ಜನರ ಹೊಟ್ಟೆಗೆ ಸಮರ್ಪಕವಾದ ಅನ್ನ ನೀಡದ ಬಿಜೆಪಿಯವರು ದೇಶವನ್ನು ವಿಶ್ವಗುರು ಮಾಡಲು ಸಾಧ್ಯವೆ..? ಸಿದ್ಧರಾಮಯ್ಯ ಟೀಕೆ.

kannada t-shirts

ಬೆಂಗಳೂರು,ಅಕ್ಟೋಬರ್,27,2022(www.justkannada.in): ಜನರ ಹೊಟ್ಟೆಗೆ ಸಮರ್ಪಕವಾದ ಅನ್ನ ನೀಡದ ಬಿಜೆಪಿಯವರಿಂದ ದೇಶವನ್ನು ವಿಶ್ವಗುರು ಮಾಡಲು ಸಾಧ್ಯವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಜಗತ್ತಿನ ಜನರ ಮುಂದೆ ಹಸಿವು, ಸ್ವಾತಂತ್ರ್ಯ, ಮಹಿಳೆಯರ ದುಡಿಮೆ ಮುಂತಾದ ವಿಷಯಗಳಲ್ಲಿ ಭಾರತದ ಮರ್ಯಾದೆ ಹರಾಜಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಟೀಕಿಸಿದ್ದಾರೆ. ಈ ಸಂಬಂಧ ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆ ಮೂಲಕ  ಈ ಕೆಳಕಂಡಂತೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೋದಿಯವರನ್ನು ಟೀಕಿಸಿದವರ ವಿರುದ್ಧ ಪ್ರತಿಭಟಿಸಿ ಎಂದು ಹೇಳಿಕೆ ನೀಡಿದ್ದ ಯಡಿಯೂರಪ್ಪನವರಿಗೆ ಮತ್ತು ಬಿಜೆಪಿಯವರಿಗೆ ನಾನು 32 ಪ್ರಶ್ನೆಗಳನ್ನು ಕೇಳಿದ್ದೆ. ಇದುವರೆಗೆ  ಬಿಜೆಪಿಯವರಿಗೆ ಮತ್ತು ಯಡಿಯೂರಪ್ಪನವರಿಗೆ ಒಂದೇ ಒಂದು ಪ್ರಶ್ನೆಗೂ ಉತ್ತರಿಸಲು ಸಾಧ್ಯವಾಗಲಿಲ್ಲ. ಇದರ ಮಧ್ಯೆ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ 121 ದೇಶಗಳ ಪೈಕಿ 107 ನೇ ಸ್ಥಾನಕ್ಕೆ ಕುಸಿದಿದೆಯೆಂಬ ವರದಿ ಬಿಡುಗಡೆಯಾಯಿತು. ಬಿಜೆಪಿಯವರು ಯಥಾಪ್ರಕಾರ ಈ ವರದಿಯೆ ಸರಿ ಇಲ್ಲ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ದಾಖಲೆಗಳನ್ನು ಆಧರಿಸಿಯೆ ವರದಿ ಸಿದ್ಧಪಡಿಸಲಾಗಿದೆ ಎಂಬ ಸಾಕ್ಷ್ಯಗಳನ್ನು ಸಮೀಕ್ಷೆ ಮಾಡಿದವರು ತೋರಿಸಿದ್ದಾರೆ. ಮುಖ್ಯವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ-5 ರಲ್ಲಿನ ಅಂಕಿ ಅಂಶಗಳನ್ನು  ಆಧಾರವಾಗಿಟ್ಟುಕೊಂಡು ಹಸಿವಿನ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆಯೆಂದು ತಿಳಿಸಿದ ಮೇಲೆ ಬಿಜೆಪಿಯವರು ಆಕ್ಷೇಪಗಳನ್ನು ನಿಲ್ಲಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

