ಸಾರಿಗೆ ನಿಗಮದ ಉದ್ಯೋಗಿಗಳಿಗೆ ಈ ಬಾರಿಯ ದಸರಾ ಸಂಭ್ರಮದಾಯಕವಾಗಿರಲಿಲ್ಲ…

kannada t-shirts

ಬೆಂಗಳೂರು, ಅಕ್ಟೋಬರ್ 16, 2021 (www.justkannada.in): ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಉದ್ಯೋಗಿಗಳಿಗೆ ಈ ಬಾರಿಯ ದಸರಾ ಹಬ್ಬ ಆಚರಣೆ ಅಷ್ಟು ಸಂಭ್ರಮದಾಯಕವಾಗಲಿ,  ಸಂತೋಷದಾಕಯವಾಗಲೀ ಇರಲಿಲ್ಲ. ವೇತನ ಪಾವತಿಯಲ್ಲಿ ವಿಳಂಬ ಹಾಗೂ ಉದ್ಯೋಗದಿಂದ ವಜಾಗೊಳಿಸಿದ ಉದ್ಯೋಗಿಗಳಿಗೆ ನಿರುದ್ಯೋಗದ ಸಮಸ್ಯೆ, ಪ್ರತಿಭಟನೆಗಳು ಇವೆಲ್ಲಾ ಕಾರಣಗಳಿಂದಾಗಿ ಸಾರಿಗೆ ಇಲಾಖೆ ಉದ್ಯೋಗಿಗಳ ಹಬ್ಬದ ಆಚರಣೆಯ ಉತ್ಸಾಹವನ್ನೇ ಕುಗ್ಗಿಸಿದೆ…

ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಬಸ್ ಚಾಲಕರು ಹಾಗೂ ನಿರ್ವಾಹಕರು ಈ ಸಂಬAಧ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಬಾರಿ ಆಯುಧಪೂಜೆ ಹಬ್ಬದ ಸಂದರ್ಭದಲ್ಲಿ ಯಾವ ರೀತಿ ಅವರು ಬಸ್ಸುಗಳನ್ನು ಅಲಂಕರಿಸಲು ಬೇಕಾಗುವ ಹೂವಿನ ಹಾರ, ಬಾಳೆಕಂಬ ಇತರೆ ಸಾಮಗ್ರಿಗಳನ್ನು ತಮ್ಮ ಸ್ವಂತ ಹಣದಿಂದ ಖರೀದಿಸಬೇಕಾಯಿತು, ಮತ್ತು ಪೂಜೆಗೂ ಸಹ ತಮ್ಮ ಕಿಸೆಯಿಂದಲೇ ಹಣವನ್ನು ಖರ್ಚು ಮಾಡಬೇಕಾಯಿತು ಎಂದು ತಿಳಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಅನೇಕರು ಈ ಬಾರಿ ಹಬ್ಬವನ್ನೇ ಆಚರಿಸಿಲ್ಲವಂತೆ.
ಬಿಎAಟಿಸಿಯ ಉದ್ಯೋಗಿ ಹಾಗೂ ಕಾರ್ಮಿಕರ ಸಂಘಟನೆಯೊಂದರ ನಾಯಕರೂ ಆಗಿರುವ ಚಂದ್ರು ಅವರು ಈ ಕುರಿತು ಮಾತನಾಡುತ್ತಾ, “ಈ ಹಿಂದೆ ಬಿಎಂಟಿಸಿ ಪ್ರತಿಯೊಂದು ಬಸ್ಸಿಗೆ ಅಲಂಕಾರಕ್ಕೆ ಹಾಗೂ ಪೂಜಾ ವೆಚ್ಚಕ್ಕೆಂದು ಡಿಪೋ ನಿರ್ವಾಹಕರು ಹಾಗೂ ಅವರ ತಂಡಕ್ಕೆ ಕನಿಷ್ಠ ರೂ.೧೦೦ ನ್ನಾದರೂ ನೀಡುತಿತ್ತು. ಈ ವರ್ಷ ಏನೂ ನೀಡಲಿಲ್ಲ,” ಎಂದರು.

“ನಾನು ಮಾಡುವ ಕೆಲಸಕ್ಕೆ ವೇತನ ಪಡೆಯುವುದು ನನ್ನ ಹಕ್ಕು. ಮೇಲಾಗಿ, ನಾವು ವೇತನ ಪಾವತಿ ಕುರಿತಂತೆ ಪ್ರತಿಭಟನೆ ನಡೆಸುವವರೆಗೂ ಸಹ ಸರ್ಕಾರ ಆಗಸ್ಟ್ ತಿಂಗಳ ವೇತನದಲ್ಲಿ ಕೇವಲ ಅರ್ಧದಷ್ಟು ವೇತನ ಮೊತ್ತವನ್ನು ಮಾತ್ರ ಬಿಡುಗಡೆ ಮಾಡಿತು,” ಎನ್ನುವುದು ಬಿಎಂಟಿಸಿ ಕಾರ್ಮಿಕರ ಸಂಘಟನೆಯ ಸದಸ್ಯ ಜಯಂತ್ ಅವರ ಅಭಿಪ್ರಾಯವಾಗಿದೆ. ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡಿದರೆ ಅದು ‘ಬಂಪರ್ ಉಡುಗೊರೆ’ ಆಗುವುದಿಲ್ಲ, ಎಂದರು.

