ಬಿಎಂಎಸ್ ಟ್ರಸ್ಟ್ ಹಗರಣ: ಸ್ಪೀಕರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ  ವಿಫಲ.

Promotion

ಬೆಂಗಳೂರು,ಸೆಪ್ಟಂಬರ್,23,2022(www.justkannada.in):  ಬಿಎಂಎಸ್ ಟ್ರಸ್ಟ್ ಹಗರಣವನ್ನ ತನಿಖೆಗೆ ಆದೇಶಿಸುವಂತೆ ಜೆಡಿಎಸ್ ಪಟ್ಟು ಹಿಡಿದಿದ್ದು ಈ ಸಂಬಂಧ ಸ್ಪೀಕರ್ ನೇತೃತ್ವದಲ್ಲಿ ನಡೆದ ಸಂದಾನ ಸಭೆ ವಿಫಲವಾಗಿದೆ.

ಸದನ ಆರಂಭವಾಗುತ್ತಿದ್ದಂತೆ ಬಿಎಂಎಸ್ ಟ್ರಸ್ಟ್ ಹಗರಣ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಜೆಡಿಎಸ್ ಸದಸ್ಯರು ಪ್ರತಿಭಟನೆಗಿಳಿದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ   ಜೆಡಿಎಸ್ ಮತ್ತು ವಿಪಕ್ಷ ನಾಯಕರ ಜೊತೆ ಸಂಧಾನ ಸಭೆ ನಡೆಸಿದರು.

ಸಿಬಿಐ ತನಿಖೆಗೆ ವಹಿಸುವಂತೆ ಸಭೆಯಲ್ಲಿ ಜೆಡಿಎಸ್ ನಾಯಕರು ಪಟ್ಟುಹಿಡಿದರು. ಆದರೆ ತನಿಖೆಗೆ ವಹಿಸಲು ಸರ್ಕಾರ ಒಪ್ಪದ ಹಿನ್ನೆಲೆ 45 ನಿಮಿಷಗಳ ಕಾಲ ನಡೆದ ಸಂಧಾನ ಸಭೆ ವಿಫಲವಾಯಿತು.

ಈ ಹಿನ್ನೆಲೆಯಲ್ಲಿ ಸದನದಲ್ಲಿ ಜೆಡಿಎಸ್ ಸದಸ್ಯರು ಧರಣಿ ಮುಂದುವರೆಸಲು ನಿರ್ಧರಿಸಿದ್ದಾರೆ. ಧರಣಿ ಹಿಂಪಡೆಯುವಂತೆ ಸ್ಪೀಕರ್ ಕಾಗೇರಿ ಜೆಡಿಎಸ್ ಸದಸ್ಯರಿಗೆ ಮನವಿ ಮಾಡಿದರು.

Key words: BMS-Trust –Scam- meeting – Speaker –failed-jds