2017 ರಲ್ಲಿ 100 ನೇ ಸ್ಥಾನದಲ್ಲಿದ್ದ ಭಾರತ 2018 ರಲ್ಲಿ 103 ನೇ ಸ್ಥಾನಕ್ಕೆ ಕುಸಿಯಿತು.  ಈಗ 121 ದೇಶಗಳ ಪೈಕಿ 107 ನೇ ಸ್ಥಾನ. ನಮ್ಮ ನಂತರ ಕೇವಲ 15 ದೇಶಗಳಿವೆ. ದುರದೃಷ್ಟವೆಂದರೆ ನಮಗಿಂತ ಮೇಲೆ ಇಥಿಯೋಪಿಯ, ಕೀನ್ಯಾ, ಸುಡಾನ್ ಮುಂತಾದ ದೇಶಗಳಿವೆ.

ನಮ್ಮ ಅಕ್ಕಪಕ್ಕದ ದೇಶಗಳಾದ ಪಾಕಿಸ್ತಾನ 99 ನೇ ಸ್ಥಾನ, ಬಾಂಗ್ಲಾ ದೇಶ 84 ನೇ ಸ್ಥಾನ, ನೇಪಾಳ 81 ನೇ ಸ್ಥಾನ, ನಮ್ಮದು 107 ನೇ ಸ್ಥಾನ. ಇದು ದೇಶಕ್ಕೆ ಹೆಮ್ಮೆ ತರುವ ಸಂಗತಿಯೆ? ತನ್ನ ಜನರ ಹೊಟ್ಟೆಗೆ ಸಮರ್ಪಕವಾಗಿ ಅನ್ನ ಸಿಗುವಂತೆ ನೋಡಿಕೊಳ್ಳದ ದೇಶ ವಿಶ್ವಗುರುವಾಗಲು ಸಾಧ್ಯವೆ? ಹಸಿವಿನ ಸೂಚ್ಯಂಕವನ್ನು ಜನರ ಅಪೌಷ್ಟಿಕತೆ, ಶಿಶುಮರಣ, ಮಕ್ಕಳ ವಯಸ್ಸಿಗನುಗುಣವಾಗಿ ಎತ್ತರ ಮತ್ತು ತೂಕಗಳನ್ನು ಮಾನದಂಡವನ್ನಾಗಿ ಇಟ್ಟುಕೊಂಡು ವರದಿಯನ್ನು ಸಿದ್ಧಪಡಿಸಲಾಗುತ್ತದೆ.  ಪರಿಸ್ಥಿತಿ ಹೀಗಿದ್ದರೂ ಬಿಜೆಪಿಯು ಅತ್ಯಂತ ಕ್ಷುಲ್ಲಕವಾದ ಆಹಾರದ ರಾಜಕಾರಣವನ್ನು ಮಾಡುತ್ತಿದೆ. ಮಾಂಸಾಹಾರದ ಮೇಲೆ ದಾಳಿ ನಡೆಸುತ್ತಿದೆ. ಮನುಷ್ಯರಿಗೆ ಅತ್ಯಂತ ಅಗತ್ಯವಾಗಿ ಬೇಕಾದ ಪ್ರೋಟೀನುಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಿದ್ಧರಾಮಯ್ಯ ಹರಿಹಾಯ್ದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಾಗ ಪ್ರತಿ ಬಿಪಿಎಲ್ ಕಾರ್ಡುದಾರರಿಗೆ ತೊಗರಿಬೇಳೆ ನೀಡುತ್ತಿದ್ದೆವು. ಬೇಳೆ ನೀಡುವ ಯೋಜನೆಯನ್ನು ಬಿಜೆಪಿ ಸರ್ಕಾರ ರದ್ದು ಮಾಡಿ 3 ವರ್ಷಗಳಾದವು. ಮನಮೋಹನಸಿಂಗರ ನೇತೃತ್ವದ ಸರ್ಕಾರ ಆಹಾರ ಖಾತ್ರಿ ಯೋಜನೆಯನ್ನು ಜಾರಿಗೆ ತಂದು ಅದನ್ನು ಕಡ್ಡಾಯವಾದ ಹಕ್ಕನ್ನಾಗಿಸಿತು. ಜನರಿಗೆ ಸಮರ್ಪಕವಾದ ಅನ್ನ ನೀಡಬೇಕಾದುದು ಸರ್ಕಾರದ ಜವಾಬ್ಧಾರಿ. ಆದರೆ ಬಡಜನರನ್ನು ಹಸಿವು ಮುಂತಾದ ಸಂಕಷ್ಟಗಳಿಂದ ಮೇಲೆತ್ತಲು ನೀಡುತ್ತಿರುವ ಸಬ್ಸಿಡಿಗಳನ್ನೆ ರದ್ದು ಮಾಡಬೇಕೆಂದು ಬಿಜೆಪಿ ಪ್ರತಿಪಾದಿಸುತ್ತಿದೆ.