ಸಾಂಕ್ರಾಮಿಕದ ಅವಧಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಪೈಕಿ ಅನೇಕರನ್ನು ಕೆಲಸದಿಂದ ವಜಾಗೊಳಿಸಿರುವ ಉದ್ಯೋಗಿಗಳ ಕುರಿತಾಗಿಯೂ ಅವರು ಮಾತನಾಡಿದರು. ಚಂದ್ರು ಅವರು ತಿಳಿಸಿದಂತೆ, “ಬಿಎಂಟಿಸಿ ಒಂದರಲ್ಲೇ ೧,೧೭೦ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಒಟ್ಟು ಎಲ್ಲಾ ನಾಲ್ಕು ಸಾರಿಗೆ ನಿಗಮಗಳಲ್ಲಿಯೂ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಣ ನೀಡಿ ಒಟ್ಟು ೨,೧೭೦ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.”
“ಇತ್ತೀಚೆಗೆ ವಜಾಗೊಂಡ ಉದ್ಯೋಗಿಗಳ ಪೈಕಿ ಹಲವು ಕುಟುಂಬಗಳ ಸದಸ್ಯರು ಅಥವಾ ಸ್ವತಃ ಉದ್ಯೋಗಿಗಳೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವ ಘಟನೆಗಳೂ ಜರುಗಿವೆ. ಈ ವಿಚಾರವನ್ನು ಸಂಚಾರ ಇಲಾಖೆಯ ಸಚಿವರ ಗಮನಕ್ಕೂ ತರಲಾಗಿದೆ. ಆದರೆ ಈವರೆಗೂ ನಮಗೆ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ,” ಎನ್ನುತ್ತಾರೆ ಚಂದ್ರು.

“ರಾಜ್ಯ ಸಾರಿಗೆ ಇಲಾಖೆಯ ಸಚಿವರಾದ ಬಿ. ಶ್ರೀರಾಮುಲು ಅವರು ಈ ಹಿಂದೆ ಸಾಂಕ್ರಾಮಿದಿAದಾಗಿ ಸಾರಿಗೆ ಇಲಾಖೆಯ ಯಾವುದೇ ಉದ್ಯೋಗಿಯೂ ಸಹ ತೊಂದರೆಯನ್ನು ಎದುರಿಸಲು ಬಿಡುವುದಿಲ್ಲ ಎಂದು ತಿಳಿಸಿದ್ದರು. ಮಾನ್ಯ ಸಚಿವರ ಆದೇಶದ ಹೊರತಾಗಿಯೂ ಮೇಲ್ಮಟ್ಟದ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಬೋರ್ಡ್ ಸಭೆಯಲ್ಲಿ ವಜಾಗೊಳಿಸಿರುವಂತಹ ಉದ್ಯೋಗಿಗಳನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವ ಕುರಿತು ಚರ್ಚಿಸಲಾಗಿದೆ, ಆದರೆ ಆದೇಶದ ಅನುಷ್ಠಾನದ ಕುರಿತು ಇನ್ನೂ ಸ್ಪಷ್ಟತೆಯಿಲ್ಲ,” ಎಂದು ಚಂದ್ರು ವಿವರಿಸಿದರು.

ಈ ನಡುವೆ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಅವರು ಈ ಸಂಬಂಧ ಮಾತನಾಡಿ, “ಹಣಕಾಸಿನ ತೊಂದರೆ ನಮ್ಮ ಇಲಾಖೆಯೂ ಒಳಗೊಂಡAತೆ ಎಲ್ಲಾ ಇಲಾಖೆಗಳಲ್ಲಿಯೂ ಇದೆ. ನಾವು ಸರ್ಕಾರದಿಂದ ಹಣ ಪಡೆಯಲು ನಮ್ಮ ಕೈಯಲ್ಲಿ ಸಾಧ್ಯವಾದಷ್ಟೂ ಪ್ರಯತ್ನಿಸುತ್ತಿದ್ದೇವೆ. ಉದ್ಯೋಗಿಗಳ ಕುರಿತು ಯಾವುದೇ ನಿರ್ಲಕ್ಷö್ಯ ಧೋರೆಣೆಯನ್ನು ನಾವು ಹೊಂದಿಲ್ಲ. ಪ್ರತಿ ದಿನ ನಮಗೆ ರೂ.೨ ಕೋಟಿ ನಷ್ಟವುಂಟಾಗುತ್ತಿದೆ. ನಮ್ಮ ಉದ್ಯೋಗಿಗಳೂ ಸಹ ನಮ್ಮೊಂದಿಗೆ ಸಹಕರಿಸುತ್ತಿದ್ದಾರೆ,” ಎಂದು ವಿವರಿಸಿದ್ದಾರೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್

https://bangaloremirror.indiatimes.com/bangalore/crime/bleak-dasara-for-transport-corporation-employees/articleshow/87047130.cms

website developers in mysore