ಉಪ ಚುನಾವಣೆ ದಿಕ್ಕು ಬದಲಿಸಿದ ಕಮಲದ ಕಾರ್ಯತಂತ್ರ; ಶಿರಾದಲ್ಲಿ ಫಲಕೊಟ್ಟ ಸ್ಮಾರ್ಟ್‌ ಪಾಲಿಟಿಕ್ಸ್…

ಬೆಂಗಳೂರು,ನವೆಂಬರ್,10,2020(www.justkannada.in): ಉಪ ಚುನಾವಣೆಯಾದರೂ ಪ್ರತಿಷ್ಠಿತ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಬೋನಸ್‌ ಆಗಿ ಶಿರಾದಲ್ಲಿ ಅನುಕಂಪದ ಅಲೆಯನ್ನು ಹಿಂದಿಕ್ಕಿ ಮುನ್ನುಗ್ಗಿದೆ. ಸಹಜವಾಗಿಯೇ ಆಡಳಿತ ಪಕ್ಷದಲ್ಲಿ ಸಂತಸ ಮನೆ ಮಾಡಿದೆಯಲ್ಲದೆ, ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಇನ್ನಷ್ಟು ಸುಭದ್ರತೆ ಬಂದಿದೆ.kannada-journalist-media-fourth-estate-under-loss

ಕಾಂಗ್ರೆಸ್‌ ವಿರುದ್ಧ ಮುನಿಸಿಕೊಂಡು ಬಿಜೆಪಿ ಸೇರಿದ್ದ ಮುನಿರತ್ನ ಪಾಲಿಗೆ ಆರ್‌ಆರ್‌ ನಗರ ಸುಲಭದ ತುತ್ತಾಗಿರಲಿಲ್ಲ. ಹಾಗೆಯೇ; ಮತದಾರರಿರಲಿ, ಕಾರ್ಯಕರ್ತರ ಪ್ರಾಥಮಿಕ ಹಂತದ ಬೇಸ್‌ ಕೂಡ ಇಲ್ಲದ ಶಿರಾದಲ್ಲಿ ಕಮಲ ಅರಳಿದ್ದು ಮಾತ್ರ ಪವಾಡಸದೃಶ್ಯ ಬೆಳವಣಿಗೆಯೇ ಸರಿ ಎಂದು ವಿಶ್ಲೇಷಿಸಲಾಗುತ್ತಿದೆ.

ಹಾಗಾದರೆ, ಆಗಿದ್ದೇನು?

ಬಿಜೆಪಿ ಪಾಲಿಗೆ ಇವೆರಡೂ ಕ್ಷೇತ್ರಗಳನ್ನೂ ಸೋತಿದ್ದರೂ ನಷ್ಟವೇನೂ ಆಗುತ್ತಿರಲಿಲ್ಲ. ಕಳೆದ ಉಪ ಚುನಾವಣೆಯಲ್ಲೇ ಭರ್ಜರಿ ಗೆಲುವು ಸಾಧಿಸಿತ್ತು ಪಕ್ಷ. ಇದು ಅದರ ಮುಂದುವರಿದ ಅಧ್ಯಾಯವಷ್ಟೇ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಕಾಲಕ್ಕೆ ತಕ್ಕಂತೆ ಬದಲಾಗದೆ ಅದೇ ಹಳೆಯ ಸಾಂಪ್ರದಾಯಿಕ ಶೈಲಿಯನ್ನೇ ನೆಚ್ಚಿಕೊಂಡು ಅಖಾಡಕ್ಕಿಳಿದಿದ್ದವು. ಆದರೆ, ಬಿಜೆಪಿ ವ್ಯವಸ್ಥಿತವಾಗಿ ಕಣಕ್ಕಿಳಿದು ಪ್ರತೀ ಹಂತದಲ್ಲೂ ತನಗೆ ಅನಾನುಕೂಲವಾಗಿದ್ದ ಪರಿಸ್ಥಿತಿಯನ್ನೂ ಎದುರಿಸಿ ಗೆದ್ದಿತು ಎನ್ನಬಹುದು.