ಜಾಗತಿಕ ಸಂಸ್ಥೆಗಳು ನಿರಂತರವಾಗಿ ಬಿಡುಗಡೆ ಮಾಡುತ್ತಿರುವ ಅಧ್ಯಯನ ವರದಿಗಳು ಮತ್ತು ಅಂಕಿಅಂಶಗಳನ್ನು ತಳ್ಳಿ ಹಾಕಲೆತ್ನಿಸುವ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿಯು ಯೋಜನಾ ಆಯೋಗವನ್ನೆ ಬರ್ಖಾಸ್ತು ಮಾಡಿದೆ. ಕೇಂದ್ರ ಸರ್ಕಾರವು ನಿಗಧಿತವಾಗಿ ನಡೆಸುವ ಅಧ್ಯಯನಗಳನ್ನೆ ನಿಲ್ಲಿಸಿಬಿಟ್ಟಿದೆ. ಮುಖ್ಯವಾಗಿ ಸಿಎಜಿ ಆಡಿಟ್ಟುಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ರಾಷ್ಟ್ರೀಯ ಅಂಕಿ ಅಂಶಗಳ ಇಲಾಖೆಯು ನಡೆಸುವ ಸರ್ವೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಆರೋಪಿಸಿದರು.

ಯುಪಿಎ ಸರ್ಕಾರ ನಡೆಸಿದ ಸರ್ವೆಗಳನ್ನು ಬಿಟ್ಟರೆ ಹೊಸ ಸರ್ವೆಗಳು ನಡೆದಿಲ್ಲ. 2018 ರಲ್ಲಿ ಎನ್‍ಎಸ್‍ಎಸ್‍ಒ ಸರ್ವೆ ನಡೆಸಿತಾದರೂ ಅದರ ಅಂಕಿಅಂಶಗಳು ಕೇಂದ್ರ ಸರ್ಕಾರಕ್ಕೆ ವಿರುದ್ಧವಾಗಿದ್ದ ಕಾರಣ ವರದಿಯನ್ನೆ ಬಿಡುಗಡೆ ಮಾಡಲಿಲ್ಲ. 2021 ರಲ್ಲಿ ದೇಶದ ಜನಗಣತಿ ನಡೆಯಬೇಕಾಗಿತ್ತು. ಕೋವಿಡ್ ಮುಗಿದ ಕೂಡಲೆ ಜಗತ್ತಿನ ಅನೇಕ ದೇಶಗಳು ಜನಗಣತಿ ನಡೆಸಿದವು. ಮೋದಿ ಸರ್ಕಾರ ಇದುವರೆಗೂ ಏನನ್ನೂ ಮಾಡದೆ ಸುಮ್ಮನೆ ಕೂತಿದೆ. ಜನಗಣತಿ ನಡೆದರೆ ಕೋವಿಡ್‍ನಿಂದ ಮರಣ ಹೊಂದಿದ ಜನರ ವಿವರವೂ ಸೇರಿದಂತೆ ಅನೇಕ ಸಂಗತಿಗಳು ಬಹಿರಂಗವಾಗುತ್ತವೆ ಎಂದು ಮೌನ ವಹಿಸಲಾಗಿದೆ.

