ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ಸರ್ಕಾರ ರಚನೆ ವಿಚಾರ: ನಾಳೆಗೆ ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್…

kannada t-shirts

ನವದೆಹಲಿ,ನ,25,2019(www.justkannada.in): ಮಹಾರಾಷ್ಟ್ರದಲ್ಲಿ ಎನ್ ಸಿಪಿ ಜತೆ ಸೇರಿ ಬಿಜೆಪಿ ಸರ್ಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ವಿಚಾರಣೆ ಮುಕ್ತಾಯವಾಗಿದ್ದು ಸುಪ್ರೀಂಕೋರ್ಟ್ ನಾಳೆಗೆ ಆದೇಶವನ್ನ ಕಾಯ್ದಿರಿಸಿದೆ.

ರಾಜ್ಯಪಾಲರ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಶಿವಸೇನೆ ಮತ್ತು ಎನ್ ಸಿಪಿ  ಸುಪ್ರೀಂಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದವು. ರಿಟ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನಾಳೆ 10.30ಕ್ಕೆ ಆದೇಶ ಕಾಯ್ದಿರಿಸಿದೆ. ಇಂದು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯಪಾಲರು ಶಿವಸೇನೆ, ಬಿಜೆಪಿ ಮತ್ತು ಎನ್ ಸಿಪಿ ಪಕ್ಷಗಳನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದರು. ಅವರು ಸರ್ಕಾರ ರಚಿಸಲು ವಿಫಲವಾದ ಹಿನ್ನಲೆಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಲಾಯಿತು. ಸರ್ಕಾರ ರಚಿಸಲು ಯಾವ ಪಕ್ಷಕ್ಕೆ ಎಷ್ಟು ಶಾಸಕರ ಬೆಂಬಲವಿದೆ ಎಂದು ರಾಜ್ಯಪಾಲರು ನೋಡಿಕೊಂಡು ಕುಳಿತುಕೊಳ್ಳಬೇಕಾಗಿಲ್ಲ. ರಾಜ್ಯಪಾಲರು ಅಕ್ಟೋಬರ್ 24ರಿಂದ ನವೆಂಬರ್ 9ರವರೆಗೆ ಕಾದಿದ್ದರು, ಆದರೆ ಯಾವುದೇ ಪಕ್ಷಗಳು ಸರ್ಕಾರ ರಚನೆಗೆ ಮುಂದೆ ಬಂದಿರಲಿಲ್ಲ. ಈಗಿರುವ ಪ್ರಶ್ನೆಯೆಂದರೆ ಪಕ್ಷವೊಂದು ಬಂದು 24 ಗಂಟೆಯೊಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸಲು ಹೇಳಿ ಎಂದು ಕೋರ್ಟ್ ನ ಮಧ್ಯಪ್ರವೇಶವನ್ನು ಕೇಳುತ್ತಿರುವುದು ಎಷ್ಟು ಸರಿ ಎಂದು ವಾದ ಮಂಡಿಸಿದರು.

ಎನ್ ಸಿಪಿ ಪರ ವಾದ ಮಂಡಿಸಿದ  ವಕೀಲ ಅಭಿಷೇಕ್ ಮನು ಸಿಂಘ್ವಿ,  ಬಹುಮತ ಸಾಬೀತಿಗೆ ಬಿಜೆಪಿ ವಿಳಂಬ ಮಾಡಲು ಯತ್ನಿಸುತ್ತಿದೆ. ಈ ಹಿಂದೆ 24 ಗಂಟೆಗಳಲ್ಲಿ ಅಥವಾ 48 ಗಂಟೆಗಳಲ್ಲಿ ಬಹುಮತ ಸಾಬೀತಿಗೆ ಆದೇಶ ನೀಡಲಾಗಿದೆ. ಹೀಗಾಗಿ ಇಂದೇ ಬಹುಮತ ಸಾಬೀತು ಪಡಿಸಲು ಆದೇಶ ನೀಡಿ ಎಂದು ಮನವಿ ಮಾಡಿದ್ದರು.

Key words: BJP – government – Maharashtra-Supreme Court –order-tomorrow.

website developers in mysore