ನನಗೆ 3 ವರ್ಷದ ಮಗಳಿದ್ದಾಳೆ; ಆದರೆ ಮದುವೆಯಾಗಿಲ್ಲ ಎಂದು ಬಹಿರಂಗಪಡಿಸಿದ ನಟಿ ಮಹಿ ಗಿಲ್

Promotion

ಮುಂಬೈ:ಜುಲೈ-4(www.justkannada.in) ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಹಾಗೂ ಖಾಸಗಿ ಜೀವನದ ಕುರಿತ ಕೆಲ ವಿಚಾರಗಳನ್ನು ಇತ್ತೀಚಿನ ದಿನಗಳಲ್ಲಿ ಬಹಿರಂಗ ಪಡಿಸುತ್ತಾ, ತಾವೆಷ್ಟು ಬೋಲ್ಡ್ ಎಂಬುದನ್ನು ತೋರಿಸುತ್ತಿದ್ದಾರೆ. ಅದರಲ್ಲೂ ಈ ವಿಚಾರದಲ್ಲಿ ಬಾಲಿವುಡ್ ಸೆಲೆಬ್ರೆಟಿಗಳು ಒಂದು ಹೆಜ್ಜೆ ಮುಂದೆ ಎನ್ನಬಹುದು. ಇತ್ತೀಚೆಗೆ ಬಾಲಿವುಡ್ ನಟಿ ಮಹಿ ಗಿಲ್ ತನಗೆ ಮೂರು ವರ್ಷದ ಮಗಳಿದ್ದಾಳೆ. ಆದರೆ ತಾನಿನ್ನೂ ಮದುವೆಯಾಗಿಲ್ಲ ಎಂದು ಹೇಳಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಮಹಿ ಗಿಲ್, ಈ ವಿಷಯ ಹೇಳಿದ್ದು, ತಾನು 3 ವರ್ಷಗಳ ಹಿಂದೆ ಹೆಣ್ಣುಮಗುವೊಂದಕ್ಕೆ ಜನ್ಮ ನೀಡಿದ್ದು, ಆದರೆ ತನಗಿನ್ನೂ ವಿವಾಹವಾಗಿಲ್ಲ. ನನಗೆ ಯಾವಾಗ ಮದುವೆಯಾಗಬೇಕು ಎನ್ನಿಸುತ್ತದೆಯೋ ಆಗ ಆಗುತ್ತೇನೆ ಎಂದಿದ್ದಾರೆ. ಅಲ್ಲದೇ ನನ್ನ ಮಗಳ ಹೆಸರು ವೆರೋನಿಕಾ. ಅವಳು ನನ್ನೊಂದಿಗೆ ಮುಂಬೈನಲ್ಲಿಯೇ ವಾಸವಾಗಿದ್ದಾಗಿ ತಿಳಿಸಿದ್ದಾರೆ.

ನಾನು ಸಿಂಗಲ್​ ಪೇರೆಂಟ್​ ಆಗಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಯಾಕೆ ನಾನು ಮದುವೆಯಾಗಲೇಬೇಕು. ನನಗೆ ಹೀಗೆ ಸಿಂಗಲ್​ ಆಗಿ ಇರುವುದೇ ತುಂಬ ಇಷ್ಟ. ಮದುವೆಯಾಗದೆಯೇ ಸಂತೋಷದಿಂದ ಇರಬಹುದು ಎಂದು ನನಗೆ ಅನ್ನಿಸುತ್ತದೆ. ಮಕ್ಕಳಿಗಾಗಿ ಮದುವೆಯೇ ಆಗಬೇಕು ಎಂದೇನೂ ಇಲ್ಲ. ವಿವಾಹ ಎಂಬುದು ಅತ್ಯಂತ ಸುಂದರ ಪದ್ಧತಿ. ಆದರೆ ಇದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಯಾಗಿರುತ್ತದೆ ಎಂದಿದ್ದಾರೆ ಮಹಿ ಗಿಲ್.

ನನ್ನ ಪಾಲಿಗೆ ಪ್ರೀತಿಯೆಂಬುದು ಅತ್ಯಂತ ಮುಖ್ಯ. ನನ್ನನ್ನು ಪ್ರೀತಿಸುವವರು ನನಗೆ ಬೇಕು. ಅವರು ನನ್ನನ್ನು ನಂಬಬೇಕು. ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡಬಾರದು. ಅಂತಹವನನ್ನು ನಾನು ಈಗಾಗಲೇ ಕಂಡುಕೊಂಡಿದ್ದೇನೆ. ನನ್ನ ಪ್ರಿಯಕರ ಗೋವಾದಲ್ಲಿ ವಾಸವಾಗಿದ್ದಾನೆ. ನಾವಿಬ್ಬರೂ ಲಿವ್​-ಇನ್​ ಸಂಬಂಧದಲ್ಲಿ ಇದ್ದೇವೆ. ಕೆಲ ಕಾಲಗಳ ಬಳಿಕ ಮದುವೆಯಾಗಬಹುದು ಎಂದು ಹೇಳಿದ್ದಾರೆ.

ನನಗೆ 3 ವರ್ಷದ ಮಗಳಿದ್ದಾಳೆ; ಆದರೆ ಮದುವೆಯಾಗಿಲ್ಲ ಎಂದು ಬಹಿರಂಗಪಡಿಸಿದ ನಟಿ ಮಹಿ ಗಿಲ್
Bollywood,Mahie Gill,reveals she has 3-year-old daughter,but not married yet