ಬೇಕಾದ್ರೆ ಇನ್ನೂ ನಾಲ್ಕು ಮೊಟ್ಟೆ ಹೊಡೆಯಿರಿ: ಆದ್ರೆ ಜನ ನೆಮ್ಮದಿಯಿಂದಿರಲು ಬಿಡಿ-ಸರ್ಕಾರದ ವಿರುದ್ದ ಡಿಕೆ ಶಿವಕುಮಾರ್ ಗುಡುಗು.

ಬೆಂಗಳೂರು,ಆಗಸ್ಟ್,22,2022(www.justkannada.in): ಯಾರೋ ಮೊಟ್ಟೆ ಹೊಡೆದ ಧಿಕ್ಕಾರ ಹಾಕಿದ ಅನ್ನೋದು ಮುಖ್ಯ ಅಲ್ಲ. ನಾಡಿನ ಜನತೆಗೆ ನಾವು ಏನು ಕೊಟ್ವಿ ಅನ್ನೋದು ಮುಖ್ಯ. ಬೇಕಾದ್ರೆ ಇನ್ನೂ ನಾಲ್ಕು ಮೊಟ್ಟೆ ಹೊಡೆಯಿರಿ: ಆದ್ರ ಜನ ನೆಮ್ಮದಿಯಿಂದಿರಲು ಬಿಡಿ  ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗುಡುಗಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ವಿಪಕ್ಷದ ನಾಯಕರು, ಹಳ್ಳಿಗಳಿಗೆ ಹೋಗಿ ಸಮಸ್ಯೆ ಆಲಿಸೋದು  ವಿಪಕ್ಷ ನಾಯಕರ ಕೆಲಸ. ಅದನ್ನು ಮಾಡಬೇಡಿ ಅಂತ ಮೊಟ್ಟೆ ಹೊಡಿದ್ರೆ ಹೇಗೆ. ಮೊಟ್ಟೆಯಲ್ಲಿ ಹೊಡೆದ್ರಿ ಅಂತ ನಮಗೆ ಬೇಜಾರಿಲ್ಲ.  ಬೇಕಿದ್ರೆ ಇನ್ನೂ ನಾಲ್ಕು ಮೊಟ್ಟೆ ಹೊಡೀರಿ.  ಇನ್ನೂ ನಾಲ್ಕು ಕಡೆ ಕಪ್ಪು ಬಾವುಟ ಹಾರಿಸಿ.  ಆದರೆ  ಮೊದಲು ಜನರನ್ನು ನೆಮ್ಮದಿಯಾಗಿ ಬದುಕಲು ಬಿಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ ವಿಚಾರ ಕುರಿತು  ಪ್ರತಿಕ್ರಿಯಿಸಿದ  ಡಿ.ಕೆ ಶಿವಕುಮಾರ್,  ಈ ವಿಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಬೇಕು. ರಾಜ್ಯದಲ್ಲಿ ಶಾಂತಿ ಕಾಪಾಡುವುದು ಸಿಎಂ ಬೊಮ್ಮಾಯಿ ಕೆಲಸ. ನಮಗೆ ಪ್ರಚೋದನಕಾರಿ ಹೇಳಿಕೆ ನೀಡಲು ಇಷ್ಟ ಇಲ್ಲ. ಮಹಾತ್ಮ ಗಾಂಧಿ ನಮಗೆ ಶಾಂತಿಯ ಬಗ್ಗೆ ಹೇಳಿಕೊಟ್ಟಿದ್ದಾರೆ. ಮಾಜಿ ಪ್ರಧಾನಿ ನೆಹರು ಫೋಟೋವನ್ನೇ ಇವರು ಬಿಟ್ಟಿದ್ದಾರೆ. ಮುಂದೆ ಬಿಜೆಪಿಯವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.

Key words: bjp- government-kpcc-president-DK Shivakumar