ಅಕ್ರಮ ಗಣಿಗಾರಿಕೆ ಸ್ಥಗಿತಕ್ಕೆ ಒಂದೆಡೆ ಜಿಲ್ಲಾಡಳಿತ ಚಿಂತನೆ: ಇನ್ನೊಂದೆಡೆ ಅಕ್ರಮ ಗಣಿಗಾರಿಕೆ ಸಕ್ರಮಕ್ಕೆ ಶಾಸಕ ಒತ್ತಾಯ…

ಮಂಡ್ಯ,ಆ,28,2019(www.justkannada.in):  ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸಲು ಮಂಡ್ಯ ಜಿಲ್ಲಾಡಳಿತ ಚಿಂತನೆ ನಡೆಸಿದರೇ ಮತ್ತೊಂದೆಡೆ ಜಿಲ್ಲೆಯ ಅಕ್ರಮ ಗಣಿಗಾರಿಕೆ  ಸಕ್ರಮ ಮಾಡುವಂತೆ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಿದ್ದಾರೆ.

ಮಂಡ್ಯ  ತಾಲೂಕಿನ ಪಿ.ಹಳ್ಳಿ ಗ್ರಾಮದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ  ಶಾಸಕ ರವೀಂದ್ರ ಶ್ರೀಕಂಠಯ್ಯ, ಜಿಲ್ಲೆಯಲ್ಲಿ ಕೋಟ್ಯಾಂತರ ರೂ ಅಭಿವೃದ್ದಿ ಕಾಮಗಾರಿ ನಡೆಯ ಬೇಕಾದ್ರೆ ಜಲ್ಲಿ,ಕಲ್ಲು,ಮರಳು ಎಲ್ಲಿಂದ ತರ್ತೀರಾ? ಎಲ್ಲಾ ಕಡೆ ಅಕ್ರಮ ಎಂದು ಬೀಗ ಹಾಕಿದ್ರೆ ಏನ್ ಮಾಡಬೇಕು. ನಾನು ಹಿಂದಿನಿಂದಲೇ ಹೇಳ್ತಾ ಬರ್ತಾ ಇದ್ದೀನಿ ಅಕ್ರಮವನ್ನು ಸಕ್ರಮ ಮಾಡಿ. ಏನ್ ಲೋಪ ಇದೆ ಅದನ್ನ ಸರಿ ಮಾಡಿಕೊಂಡು ರಾಯಲ್ಟಿ ತಗೊಂಡು ಸಕ್ರಮ ಮಾಡಿ. ಈಗ ಮರಳು ಕೂಡ ಸಿಗ್ತಿಲ್ಲ, ಬಡವರು ಮನೆ ಕಟ್ಟೋದು ಹೇಗೆ?. ಅವ್ರಿಗೆ ಮರಳು ಸಿಗ್ತಿಲ್ಲ,ಎಂ ಸ್ಯಾಂಡ್ ಕೂಡ ಸಿಗೋದಿಲ್ಲ  ಅಂದ್ರೆ‌ಏನ್ ಮಾಡಬೇಕು ಎಂದು ಪ್ರಶ್ನಿಸಿದರು.

ಗಣಿಗಾರಿಕೆ ಅಂದ ತಕ್ಷಣ ಅದನ್ನ ಅಕ್ರಮ ಅನ್ನೋ ಭಾವನೆ ಬಿಡಬೇಕು. ನಮ್ಮ ಭಾಗದ ಅಭಿವೃದ್ಧಿ ಯಾಗಬೇಕಿದ್ರೆ ಗಣಿಗಾರಿಕೆ ಬಹಳ ಮುಖ್ಯ. ಅದನ್ನ ಸಕ್ರಮ ಮಾಡೋ ಜವಬ್ದಾರಿ ಜಿಲ್ಲಾಡಳಿತದ ಮೇಲಿದೆ.ಜವಾಬ್ದಾರಿ ಹೊತ್ತಂತವರು ಅದನ್ನ ಪ್ರಾಕ್ಟಿಕಲ್ ಆಗಿ ಅದನ್ನ  ಲೀಗಲೈಸ್ ಮಾಡಿ ರಾಯಲ್ಟಿ ತಗೊಂದು ಅದನ್ನ ರೆಗ್ಯೂಲೇಜ್ ಮಾಡಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದರು.

Key words: breakdown – illegal mining-mandya-urges-jds mla- ravindra