ನಂಜಾವಧೂತ ಶ್ರೀಗಳ ಭೇಟಿ: ಕಾಂಗ್ರೆಸ್- ಜೆಡಿಎಸ್ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿ ತಮ್ಮ ಅಳಲು ತೋಡಿಕೊಂಡ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್…

ದಕ್ಷಿಣ ಕನ್ನಡ,ಡಿ,3,2019(www.justkannada.in):  ಜೆಡಿಎಸ್ ಮತ್ತು ಕಾಂಗ್ರೆಸ್ ಎರಡು ಪಕ್ಷಗಳ ಮುಂಚೂಣಿ ನಾಯಕರು  ನಮ್ಮನ್ನ ಕೀಳಾಗಿ ನಡೆಸಿಕೊಂಡ್ರು. ಕಾಂಗ್ರೆಸ್ ನವರು ನಮ್ಮನ್ನ ಶಾಸಕರ ರೀತಿ ನೋಡಿಕೊಳ್ಳಲಿಲ್ಲ. ಹೀಗಾಗಿ ಪಕ್ಷ ಬಿಟ್ಟವು ಎಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ನಂಜಾವಧೂತ ಶ್ರೀಗಳ ಬಳಿ ಅಳಲು ತೋಡಿಕೊಂಡರು.

ಉಲ್ಲಾಳದಲ್ಲಿರುವ ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಶ್ರೀಗಳನ್ನ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಭೇಟಿಯಾಗಿ ಆಶೀರ್ವಾದ ಪಡೆದರು. ಬಳಿಕ ಜೆಡಿಎಸ್ –ಕಾಂಗ್ರೆಸ್ ನಾಯಕರ ಬಗ್ಗೆ ಶ್ರೀಗಳ ಬಳಿ ತೀವ್ರ ಬೇಸರ ವ್ಯಕ್ತಪಡಿಸಿದರು.

ನಾವು ಪಕ್ಷ ನಿಷ್ಟರಾಗಿದ್ದವು. ನಮಗೆ ಪಕ್ಷ ಬಿಡುವ ಮನಸ್ಸಿರಲಿಲ್ಲ. ಎಲ್ಲಾ ಅನರ್ಹ ಶಾಸಕರು ನಿಷ್ಟರಾಗಿದ್ದವು ಆದರೆ ನಮ್ಮ ಪಕ್ಷದಲ್ಲಿ ನಮ್ಮನ್ನ ಶಾಸಕರ ರೀತಿ ನೋಡಿಕೊಳ್ಳಲೇ ಇಲ್ಲ. ಶಾಸಕರಿಗೆ ನೀಡಬೇಕಾದ ಬೆಲೆಯನ್ನ ಕೊಡಲಿಲ್ಲ.  ಎರಡು ಪಕ್ಷದ ನಾಯಕರು ನಮ್ಮನ್ನ ಕೀಳಾಗಿ ನಡೆಸಿಕೊಂಡರು ಎಂದು ನಂಜಾವಧೂತ ಶ್ರೀಗಳ ಬಳಿ ಎಸ್.ಟಿ ಸೋಮಶೇಖರ್ ತಮ್ಮ ಅಳಲು ತೋಡಿಕೊಂಡರು.

ಇನ್ನು ನಾನೇ ಎಲ್ಲ ಶಾಸಕರನ್ನ ಸಮಾಧಾನ ಪಡಿಸಿ ಸಿದ್ಧರಾಮಯ್ಯ ಬಳಿ ಕರೆದುಕೊಂಡು ಹೋಗಿದ್ದೆ. ನನ್ನ ಬೆಳೆಸಿದ ಪರಮೇಶ್ವರ್ ಬಳಿಯೂ ಕರೆದೊಯ್ದಿದ್ದೆ. ರಾಹುಲ್ ಗಾಂಧಿ ಗಮನಕ್ಕೂ ತಂದಿದ್ದೆ. ಆದರೆ ಯಾವ ನಾಯಕರೂ ನಮ್ಮ ಬಗ್ಗೆ ಕಾಳಜಿ ವಹಿಸಲಿಲ್ಲ. ನಮ್ಮ ಸಮಸ್ಯೆಗಳು ಗೊತ್ತಿದ್ದರೂ ಪರಿಹರಿಸಲು ಮುಂದಾಗಲಿಲ್ಲ. ನಾನು ಬಿಡಿಎ ಅಧ್ಯಕ್ಷನಾಗಿದ್ದರೂ ಕೆಲಸ ಮಾಡಲು ಹೆಚ್.ಡಿ ಕುಮಾರಸ್ವಾಮಿ ಬಿಡಲಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಆರೋಪಿಸಿದರು.

Key words:  BJP candidate -ST Somashekhar – meet-nanjavadootha shri-expressed – displeasure –Congress-JDS leaders.