ಡಿ.ದೇವರಾಜ ಅರಸು ಅವರ ಜನ್ಮದಿನ: ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರ ಮತ್ತೆ ಪ್ರಸ್ತಾಪಿಸಿದ ಹೆಚ್.ವಿಶ್ವನಾಥ್…

ಮೈಸೂರು,ಆ,20,2020(www.justkannada.in):  ಇತ್ತೀಚೆಗೆ ಹುಣಸೂರು ತಾಲ್ಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಇದೀಗ ಇದೇ ವಿಚಾರವನ್ನ ಮತ್ತೆ ಪ್ರಸ್ತಾಪಿಸಿದ್ದಾರೆ.birthday-d-devaraj-arasu-mlc-h-vishwanath-separate-district-hunsur

ಈಗಲೂ ನಾನು ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರಕ್ಕೆ ಬದ್ದನಾಗಿದ್ದೇನೆ ಎಂದು ಎಂಎಲ್ ಸಿ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ. ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ  ಡಿ.ದೇವರಾಜ್ ಅರಸುರವರ 105 ಜನ್ಮ ದಿನ ಹಿನ್ನಲೆ ಕಲಾಮಂದಿರದ ಮನೆಯಂಗಳದಲ್ಲಿ ಜಿಲ್ಲಾಡಳಿತ,  ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.  ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಹೆಚ್. ವಿಶ್ವನಾಥ್ ಚಾಲನೆ ನೀಡಿದರು. ನಂತರ ದೇವರಾಜ್ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಬಳಿಕ ಮಾತನಾಡಿದ ಹೆಚ್.ವಿಶ್ವನಾಥ್,  ನಾವು ದೇವರಾಜ ಅರಸು ಅವರ ಜನ್ಮದಿನದಂದು ಒಂದು ಸಂಕಲ್ಪ ಮಾಡಿದ್ದೇವೆ. ಅವರ ಹೆಸರಿ‌ನಲ್ಲಿ ಜಿಲ್ಲೆ ಮಾಡಿ ದೇವರಾಜ ಹೆಸರಲ್ಲಿ ಅಭಿವೃದ್ಧಿ ಆಗಬೇಕು. ಸಾಮಾಜಿಕ ನ್ಯಾಯದ ಮೂಲಕ ಒಂದು ಅಲೆ ಎಬ್ಬಿಸಿದ್ದವರು ಅರಸು.ಸೂರ್ಯಚಂದ್ರರರು ಇರುವವರೆಗೂ ಅವರ ಹೆಸರು ಉಳಿಯಬೇಕು ಎನ್ನುವ ಮೂಲಕ ಮತ್ತೆ ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದರು.birthday-d-devaraj-arasu-mlc-h-vishwanath-separate-district-hunsur

 

ಹುಣಸೂರಿಗೆ ಇಬ್ಬರು ಶಾಸಕರು ಇದ್ದೇವೆ. ಒಂದು ಮಂಜುನಾಥ್ ಮತ್ತೊಂದು ವಿಶ್ವನಾಥ್. ನಮ್ಮ ಇಬ್ಬರ ಗುರಿ ಹುಣಸೂರಿನ ಅಭಿವೃದ್ಧಿ. ನಮ್ಮ ವೈಯಕ್ತಿಕ ಹಿತಾಸಕ್ತಿ ಬಿಟ್ಟು ಅಭಿವೃದ್ಧಿ ಮಾಡುತ್ತೇವೆ. ಈಗಲೂ ನಾನು ಜಿಲ್ಲೆ ವಿಚಾರ ಬದ್ದನಾಗಿದ್ದೇನೆ. ನಾವು ಇನ್ನು ಸರ್ಕಾರಕ್ಕೆ ಯಾವುದೇ ಮನವಿ ಕೊಟ್ಟಿಲ್ಲ. ಆರು ತಾಲ್ಲೂಕನ್ನು ನಾವು ವಿಶ್ವಾಸಕ್ಕೆ ತೆಗೆದುಕೊಂಡು, ಹೋರಾಟ ಸಮಿತಿ ರಚನೆ ಮಾಡಿ ನಂತರ ಸರ್ಕಾರವನ್ನು ಭೇಟಿ ಮಾಡುತ್ತೇವೆ ಎಂದು ಎಂಎಲ್ ಸಿ ವಿಶ್ವನಾಥ್  ತಿಳಿಸಿದರು.

Key words: Birthday – D. Devaraj Arasu-MLC-H. Vishwanath – separate -district – Hunsur.