ಒಂದೇ ಸಾಲಿನಲ್ಲಿ ಹೇಳುವುದಾದರೆ; ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಪ್ರಚಾರಕ್ಕಷ್ಟೇ ಸೀಮಿತರಾಗಿ ಬೀದಿಬೀದಿ ಸುತ್ತಿ, ಮನೆಮನೆಗೂ ಹೋಗಿ ವೋಟು ಕೇಳಿದ್ದೇ ಬಂತು. ಅಂದರೆ; ಆ ಎರಡೂ ಪಕ್ಷಗಳು ಬರೀ ಚುನಾವಣೆಯನ್ನು ಚುನಾವಣೆಯಂತೆಯೇ ಎದುರಿಸಿದವು. ಬಿಜೆಪಿ ಪಕ್ಕಾ ಸ್ಟ್ರ್ಯಾಟಜಿ ಮಾಡಿಕೊಂಡು ಫೀಲ್ಡಿಗಿಳಿದಿತ್ತು. ಆರ್‌ಆರ್‌ ನಗರ ಮತ್ತು ಶಿರಾದಲ್ಲಿ ಫಲ ಕೊಟ್ಟಿದ್ದು ಇದೇ.

ಶಿರಾದಲ್ಲಿ ಸ್ಮಾರ್ಟ್ ಕಾರ್ಯತಂತ್ರ:

ಜೆಡಿಎಸ್‌ನ ಸತ್ಯನಾರಾಯಣ ಅವರ ನಿಧನದಿಂದ ತೆರವಾದ ಈ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿಯೇ ಇರಲಿಲ್ಲ. ಕಾಂಗ್ರೆಸ್‌ಗೆ ಆ ಸಮಸ್ಯೆ ಇರಲಿಲ್ಲ. ಜೆಡಿಎಸ್‌ ನ ಸತ್ಯನಾರಾಯಣ ಅವರ ಪತ್ನಿಗೆ ಟಿಕೆಟ್‌ ಕೊಡುವುದೂ ಅಂತ ಪಕ್ಕಾ ಗೊತ್ತಾಗಿತ್ತು. ಇಂಥ ಕ್ಲಿಷ್ಟಸ್ಥಿತಿಯಲ್ಲಿ ಕಮಲದ ಕೈಹಿಡಿದು ಟೆಕೆಟ್‌ ಪಡೆದ ಡಾ.ರಾಜೇಶ ಗೌಡರನ್ನು ಗೆಲ್ಲಿಸಿಕೊಂಡು ಬರುವುದು ಬಿಜೆಪಿಗೆ ಕಷ್ಟಸಾಧ್ಯವಾಗಿತ್ತು.bjp-strategy-changing-by-election-direction-smart-politics-frugal-shira

ಇಂಥ ಕಠಿಣ ಪರಿಸ್ಥಿತಿಯನ್ನು ಬಿಜೆಪಿ ಪರ ತಿರುಗಿಸಲು ಶಿರಾದಲ್ಲಿ ಮೊದಲ ಹೆಜ್ಜೆ ಇಟ್ಟವರೆಂದರೆ ನಿಸ್ಸಂಶಯವಾಗಿ ಡಾ.ಅಶ್ವತ್ಥನಾರಾಯಣ‌ ಮತ್ತು ಬಿ.ವೈ.ವಿಜಯೇಂದ್ರ. ನಾಮಪತ್ರ ಸಲ್ಲಿಕೆ ದಿನವೇ ಬೇರೆಯದ್ದೇ ಕಾರ್ಯತಂತ್ರ ಹಣೆದ ಅವರು ಆಂಧ್ರ ಪ್ರದೇಶದ ಕಾಂಗ್ರೆಸ್‌ ನಾಯಕ ಹಾಗೂ ಗಡಿಭಾಗದ ಪ್ರಭಾವೀ ರಾಜಕಾರಣಿ ರಘುವೀರಾ ರೆಡ್ಡಿ ಅವರನ್ನು ಅವರ ಸ್ವಗ್ರಾಮವಾದ ಮಡಕಶಿರಾ ತಾಲ್ಲೂಕಿನ ನೀಲಕಂಠಾಪುರಕ್ಕೆ ತೆರಳಿ ಮಾತುಕತೆ ನಡೆಸಿದ್ದು ಶಿರಾದಲ್ಲಿ ಕಮಲಕ್ಕೆ ಭರ್ಜಿರಿ ಫಸಲು ಸಿಗಲು ಕಾರಣವೆನ್ನಬಹುದು. ಜತೆಗೆ, ವಿಜಯೇಂದ್ರ ಅವರ ಪ್ರಚಾರದ ಕಾರ್ಯತಂತ್ರ ನೆರವಿಗೆ ಬಂತು.

