‘ಬಾಲಿವುಡ್ ಬಿಗ್ ಬಿ’ ಅಮಿತಾಬ್ ಮನಗೆದ್ದ ಬಿರಾದಾರ !

kannada t-shirts

ಮೈಸೂರು, ಅಕ್ಟೊಬರ್,09,2020 (www.justkannada.in): ಹಿರಿಯ ನಟ ಬಿರಾದಾರ ಅವರು ಈಗ ಲಿವಿಂಗ್ ಲೆಜೆಂಡ್ ಅಮಿತಾಬ್ ಬಚ್ಚನ್ ಅವರರ ಮನಗೆದ್ದಿದ್ದಾರೆ.

ಸಿನಿಮಾಗಳಲ್ಲಿ ಕುಡುಕ, ಭಿಕ್ಷುಕ ನಂತಹ ಪಾತ್ರಗಳಲ್ಲಿ ಸಹಜ ನಟನೆ ನೀಡುವ ,ಹರಿದ ಮಾಸಿದ ಬಟ್ಟೆಯಲ್ಲಿಯೇ ಪಾತ್ರಕ್ಕೆ ಮೆರಗು ನೀಡುವ ಬಿರಾದಾರ ಅವರ ನಟನೆಗೆ ಫಿದಾ ಆಗದವರೇ ಇಲ್ಲ. ಇವರ ಪ್ರತಿಭೆಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಕೂಡ ತಲೆದೂಗಿದ್ದಾರೆ.

ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ‌‌ ಕನಸೆಂಬ ಕುದುರೆಯೇರಿ ಸಿನಿಮಾದಲ್ಲಿನ ನಟನೆಗಾಗಿ ಬಿರಾದಾರ ಅವರಿಗೆ ಸ್ಪೇನ್ ನ ಮ್ಯಾಡ್ರಿಟ್ ನಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.

ಈ ಸುದ್ದಿ ಅಮಿತಾಬ್ ಅವರಿಗೆ ತಲುಪಿದ ಕೂಡಲೇ ವೈಜನಾಥ ಬಿರಾದಾರ ಅವರಿಗೆ ಕರೆ ಮಾಡಿ ಭಾರತೀಯರೊಬ್ಬರಿಗೆ ಈ ಪ್ರಶಸ್ತಿ ದೊರಕಿದ್ದು ನಮಗೆ ಹೆಮ್ಮೆ ಎಂದು ಅಭಿನಂದಿಸಿದ್ದಾರೆ.

website developers in mysore