ಆನ್‌ ಲೈನ್ ತರಗತಿಗಳನ್ನು ಬ್ಲಾಕ್ ಮಾಡಿದ ಹಿನ್ನೆಲೆ:  ಖಾಸಗಿ ಶಾಲಾ ಆಡಳಿತ ಮಂಡಳಿ ಸದಸ್ಯರಿಗೆ ಸಮನ್ಸ್

ಬೆಂಗಳೂರು, ಜುಲೈ 14, 2021 (www.justkannada.in): ರಾಜ್ಯದಲ್ಲಿ ಹಾಲಿ 2021-22 ರ ಶೈಕ್ಷಣಿಕ ವರ್ಷದ ಶಾಲಾ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ಮಕ್ಕಳ ಆನ್‌ ಲೈನ್ ತರಗತಿಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಆರೋಪಿಸಿ ಪೋಷಕರು ನೀಡಿರುವ ದೂರುಗಳನ್ನು ಆಧರಿಸಿ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್) ಸುಮಾರು 14 ಖಾಸಗಿ ಶಾಲಾ ಆಡಳಿತ ಮಂಡಳಿಗಳ ವಿಚಾರಣೆ ನಡೆಸಿದೆ.jk

ಕೆಎಸ್‌ಸಿಪಿಸಿಆರ್ ಅಧ್ಯಕ್ಷ ಫಾ. ಆಂಥೋನಿ ಸೆಬಸ್ಟಿನ್ ಅವರ ಪ್ರಕಾರ, ದೂರಿನಲ್ಲಿರುವ ಬಹುಪಾಲು ಶಾಲೆಗಳು ಸೆಂಟ್ರಲ್ ಬೋರ್ಡ್ ಗೆ ಸೇರಿರುವ ಶಾಲೆಗಳಾಗಿವೆ. ಆಯೋಗದಿಂದ ಒಟ್ಟು 19 ಶಾಲಾ ಆಡಳಿತ ಮಂಡಳಿಗಳನ್ನು ಕರೆಸಿ ಎರಡು ದಿನಗಳ ಕಾಲ ವಿಚಾರಣೆ ನಡೆಸಲಾಯಿತು. “ಆಯೋಗದ ಮುಂದೆ ಹಾಜರಾದ ಎಲ್ಲಾ ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳು ನಮ್ಮ ಆದೇಶದ ಪ್ರಕಾರ ಬ್ಲಾಕ್ ಮಾಡಿರುವ ಆನ್‌ ಲೈನ್ ತರಗತಿಗಳನ್ನು ತೆರವುಗೊಳಿಸುವುದಾಗಿ ತಿಳಿಸಿದ್ದಾರೆ. ಇದನ್ನು ಪಾಲಿಸದೆ ಇರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಂತಹ ಶಾಲೆಗಳ ‘ನಿರಾಕ್ಷೇಪಣಾ ಪ್ರಮಾಣಪತ್ರ’ವನ್ನು (No Objection Certificate) ರದ್ದುಪಡಿಸುವಂತೆ ಬಿಇಒಗಳಿಗೆ ಶಿಫಾರಸ್ಸು ಮಾಡಲಾಗುವುದು,” ಎಂದು ತಿಳಿಸಿದ್ದಾರೆ.

ಈ ನಡುವೆ, ಕೆಲವು ಪೋಷಕರು ಶಾಲಾ ಶುಲ್ಕಕ್ಕೆ ಸಂಬಂಧಿಸಿದಂತೆ ವಿವರವಾದ ಬ್ರೇಕ್ ಅಪ್ ಜೊತೆಗೆ ಶುಲ್ಕ ಪಾವತಿಸಲು ಕೊನೆಯ ದಿನಾಂಕದ ವಿವರಗಳನ್ನು ನೀಡುವಂತೆ ಶಾಲಾ ಆಡಳಿತ ಮಂಡಳಿಗಳನ್ನು ಕೋರಿದ್ದಾರೆ. “ಈ ವಿವರಗಳು ಸಾರ್ವಜನಿಕ ವೇದಿಕೆಯಲ್ಲಿರಬೇಕು, ಅದು ಶಾಲೆಯ ವೆಬ್‌ಸೈಟ್ ಆಗಿರಬಹುದು ಅಥವಾ ಮತ್ಯಾವುದಾದರೂ ವೇದಿಕೆಯಾಗಿರಬಹುದು. ಇಂತಹ ಕ್ರಮ ಪಾರದರ್ಶಕತೆ ನಿರ್ವಹಣೆಗೆ ದಾರಿ ಮಾಡಿಕೊಡುತ್ತದೆ ಮತ್ತು ಭವಿಷ್ಯದಲ್ಲಿ ಬದ್ಧತೆಯ ವಿಷಯಗಳು ಎದುರಾಗದಿರುವಂತೆ ಮಾಡುತ್ತದೆ. ಒಂದೇ ತರಗತಿಯ ಬೇರೆ ಬೇರೆ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಶುಲ್ಕಗಳನ್ನು ವಿಧಿಸಿರುವ ಪ್ರಕರಣಗಳೂ ಸಹ ಇವೆ. ಎನ್ನುತ್ತಾರೆ ಬೆಂಗಳೂರಿನ ಒಂದು ಶಾಲೆಯ ಪೋಷಕ ಪ್ರತಿನಿಧಿ.

ಸುದ್ದಿ ಮೂಲ: ಇಂಡಿಯನ್ ಎಕ್ಸ್ ಪ್ರೆಸ್

Key words: blocks -online –classes-Summons – private school -board members