ಸಚಿವ ಸುಧಾಕರ್ ಹೇಳಿಕೆಗೆ ‘ಹಳ್ಳಿಹಕ್ಕಿ’ ಅಸಮಾಧಾನ: ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಹೆಚ್.ವಿಶ್ವನಾಥ್…

ಮೈಸೂರು,ಏಪ್ರಿಲ್,20,2021(www.justkannada.in): ಕೊರೋನಾ ಹೆಚ್ಚಾಗಲು ಜನರೇ ಕಾರಣ ಎಂಬ ಹೇಳಿಕೆ ನೀಡಿದ ಆರೋಗ್ಯ ಸಚಿವ ಸುಧಾಕರ್  ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್,  ಸರ್ಕಾರದ ಜವಾಬ್ದಾರಿ ಮಂತ್ರಿಯ ಬೇಜವಾಬ್ದಾರಿ ಹೇಳಿಕೆ ಇದು‌ ಎಂದು ಟೀಕಿಸಿದ್ದಾರೆ.jk

ಮೈಸೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಕೊರೋನಾ ಹೆಚ್ಚಾಗಲು ಜನರೇ ಕಾರಣ ಅಂತೀರಲ್ಲ.ಆಗಿದ್ರೆ ನೀವು ಏನ್ ಮಾಡ್ತಿದ್ದೀರಾ. ಸಿಎಂ ಆಸ್ಪತ್ರೆಯಲ್ಲಿದ್ದಾರೆ.  ಸರಿ’.  ಮೂರು ಜನ ಡಿಸಿಎಂ ಏನ್ ಮಾಡ್ತಿದ್ದಾರೆ. ಅವರನ್ನ ಸುಮ್ಮನೆ ಡಿಸಿಎಂ ಮಾಡಿರೋದಾ ? ಜನರ ಮೇಲೆ ಹೊಣೆ ಹಾಕಬಾರದು. ಒಬ್ಬ ಮಂತ್ರಿ ಜನ ಕಾರಣ ಅಂತಾರೆ’.  ಮತ್ತೊಬ್ಬ ಮಂತ್ರಿ ಬೇರೆ ರಾಜ್ಯದ ಪರಿಸ್ಥಿತಿ ನಮ್ಮಲ್ಲಿಲ್ಲ ಅಂತಾರೆ. ಜನ ಈಗಲೇ ಪರಿಪಾಟಲು ಪಟ್ಟಿದ್ದಾರೆ. ಬೆಡ್, ಆಕ್ಸಿಜನ್ ಸಿಗದೆ ಜನರು ಪರದಾಡುತ್ತಿದ್ದಾರೆ. ಇದಕ್ಕಿಂತಲು ಪರಿಸ್ಥಿತಿ ರಾಜ್ಯಕ್ಕೆ ಬರಬೇಕಾ..? ನಾನು ಆಡಳಿತ ಪಕ್ಷದಲ್ಲಿ ಇದ್ದರು ಸರಿ. ಇದನ್ನು ನಾನು ಹೇಳದೆ ಇದ್ದರೆ ನನಗೆ ನಾನೇ ವಂಚನೆ ಮಾಡಿದಂತೆ ಆಗುತ್ತದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ಜನರಿಗೆ ಸೇವೆ ನೀಡುವುದರಲ್ಲಿ ಸರ್ಕಾರ ಸೋತಿದೆ‌….

ರಾಜ್ಯದಲ್ಲಿ ತೀರ್ಮಾನ ತೆಗೆದುಕೊಳ್ಳೋದು ಮುಖ್ಯಮಂತ್ರಿ ಒಬ್ಬರೇ. ಹಾಗಾದರೆ ಕ್ಯಾಬಿನೆಟ್ ಯಾಕೆ ಬೇಕು? ಕ್ಯಾಬಿನೆಟ್ ಮಿನಿಸ್ಟರ್ ಗಳೇ ಸರ್ಕಾರ. ಆದ್ರೆ ಇಲ್ಲಿ ಏನ್ ಆಗ್ತಿದೆ ಎಂದು  ಕಿಡಿಕಾರಿದ ಹೆಚ್. ವಿಶ್ವನಾಥ್ , ಕೊರೋನಾ ಬಗ್ಗೆ ರಾಜ್ಯಪಾಲರು ಮೀಟಿಂಗ್ ತೆಗೆದುಕೊಳ್ತಾರೆಂದು ಮಾಹಿತಿ ಇದೆ. ಚುನಾಯಿತ ಸರ್ಕಾರ ವಿಫಲವಾದಾಗ ಮಾತ್ರ ರಾಜ್ಯಪಾಲರು ಎಂಟ್ರಿ ಆಗ್ಬೇಕು. ಆಗಿದ್ರೆ ಸರ್ಕಾರ ವಿಫಲವಾಗಿದ್ಯಾ? 2 ಸಾವಿರ ಹಾಸಿಗೆ ತಂದ್ರಲ್ಲ ಅದು ಏನಾಯ್ತು? ಅದಕ್ಕೆ ಮಾಡಿದ ವ್ಯವಸ್ಥೆ ಏನಾಯ್ತು.? WHO ಹೇಳಿದ್ರು, ನೀವ್ ಏನ್ ತಯಾರಿ ಮಾಡಿಕೊಂಡಿದ್ರಿ…?  ಕೊರೋನಾ ಮೊದಲ ಅಲೆ ಮುಗಿದ ಮೇಲೆ ಬರೀ ಬಿಲ್ ಮಾಡೋದ್ರಲ್ಲಿ ಕಾಲ ಕಳೆದ್ರಿ. ಜನರಿಗೆ ಸೇವೆ ನೀಡುವುದರಲ್ಲಿ ಸರ್ಕಾರ ಸೋತಿದೆ‌ ಎಂದು ಹೆಚ್.ವಿಶ್ವನಾಥ್ ಹರಿಹಾಯ್ದರು.BJP- MLC-H.vishwanath-outrage-Government-covid-control

ಬರೀ ಮೀಟಿಂಗ್ ಮಾಡ್ತೀರಾ! ತೀರ್ಮಾನ ಏನಾಗಿದೆ ಹೇಳಿ. ಸಿಎಂ ಹಾಗೂ ಸಚಿವರು, ಡಿಸಿಎಂ ನಡುವೆ ಸಮನ್ವಯತೆ ಹೋಗಿದೆ. ಅದು ಹೋದ ಕಾರಣವೇ ಈ‌ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಐಎಸ್‌ಎಸ್ ಅಧಿಕಾರಿಗಳು ಯಾವ ಮಂತ್ರಿಯ ಮಾತನ್ನ ಕೇಳ್ತಿಲ್ಲ. ಇನ್ನಾದರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪವರ್ ಕೊಡಬೇಕು. ನಿರ್ಧಾರ ತೆಗೆದುಕೊಳ್ಳುವ ಹಣಕಾಸು ವ್ಯವಸ್ಥೆ ಸರ್ಕಾರ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

Key words: BJP- MLC-H.vishwanath-outrage-Government-covid-control