‘ಪೈಲ್ವಾನ್’ಗೆ ವಿಶ್ ಮಾಡಿದ ಬಾಲಿವುಡ್ ಭಾಯಿಜಾನ್: ವೀಡಿಯೋ ವೈರಲ್

ಬೆಂಗಳೂರು, ಸೆಪ್ಟೆಂಬರ್ 03, 2019 (www.justkannada.in): ನಟ ಕಿಚ್ಚ ಸುದೀಪ್ ಹುಟ್ಟು ಹಬ್ಬದ ಜತೆಗೆ ಪೈಲ್ವಾನ್ ಚಿತ್ರಕ್ಕೆ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ವಿಶ್ ಮಾಡಿದ್ದಾರೆ.

‘ಪೈಲ್ವಾನ್’​ನ ಬರ್ತ್​ಡೇ ಸುಲ್ತಾನ್ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ. ಸಲ್ಮಾನ್ ಖಾನ್ ತಮ್ಮ ಎಸ್​ಕೆಎಫ್ ಟ್ವಿಟರ್​ ಅಕೌಂಟ್’ನಲ್ಲಿ ಸುದೀಪ್ ಗೆ ಶುಭಾಶಯ ತಿಳಿಸಿದ್ದಾರೆ.

ಈ ಶುಭಾಶಯದ ವಿಡಿಯೋದಲ್ಲಿ ಸಲ್ಲು ಜೊತೆ ಪ್ರಭುದೇವ, ಅರ್ಬಾಜ್ ಖಾನ್ ಕೂಡ ವಿಶ್ ಮಾಡಿದ್ದಾರೆ. ಅದಕ್ಕಿಂತಲೂ ಸಲ್ಮಾನ್ ಸಹೋದರ ಅರ್ಬಾಜ್ ನೀವು ನಮ್ಮ ಸಿನಿಮಾದ ಭಾಗವಾಗಿದ್ದೆ ಧನ್ಯವಾದಗಳು. ನೀವೊಬ್ಬರು ಅದ್ಭುತ ವ್ಯಕ್ತಿ ಎಂದು ಹೊಗಳಿದ್ದಾರೆ.