ದುಡ್ಡಿನ ಮೇಲೆ ಬಿಜೆಪಿಯಿಂದ ಚುನಾವಣೆ: ಭ್ರಷ್ಟ ಸರ್ಕಾರವನ್ನ ಕಿತ್ತೊಗೆಯಲು ಜನರು ನಿರ್ಧಾರ- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.

Promotion

ಮಂಗಳೂರು,ಏಪ್ರಿಲ್,25,2023(www.justkannada.in): ಬಿಜೆಪಿಯ ಭ್ರಷ್ಟಾಚಾರದಿಂದಾಗಿ ರಾಜ್ಯಕ್ಕೆ ಈಗ ಕೆಟ್ಟ ಹೆಸರು ಬಂದಿದೆ. ಭ್ರಷ್ಟ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯಲು  ಜನರು ನಿರ್ಧರಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದಲ್ಲಿ ಇಂದು ಲಂಚ ಕೊಡದೆ ಯಾವುದೇ ಕೆಲಸ ಆಗ್ತಿಲ್ಲ. ಭ್ರಷ್ಟಾಚಾರದಿಂದಾಗಿ ರಾಜ್ಯಕ್ಕೆ ಈಗ ಕೆಟ್ಟ ಹೆಸರು ಬಂದಿದೆ. 40% ಕಮಿಷನ್​ ಬಗ್ಗೆ ಗುತ್ತಿಗೆದಾರರು ಆರೋಪ ಮಾಡಿದ್ದರು. ಪ್ರಧಾನಿ ಮೋದಿ, ರಾಷ್ಟ್ರಪತಿಗೂ ಗುತ್ತಿಗೆದಾರರು ಪತ್ರ ಬರೆದಿದ್ದರು. ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಕಿಡಿಕಾರಿದರು.

ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯದ ಜನ ನಿರ್ಧರಿಸಿದ್ದಾರೆ.  ನಮಗೆ 150 ಸ್ಥಾನವನ್ನ ಕೊಡಿ. ಪ್ರಜಾಪ್ರಭುತ್ವದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಇಡಿ ಐಟಿ ಎಲ್ಲವೂ ಅವರ ಕೈಯಲ್ಲಿ ಇದೆ  ಬಿಜೆಪಿಯವರೇ ಎಲ್ಲಾ ಕಡೆ ಎಟಿಎಂ ಇಟ್ಟಿದ್ದಾರೆ. ದುಡ್ಡಿನ ಮೇಲೆ ಬಿಜೆಪಿಯವರು ಚುನಾವಣೆ ಮಾಡುತ್ತಿದ್ದಾರೆ ಎಂದು  ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

Key words: bjp-corrupt -government- AICC president -Mallikarjuna Kharge.