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಕಿಡಿಕಾರಿದರು.

Key words: bribing -journalists – Randeep Singh Surjewala –demands- resignation-CM Bommai.

ENGLISH SUMMARY…

Allegations of distributing money with Deepawali gift to journos: Cong. leader Randeep Singh Surjewala demands CM Bommai’s resignation
New Delhi, October 29, 2022 (www.justkannada.in): Congress party’s Karnataka Incharge Randeep Singh Surjewala has demanded Chief Minister of Karnataka Basavaraj Bommai’s resignation following cropping up of allegations against him of distributing money along with Deepawali sweets to journos.
Speaking in Delhi today, Surjewala demanded, “CM Basavaraj Bommai should resign. The present government in Karnataka is the most corrupt. No government will happen without bribe. Even pontiffs of mutts are forced to give commission to get grants. They have swindled Rs. 80 lakh bribe in the PSI recruitment,” he alleged.
Further he demanded a corruption case against the Chief Minister. “Such incidents had never taken place in Karnataka during Congress government. We had never offered money to journalists during our administration. If our government comes to power in Karnataka, we will conduct an investigation and ensure that the guilty are punished,” he added.
“The media in Karnataka are showcasing the corruption of the State Government. Hence, the State Govt. is luring them with money in order to conceal their corruption,” Surjewala alleged.
Keywords: Randeep Singh Surjewala/ Congress/ BJP/ State Govt./ bribe/ journos