ಇನ್ನು ಶಿರಾ ಕ್ಷೇತ್ರದಲ್ಲಿರುವ ಸುಮಾರು 40ರಿಂದ 45 ಸಾವಿರಕ್ಕೂ ಹೆಚ್ಚು ಯಾದವ ಮತಗಳೇ ನಿರ್ಣಾಯಕವಾಗಿದ್ದವು. ಅಷ್ಟೂ ಮತಗಳ ಮೇಲೆ ರಘುವೀರಾ ಅವರ ನೇರ ಪ್ರಭಾವವೂ ಇತ್ತು. ಅವರು ಆಂಧ್ರದ ರಾಜಕಾರಣಿಯಾದರೂ ಶಿರಾ ಮತ್ತಿತರೆ ತುಮಕೂರು ಜಿಲ್ಲೆಯ ಗಡಿ ಕ್ಷೇತ್ರಗಳ ಮೇಲೆ ಗಟ್ಟಿಯಾದ ಪಟ್ಟು ಹೊಂದಿದ್ದಾರೆ. ಯಾವುದೇ ಚುನಾವಣೆ ಬಂದರೂ ರಾಜ್ಯ ಹದಿನೈದಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅವರು ಪ್ರಚಾರ ಮಾಡಲೇಬೇಕಿತ್ತು. ಹೀಗಿರುವಾಗ ಡಿಸಿಎಂ ಬಿಟ್ಟ ಬಾಣ ಕಾಂಗ್ರೆಸ್‌ ಪಾಲಿಗೆ ದೊಡ್ಡ ಆಘಾತವನ್ನೇ ಉಂಟು ಮಾಡಿತು. ಹಿಂದಿನ ಚುನಾವಣೆಗಳಲ್ಲಿ ಶಿರಾಕ್ಕೆ ಬಂದು ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದ ರಘುವೀರಾ ರೆಡ್ಡಿ ಅವರು ಈ ಸಲ ಪ್ರಚಾರಕ್ಕೆ ಬರಲಿಲ್ಲ. ಕಾಂಗ್ರೆಸ್‌ ನಾಯಕರಾದ ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ ಅವರ ಮಗ ಮನೆ ಬಾಗಿಲಿಗೇ ಹೋಗಿ ಕರೆದರೂ ರೆಡ್ಡಿ ಶಿರಾದತ್ತ ಸುಳಿಯಲೇ ಇಲ್ಲ. ಫಲಿತಾಂಶದ ದಿಕ್ಕು ಬದಲಾಗಲು ಇದೇ ಪ್ರಮುಖ ಕಾರಣ ಎನ್ನಲಡ್ಡಿಯಿಲ್ಲ.‌ ಹೀಗೆ ಡಿಸಿಎಂ-ರೆಡ್ಡಿ ಭೇಟಿ ಯಾದವ ಸಮೂಹ ಬಿಜೆಪಿಯತ್ತ ಹೊರಳುವಂತೆ ಮಾಡಿತು.

ಇದಾದ ಮೇಲೆ, ಅಭ್ಯರ್ಥಿ ರಾಜೇಶ್ ಗೌಡ ಅವರೊಂದಿಗೆ ಪಟ್ಟನಾಯಕನಹಳ್ಳಿಗೆ ತೆರಳಿ ನಂಜಾವಧೂತ ಶ್ರೀಗಳನ್ನು ಭೇಟಿ ಮಾಡಿದ್ದರ ಬಗ್ಗೆಯೂ ಈಗ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸ್ವಾಮೀಜಿ ಅವರನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ನಾಯಕರಷ್ಟೇ ಭೇಟಿಯಾಗಿದ್ದರು. ಆದರೆ ಡಿಸಿಎಂ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ನೇರ ಅಭ್ಯರ್ಥಿಯನ್ನೇ ಕರೆದುಕೊಂಡು ಹೋಗಿ ಶ್ರೀಗಳ ಅನುಗ್ರಹ ಸಿಗುವಂತೆ ಮಾಡಿದ್ದರು. ಇಂಥ ಸ್ಮಾರ್ಟ್‌ ಪಾಲಿಟಿಕ್ಸ್‌ನಿಂದ ಶಿರಾದಲ್ಲಿ ಬಿಜೆಪಿ ಶಿಳ್ಳೆ ಹೊಡೆದು ಬೀಗಿದೆ.

Key words: BJP-strategy -changing – by-election- direction-Smart Politics -Frugal -Shira.