ಕಪ್ಪಕಾಣಿಕೆ ಸಂಸ್ಕೃತಿ ಬಿಜೆಪಿಯಲ್ಲಿಲ್ಲ: ಕಾಂಗ್ರೆಸ್ ಗೆ ಕರ್ನಾಟಕ ಎಂಟಿಎಂ ಇದ್ಧಂತೆ – ಸಿಎಂ ಬೊಮ್ಮಾಯಿ ಗುಡುಗು.

Promotion

ಹೂವಿನಹಡಗಲಿ,ಅಕ್ಟೋಬರ್,13,2022(www.justkannada.in):  ಬಿಜೆಪಿ ನಾಯಕರು ಹೈಕಮಾಂಡ್ ಗೆ ಕಪ್ಪ ಕೊಡುತ್ತಾರೆ ಎಂದು ಆರೋಪಿಸಿದ ಕಾಂಗ್ರೆಸ್ ಗೆ ತಿರುಗೇಟು ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಪ್ಪಕಾಣಿಕೆ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಕಾಂಗ್ರೆಸ್ ಗೆ ಕರ್ನಾಟಕ ಎಂಟಿಎಂ ಇದ್ಧಂತೆ ಎಂದು ಗುಡುಗಿದರು.

ಹೂವಿನಹಡಗಲಿ ನಡೆದ ಜನಸಂಕಲ್ಪಯಾತ್ರೆಯಲ್ಲಿ ಭಾಷಣ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅನ್ನಭಾಗ್ಯದಲ್ಲಿ ಕನ್ನಭಾಗ್ಯ ಮಾಡಿದ್ರಿ.  5 ವರ್ಷ ರಾಜ್ಯವನ್ನ ಲೂಟಿ ಮಾಡಿದ್ರಿ ನಿಮ್ಮ ಭ್ರಷ್ಟಾಚಾರದಿಂದ  ರಾಜ್ಯಕ್ಕೆ ಹಿನ್ನೆಡೆಯಾಯಿತು. ಹೀಗಾಗಿ ಜನರು ನಿಮ್ಮನ್ನ ಮನೆಗೆ ಕಳುಹಿಸಿದರು.  ಕಾಂಗ್ರೆಸ್ ಅನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಕಿಡಿಕಾರಿದರು.

ನಿರಂತರವಾಗಿ ಅಭಿವೃದ್ಧಿ ನಡೆಯುತ್ತಿರಬೇಕು. ನಾವು ಎಸ್ಸಿ,  ಎಸ್ಟಿ ಮೀಸಲಾತಿ ಹೆಚ್ಚಿಸಿದ್ದೇವೆ .  5 ಲಕ್ಷ ಉದ್ಯೋಗ ಸೃಷ್ಠಿಸುತ್ತಿದ್ದೇವೆ.  ಸಿಂಗಟಾಲೂರು ಏತನೀರಾವರಿ ಯೋಜನೆ ಪೂರ್ಣವಾಗಿದೆ.  ನಾವು ಪೂರ್ಣಗೊಳಿಸಿದ್ದೇವೆ.  ಅಭಿವೃದ್ಧಿಯಲ್ಲಿ ಎಲ್ಲರಿಗೂ ಪಾಲು ಸಿಗಬೇಕು.  ತಾಂಡಾ ಅಭಿವೃದ್ದಿಗೆ 100 ಕೋಟಿ ಅನುದಾನ ನೀಡಿದ್ದೇನೆ.  ಅಭಿವೃದ್ಧಿಗಾಗಿ ಹಲವು ನಿಗಮಗಳಿಗೆ ಹಣ ನೀಡಿದ್ದೇವೆ ಎಂದರು.

Key words: bjp- jansankalpa yatre-CM-Basavaraj bommai-congress