ಬಿಜೆಪಿ ಮುಖಂಡ ಆನಂದ್ ಹತ್ಯೆ ಪ್ರಕರಣ: ಘಟನಾ ಸ್ಥಳಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಭೇಟಿ, ಪರಿಶೀಲನೆ…

kannada t-shirts

ಮೈಸೂರು,ಮಾ,6,2020(www.justkannada.in): ಮೈಸೂರಿನಲ್ಲಿ ಬಿಜೆಪಿ ಮುಖಂಡ ಆನಂದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ದೇಹ ಮಹಜಾರ್ ಮಾಡಲು ಘಟನಾ ಸ್ಥಳಕ್ಕೆ ಮೃತ ಆನಂದ್ ಪತ್ನಿ‌ ಪವಿತ್ರರನ್ನು ಕರೆತಂದರು. ಈ ವೇಳೆ ಘಟನಾ ಸ್ಥಳದಲ್ಲಿ ಮೃತನ ಪತ್ನಿ ಪವಿತ್ರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ನಡುವೆ ಘಟನಾ ಸ್ಥಳಕ್ಕೆ  ಭೇಟಿ ನೀಡಿ ಪರೀಶಿಲಿಸಿದ ಬಳಿಕ ಮಾತನಾಡಿದ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಮುಂಜಾನೆ 3 ರಿಂದ 4 ಗಂಟೆ ವೇಳೆಯಲ್ಲಿ ಆನಂದ್ ಕೊಲೆಯಾಗಿದೆ. ಬಾಟಲ್‌ಗಳಿಂದ ಚುಚ್ಚಿ ಕೊಲೆ ಮಾಡಲಾಗಿದೆ. ನಿನ್ನೆ ಆನಂದ್ ಬರ್ತ್‌ಡೇ ಇತ್ತು. ಅದಕ್ಕಾಗಿ ಪಾರ್ಟಿ ಮಾಡಿದ್ದ ಆನಂದ್ ಹಾಗೂ ಗೆಳೆಯರು ಮೊದಲು ಬೇರೆಡೆ ಪಾರ್ಟಿ ಮಾಡಿ ನಂತರ ಅಪಾರ್ಟ್ಮೆಂಟ್‌ಗೆ ಬಂದಿದ್ದಾರೆ. ಇಲ್ಲಿ 5 ರಿಂದ 6 ಮಂದಿ ಪಾರ್ಟಿ ಮುಂದುವರೆಸಿದ್ದಾರೆ. ಈ ವೇಳೆ ಅಲ್ಲಿದ್ದವರಲ್ಲೆ ಗಲಾಟೆ ಆರಂಭವಾಗಿದೆ. ಆಗ ಬಾಟಲ್‌ನಲ್ಲಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.

ಯಾರ್ಯಾರು ಇದ್ದರು ಅಂತ ಮಾಹಿತಿ ಗೊತ್ತಾಗಿದೆ. ಅವರೇಲ್ಲರನ್ನ ಹಿಡಿದು ವಿಚಾರಣೆ ಮಾಡ್ತಿವಿ. ಕೊಲೆ ಯಾವ ಕಾರಣಕ್ಕಾಗಿ ಆಗಿದೆ ಯಾರು ಮಾಡಿದ್ದಾರೆ ಅನ್ನೋದನ್ನ ಈಗಲೇ ಹೇಳೋಕಾಗೋಲ್ಲ. ಕೊಲೆಯಾದ ವ್ಯಕ್ತಿಯ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ ತಿಳಿಸಿದರು.

Key words: BJP- leader – murder case-Mysore city -police commissioner- Chandragupta -visits

website developers in mysore