ಸಚಿವ ವಿ.ಸೋಮಣ್ಣಗೆ ಕಪ್ಪು ಬಾವುಟ ಪ್ರದರ್ಶನ: ಪೊಲೀಸರ ವಿರುದ್ಧ ಕೆಂಡಾಮಂಡಲ.

ಚಾಮರಾಜನಗರ,ಸೆಪ್ಟಂಬರ್,28,2022(www.justkannada.in):  ಚಾಮರಾಜನಗರ ದಸರಾ ಮಹೋತ್ಸವ ಉದ್ಘಾಟನೆ ವೇಳೆ ಉಸ್ತುವಾರಿ ಸಚಿವ ಸೋಮಣ್ಣ ಅವರಿಗೆ ಕಪ್ಪುಬಾವುಟ ಪ್ರದರ್ಶಿಸಿರುವ ಘಟನೆ ನಡೆದಿದೆ.

ಚಾಮರಾಜನಗರ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ವೇಳೆ ಈ  ಘಟನೆ ನಡೆದಿದೆ. ಉದ್ಘಾಟನೆ ವೇಳೆ ವೇದಿಕೆಯಲ್ಲಿದ್ದಾಗ ಸಚಿವ ವಿ.ಸೋಮಣ್ಣಗೆ ನಗರಸಭಾ ಸದಸ್ಯ ಆರ್ ಪಿ ನಂಜುಂಡಸ್ವಾಮಿ ವೇದಿಕೆ ಏರಿ ಏಕಾಏಕಿ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.

ದಸರಾ ದೀಪಾಲಂಕಾರ ಅವ್ಯವಸ್ಥೆ ಖಂಡಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದು, ನಗರಸಭಾ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಕೆಂಡಾಮಂಡಲರಾದ ಸಚಿವ ಸೋಮಣ್ಣ, ಪೊಲೀಸರು ಏನು ಕತ್ತೆ ಕಾಯುತ್ತಿದ್ದೀರಾ, ಯಾವ ರೀತಿ ವ್ಯವಸ್ಥೆ ಮಾಡಿದ್ದೀರಾ ಎಂದು ರೇಗಾಡಿದರು.

ನಾನು ಒಂದು ಸಾರಿ ಬಾವುಟ ಹಾರಿಸಿ ವರ್ಷಾನುಗಟ್ಟಲೆ ಏಳಲಿಲ್ಲ. ಕಪ್ಪು ಬಾವುಟ ಪ್ರದರ್ಶಿಸುವುದು ದೊಡ್ಡದ್ದಲ್ಲ. ಯಾವುದೋ ಕೆಟ್ಟ ಉದ್ದೇಶ ಇಟ್ಟುಕೊಂಡು ಕಪ್ಪು ಬಾವುಟ ಪ್ರದರ್ಶಿಸಿದ ವ್ಯಕ್ತಿಯನ್ನು ಸುಮ್ಮನೇ ಬಿಡುವುದಿಲ್ಲ.  ತಾಯಿ ಚಾಮುಂಡೇಶ್ವರಿ ದುಷ್ಟರನ್ನು ಸಂಹಾರ ಮಾಡಿದಂತೆ ಇಂತಹವರನ್ನು ಸಂಹಾರ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಸಚಿವ ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.

Key words: Black flag – Minister -V. Somanna-chamarajanagar