ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್.

ಗುಂಡ್ಲುಪೇಟೆ, ಡಿಸೆಂಬರ್,28,2022(www.justkannada.in): ಹೊಸ ವರ್ಷ ಸಂಭ್ರಮಕ್ಕೆ ಇನ್ನೆರಡು ಮೂರು ದಿನಗಳಷ್ಟೇ ಬಾಕಿ ಇದ್ದು ಈ ನಡುವೆ  ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ.

ಡಿಸೆಂಬರ್ 31 ಹಾಗೂ ಜನವರಿ 1 ರಂದು ಅರಣ್ಯ ಇಲಾಖೆಯ ಡಾರ್ಮೆಟರಿಗಳು, ಕಾಟೇಜ್ ಗೆಸ್ಟ್ ಹೌಸ್‌ಗಳಲ್ಲಿ ವಾಸ್ತವ್ಯಕ್ಕೆ  ನಿರ್ಬಂಧ ವಿಧಿಸಲಾಗಿದೆ.  ಆನ್‌ ಲೈನ್ ಬುಕಿಂಗ್ ಕೂಡಾ ಬ್ಲಾಕ್ ಮಾಡಲಾಗಿದೆ.

ಡಿಸೆಂಬರ್ 31 ಹಾಗೂ ಜನವರಿ 1 ಕ್ಕೆ ಬಂಡೀಪುರದಲ್ಲಿ ಮೋಜು-ಮಸ್ತಿಗಷ್ಟೇ ಬ್ರೇಕ್ ಹಾಕಲಾಗಿದ್ದು, ಎಂದಿನಂತೆ ಬೆಳಗ್ಗೆ ಹಾಗೂ ಸಂಜೆ ಸಫಾರಿ ಇರಲಿದೆ.  ಆದರೆ ವಾಸ್ತವ್ಯ ಹೂಡುವಂತಿಲ್ಲ ಎಂದು  ಬಂಡೀಪುರ CF ಡಾ.ರಮೇಶ್ ಕುಮಾರ್ ಹೇಳಿದ್ದಾರೆ.

Key words: Break – New Year- celebrations – Bandipur.