ಮೋದಿಯವರು ಭಾರತವನ್ನು ಯಾವ ದುರ್ಗತಿಗೆ ಇಳಿಸಿದ್ದಾರೆಂದರೆ 2014 ರಲ್ಲಿ ಭಾರತದ ತಲಾವಾರು ಜಿಡಿಪಿ 1573 ಡಾಲರುಗಳಷ್ಟಿತ್ತು. 2022 ರಲ್ಲಿ 1850 ಡಾಲರುಗಳಷ್ಟಿರಲಿದೆ ಎಂದು ಅಂದಾಜು ಮಾಡಲಾಗಿದೆ.

ಬಾಂಗ್ಲಾದೇಶದಲ್ಲಿ 2014 ರಲ್ಲಿ 1118 ಡಾಲರುಗಳಷ್ಟಿದ್ದ ತಲಾವಾರು ಜಿಡಿಪಿಯು 2021 ರಲ್ಲಿ 2503 ಡಾಲರುಗಳಷ್ಟಾಗಿತ್ತೆಂದು ಅಂಕಿ ಅಂಶಗಳು ಹೇಳುತ್ತಿವೆ. ವಿಶ್ವಬ್ಯಾಂಕಿನ ಅಂಕಿ ಅಂಶಗಳು ಭಾರತದಲ್ಲಿ ಇನ್ನೂ ದಯನೀಯವಾದ ಪರಿಸ್ಥಿತಿಯಿದೆಯೆಂದು ಹೇಳುತ್ತಿವೆ. ಮನಮೋಹನಸಿಂಗರು 2004 ರಲ್ಲಿ ಪ್ರಧಾನಿಯಾದಾಗ ಭಾರತದ ತಲಾವಾರು ಜಿಡಿಪಿಯು 546 ಡಾಲರುಗಳಿಷ್ಟಿತ್ತು. ಅವರು ಅಧಿಕಾರದಿಂದ ಇಳಿಯುವ ವೇಳೆಗೆ 1500 ಡಾಲರಿಗೂ ಅಧಿಕ ಪ್ರಮಾಣದಲ್ಲಿತ್ತು.

ಯುಪಿಎ ಕಾಲದಲ್ಲಿ 3 ಪಟ್ಟು ಆದಾಯವು ಹೆಚ್ಚಾಗಿತ್ತು. ಆದರೆ ಮೋದಿಯಯವರ 8 ವರ್ಷಗಳ ಅವಧಿಯಲ್ಲಿ ಕೇವಲ 350 ಡಾಲರುಗಳು ಮಾತ್ರ ಹೆಚ್ಚಾಗಿದೆ ಎಂಬ ಅಂಶವು ಆಘಾತಕಾರಿಯಾಗಿದೆ.  ಹಣದುಬ್ಬರವನ್ನು ಲೆಕ್ಕ ಹಾಕಿದರೆ ಇದು ನೆಗೆಟಿವ್ ಬೆಳವಣಿಗೆಯಾಗುತ್ತದೆ. ಬಹುಪಾಲು ಜನರಿಗೆ ನಿಧಾನಕ್ಕೆ ಅರ್ಥವಾಗುತ್ತಿರುವ ಸಂಗತಿ, ‘ನಮೋ’ ಎಂದರೆ ಜನರನ್ನು “ ನಂಬಿಸಿ ಮೋಸ ಮಾಡುವವರು” ಎಂದು.  ನಂಬಿಸಿ ಮೋಸ ಮಾಡಿದ್ದೆ ಮೋದಿಯವರು ಈ ದೇಶದ ಜನರಿಗೆ ಕೊಟ್ಟ ಮಹಾನ್ ಕೊಡುಗೆ.

