ಮುಂದಿನ ಚುನಾವಣೆಯಲ್ಲಿ ನಮ್ಮದೇ ಜಯ: ರಾಜ್ಯದಲ್ಲಿ ನಿಮಗೆ ಅಧಿಕಾರಕ್ಕೆ ಬರಲು ಬಿಡಲ್ಲ: ಮಾಜಿ ಸಿಎಂ ಬಿಎಸ್ ವೈ ಗುಡುಗು.

Promotion

ಬೆಂಗಳೂರು,ಸೆಪ್ಟಂಬರ್,10 ,2022(www.justkannada.in):  ಮುಂದಿನ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ರಾಜ್ಯದಲ್ಲಿ ನಿಮಗೆ ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಗುಡುಗಿದರು.

ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ,ಈ ಭಾಗದಲ್ಲಿ ಬಿಜೆಪಿ ಶಕ್ತಿಯುತವಾಗಿ ಬೆಳೆದಿರಲಿಲ್ಲ ಸುಧಾಕರ್ ಶ್ರಮದಿಂದ ಬಿಜೆಪಿ ಬಲಗೊಂಡಿದೆ. ಸುಧಾಕರ್ ಶ್ರಮದಿಂದ ಹೆಚ್ಚಿನ ಶಾಸಕರು ಗೆಲ್ತಾರೆ.

ರಾಹುಲ್ ಗಾಂಧಿ ಬಡತನದ ಬಗ್ಗೆ ಮಾತನಾಡುತ್ತಾರೆ. ಹಾಗಾದರೆ 3 ಜನ ನಿಮ್ಮ ಪ್ರಧಾನಿಗಳು ಬಡತನವನ್ನೇಕೆ ನಿರ್ಮೂಲನೆ ಮಾಡಲಿಲ್ಲ. ನಮ್ಮ ಅಧಿಕಾರವಧಿಯಲ್ಲಿ ರೈತರು ನೇಕಾರರ ಸಾಲಮನ್ನಾ ಮಾಡಿದ್ದೇವೆ ರೈತರಿಗಾಗಿ ಹಲವು ಯೋಜನೆಗಳನ್ನ ಜಾರಿ ಮಾಡಿದ್ದೇವೆ ಎಂದರು.

ಮಳೆ ವಿಚಾರವಾಗಿ ಸರ್ಕಾರದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದೀರಿ . ನಿಮ್ಮ ಮಾತುಗಳಿಗೆ ಸದನದಲ್ಲಿ ಉತ್ತರಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುತ್ತೇವೆ. ಕರ್ನಾಟಕದಲ್ಲಿ ನಿಮಗೆ ಅಧಿಕಾರಕ್ಕೆ  ಬರಲು ಬಿಡಲ್ಲ.  ಮೋದಿ ಪ್ರಧಾನಿಯಾಗಿರುವವರೆಗೆ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. 150ಕ್ಕೆ ಹೆಚ್ಚು ಸ್ಥಾನ ಗೆದ್ದು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: bjp- janaspandana-former CM-BS Yeddyurappa