ಬಿಜೆಪಿಯವರು ಕಳೆದ 10 ವರ್ಷದಲ್ಲಿ 11 ಸರ್ಕಾರ ಕೆಡವಿದ್ದಾರೆ- ಸಚಿವ ಸಂತೋಷ್ ಲಾಡ್ ವಾಗ್ದಾಳಿ

Promotion

ಬೆಳಗಾವಿ,ಅಕ್ಟೋಬರ್,4,2023(www.justkannada.in):  ಸಂಕ್ರಾಂತಿ ವೇಳೆಗೆ ಸರ್ಕಾರ ಪತನವಾಗಲಿದೆ ಎಂದು ಹೇಳಿಕೆ ನೀಡಿದ್ದ ಸಿ.ಪಿ ಯೋಗೇಶ್ವರ್ ಗೆ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ‘ಸಚಿವ ಸಂತೋಷ್​ ಲಾಡ್, ಭವಿಷ್ಯ ‌ನುಡಿಯುವ ಶಕ್ತಿ ನಮಗಿಲ್ಲ. ಸಂವಿಧಾನ ಬದ್ಧವಾಗಿ ರಾಜ್ಯದಲ್ಲಿ ಸರ್ಕಾರ ರಚನೆಯಾಗಿದೆ. ರಾಜ್ಯದಲ್ಲಿ ಹೇಗೆ ಸರ್ಕಾರ ಪತನವಾಗಲಿದೆ ಎಂದು ಅವರನ್ನೇ ಕೇಳಿ ಎಂದು ಟಾಂಗ್ ನೀಡಿದರು.

ಇನ್ನು ಇದೇ ವೇಳೆ ಟಾರ್ಗೆಟ್ ಮಾಡುವುದರಲ್ಲಿ ಬಿಜೆಪಿಯವರು ಬಹಳ ನಿಸ್ಸೀಮರು. ಕಳೆದ 10 ವರ್ಷದಲ್ಲಿ ಬಿಜೆಪಿಯವರು 11 ಸರ್ಕಾರ ಕೆಡವಿದ್ದಾರೆ. ಬಿಜೆಪಿಯವರು ಸಾವಿರಕ್ಕೂ ಹೆಚ್ಚು ಶಾಸಕರನ್ನು ಖರೀದಿ ಮಾಡಿದ್ದಾರೆ. 2024ಕ್ಕೆ ದೇಶದಲ್ಲಿ ಬಿಜೆಪಿ ಸರ್ಕಾರ ಇರಲ್ಲ ಎಂಬುದು ನಮ್ಮ ಅಭಿಪ್ರಾಯ ಎಂದರು.

Key words: BJP – toppled -11 governments – last 10 years – Minister- Santosh Lad