ಇಂದು ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವು ಸರ್ವರಂಗಗಳಲ್ಲೂ ವಿಫಲವಾಗಿದೆ. ದೇಶವು ಭಾರಿ ಗಂಡಾಂತರವನ್ನು ಎದುರಿಸುತ್ತಿದೆ. ಸುಳ್ಳು ಭಾಷಣಗಳನ್ನು ಬಿಟ್ಟರೆ ಯಾವ ಸಾಧನೆಯೂ ಇಲ್ಲ. ಭಾರತವನ್ನು ಹಿಂದೆ ತಳ್ಳಿ ನಮ್ಮ ಅಕ್ಕ ಪಕ್ಕದ ದೇಶಗಳು ಮುಂದು ಮುಂದಕ್ಕೆ ಹೋಗುತ್ತಿವೆ. ಈ ವಿಚಾರವನ್ನು ಮರೆಮಾಚುವುದಕ್ಕೋಸ್ಕರವೆ ಧರ್ಮ, ಜಾತಿ, ಕೋಮು ದ್ವೇಷಗಳನ್ನು ಮುಂದೆ ಮಾಡಿಕೊಂಡು ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ದೇಶ ಒಂದೇ ಸಮನೆ ಅಧಃಪತನದ ಹಾದಿ ಹಿಡಿದಿದ್ದರೂ ಅದನ್ನು ಉದ್ಧಾರವಾಗುತ್ತಿದೆಯೆಂದು ಬಿಂಬಿಸಲಾಗುತ್ತಿದೆ.  ಇದನ್ನು ಅರಿತುಕೊಳ್ಳದಿದ್ದರೆ ಈ ದೇಶದ ಬಡವರು, ಮಧ್ಯಮವರ್ಗದವರು, ದಲಿತರು, ರೈತರು, ಹಿಂದುಳಿದವರು, ಪಶುಪಾಲಕರು, ಆದಿವಾಸಿಗಳು, ಮಹಿಳೆಯರು, ಕಾರ್ಮಿಕರು, ಕುಶಲಕರ್ಮಿಗಳಾದಿಯಾಗಿ ಯಾರಿಗೂ ಉಳಿಗಾಲವಿಲ್ಲ ಎಂದು ತಿಳಿಸಿದ್ದಾರೆ.

Key words: BJP, – food –people-world guru-former CM- Siddaramaiah

ENGLISH SUMMARY…

The BJP couldn’t fulfil the hunger of the people, can they make our country a Vishwaguru? Siddaramaiah criticizes
Bengaluru, October 27, 2022 (www.justkannada.in): “The BJP couldn’t provide food for the hungry, can it make our country a Vishwaguru?,” questioned leader of the opposition in the assembly Siddaramaiah.
Mentioning that various issues in our country like hunger, liberty, women employment, etc., has become a laughter in front of the world, Siddaramaiah has severely criticized the BJP, in a press release.
“I had asked 32 questions to Yediyurappa and other BJP leaders who had called for a protest against those who criticize Modi. However, they couldn’t answer to even one question. In the meantime, India is in the 107th place among 121 countries in the global hunger index according to a report. As usual, the BJP people are claiming it as the report is incorrect. The report has been prepared based on the Govt. of India documents and reports, as proven by the people who have conducted the survey. The hunger index has been arrived at based on the data mentioned in the National Family and Health Survey-5, released by the Govt. of India. They have stopped commenting after proving it,” he said.
He mentioned that the BJP government, under the leadership of Narendra Modi has failed in all the sectors and the country is facing a severe crisis and economical danger. “Other than false speeches, they have not achieved anything. All the other countries are moving forward pushing India behind. In order to hide this, the BJP people are misleading the people by bringing factors like caste, religions, communal hatred to the fore. They are depicting that our country is shining, whereas it is going down. If the people won’t understand this they will suffer more.”
Keywords: Siddaramaiah/ criticizes/ BJP

website developers in mysore