ಬಿಜೆಪಿ ಸುಳ್ಳಿನ ವಿಶ್ವ ವಿದ್ಯಾನಿಲಯ: ಮಹಾದಾಯಿ ವಿಚಾರದಲ್ಲಿ ಮೂರುವರೆ ವರ್ಷ ಏನು ಮಾಡಲಿಲ್ಲ-ಡಿ.ಕೆ ಶಿವಕುಮಾರ್.

ಹುಬ್ಬಳ್ಳಿ,ಜನವರಿ,2,2022(www.justkannada.in): ಬಿಜೆಪಿ ಸುಳ್ಳಿನ ವಿಶ್ವ ವಿದ್ಯಾನಿಲಯ.  ಮಹಾದಾಯಿ ವಿಚಾರದಲ್ಲಿ ಮೂರುವರೆ ವರ್ಷ ಏನು ಮಾಡಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.

ಈ ಕುರಿತು ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್,  ಬಿಜೆಪಿಯವರು ಅಪರೇಷನ್ ಕಮಲ ಮಾಡಿ ನಮ್ಮವರನ್ನ ಸೆಳೆದುಕೊಂಡಿದ್ದಾರೆ. ರೈತರು ಸಂಘಟನೆಗಳು ಕಲಾವಿದರು ಹೋರಾಟ ಮಾಡಿದ್ದಾರೆ. ನಾವು ಧ್ವನಿ ಎತ್ತಿ ಹೋರಾಟ ಮಾಡಿ ಮಹಾದಾಯಿ ವಿಚಾರ ಒಂದು ಹಂತಕ್ಕೆ ತಂದಿದ್ದೇವೆ. ರಾಜ್ಯದಲ್ಲಿ 26 ಬಿಜೆಪಿ ಸಂಸದರು ಇದ್ದಾರೆ.  ಸುಮಲತಾ ಅಂಬರೀಶ್ ಬಿಜೆಪಿಯ ಅಸೋಸಿಯೇಟ್ ಮೆಂಬರ್. ಡಿಕೆ ಸುರೇಶ್, ಪ್ರಜ್ವಲ್ ರೇವಣ್ಣ ಬಿಟ್ಟು ಬಿಡಿ. ಉಳಿದ 26 ಸಂಸದರು ಯಾಕೆ ಪ್ರಧಾನಿ ಭೇಟಿಯಾಗಿಲ್ಲ…? ಎಂದು ಪ್ರಶ್ನಿಸಿದರು.

ಇನ್ನು ಮತ್ತೆ ಅಧಿಕಾರದ ಆಸೆ ವ್ಯಕ್ತಪಡಿಸಿದ  ಡಿ.ಕೆ ಶಿವಕುಮಾರ್, ಸಿಎಂ ಹುದ್ದೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ರಾಹುಲ್ ಗಾಂಧಿ ತೀರ್ಮಾನ ಕೈಗೊಳ್ಳುತ್ತಾರೆ. ಹೈಕಮಾಂಡ್ ಏನು ಹೇಳುತ್ತೆ ಅದು ನಮಗೆ ಪ್ರಸಾದ. ಸಿಎಂ ಆಗುವುದರ ಬಗ್ಗೆ ಹೈ ಕಮಾಂಡ್ ನಿರ್ಧರಿಸುತ್ತದೆ ಎಂದರು.

Key words:  BJP – university -lies-Mahadayi – DK Shivakumar.