ಕೃಷಿ ಮಸೂದೆ ಜಾರಿ ಮೂಲಕ ಗೊಂದಲ ಸೃಷ್ಟಿಸುವ ಕೆಲಸ- ಕೇಂದ್ರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ…

ಮೈಸೂರು,ಫೆಬ್ರವರಿ,9,2021(www.justkannada.in):  ಕೇಂದ್ರ ಸರ್ಕಾರ ಕೃಷಿ ಮಸೂದೆ ಜಾರಿ ಮಾಡಿ ಗೊಂದಲ ಸೃಷ್ಟಿ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಜನರಿಗೆ ಅವರ ಮೂರು ಕಾಯ್ದೆ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.jk

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ರೈತರ ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂಬುದಿದೆ. ಪ್ರಾರಂಭದಲ್ಲಿ ಉತ್ತಮ ಬೆಲೆ ಸಿಕ್ಕರೂ ನಂತರ ಕಾರ್ಪೊರೇಟ್ ಕಂಪನಿಗಳ ನಿಯಂತ್ರಣಕ್ಕೆ ಒಳಪಡಲಿದೆ. ಬೆಲೆ ಖಾತರಿ ಮತ್ತು ಒಪ್ಪಂದ ಕಾಯ್ದೆ ಮೂಲಕ ಒಪ್ಪಂದ ಮಾಡಿಕೊಂಡು ಕಂಪನಿ ಹೇಳಿದ ಬೆಳೆಗಳನ್ನೇ ರೈತ ಬೆಳೆಯಬೇಕಾಗುತ್ತದೆ. ರೈತರು ತಮ್ಮ ಜಮೀನಿನಲ್ಲಿ ತಾನೇ ಕೂಲಿಗಳಾಗಿ ಕೆಲಸ ಮಾಡುವಂತೆ ಮಾಡುವ ಹುನ್ನಾರ ಬಿಜೆಪಿಯದ್ದು ಎಂದು ಕಿಡಿಕಾರಿದರು.bjp-creating –confusion- KPCC spokesperson- M. Laxman - Agricultural Amendment Act

ಫಾರ್ಮರ್ ಬದಲು ರೈತ ಫಾರ್ಮ್ ಲೇಬರ್ ಆಗಲಿದ್ದಾನೆ. ರೈತ ಕೂಲಿಗಾರ ಆಗಿರುತ್ತಾನೆ. ಇನ್ನು ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ ಕೂಡ ಮಾರಕವಾಗಲಿದೆ. ಕಾರ್ಪೊರೇಟ್ ಕಂಪನಿಗಳು ಅಗ್ಗದ ಬೆಲೆಗೆ ಖರೀದಿ ಮಾಡಿ ಎಷ್ಟು ಬೇಕಾದರು ಶೇಖರಣೆ ಮಾಡಿಕೊಂಡು ಮಾರುಕಟ್ಟೆ ಅಭಾವ ಸೃಷ್ಟಿಸುತ್ತವೆ. ಯಾಕೆ ಬಿಜೆಪಿ ಹಠಕ್ಕೆ ಬಿದ್ದಿದೆ. ಈ ಕಾಯ್ದೆಗಳನ್ನು ರೈತರು ಅರ್ಥ ಮಾಡಿಕೊಂಡೇ ಹೋರಾಟ ಮಾಡುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ ರದ್ದಾಗುವುದಿಲ್ಲ ಎಂದು ಮೋದಿ ಹೇಳ್ತಾರೆ ಎಪಿಎಂಸಿ ಇಲ್ಲದೆ ಇದ್ರೆ ಎಂಎಸ್ ಪಿ ಎಲ್ಲಿ ಇರುತ್ತದೆ. ಸರ್ಕಾರ ಎಪಿಎಂಸಿ ರದ್ದಾಗುವುದಿಲ್ಲ ಎಂದು ಸುಳ್ಳು ಹೇಳುತ್ತಿದೆ‌ ಎಂದು ಹರಿಹಾಯ್ದರು.

Key words:  bjp-creating –confusion- KPCC spokesperson- M. Laxman – Agricultural Amendment Act