ಬೈಕ್ ,ಟಿವಿ, ಫ್ರಿಡ್ಜ್ ಇದೆ ಅಂತಾ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡಿದ್ರೆ ತಪ್ಪಾಗುತ್ತೆ- ಸಚಿವ ಉಮೇಶ್ ಕತ್ತಿ ನಿರ್ಧಾರಕ್ಕೆ ಸ್ವಪಕ್ಷದ ಶಾಸಕರಿಂದಲೇ ವಿರೋಧ…

ಬಳ್ಳಾರಿ,ಫೆಬ್ರವರಿ,15,2021(www.justkannada.in): ಮನೆಯಲ್ಲಿ ಬೈಕ್ ,ಟಿವಿ, ಫ್ರಿಡ್ಜ್  ಇರುವವರಿಗೆ ಬಿಪಿಎಲ್ ಕಾರ್ಡ್ ರದ್ಧು ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಆಹಾರ ಸಚಿವ ಉಮೇಶ್ ಕತ್ತಿ ವಿರುದ್ಧ ಸ್ವಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.jk

ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿರುವ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ, ಬೈಕ್ ,ಟಿವಿ, ಫ್ರಿಡ್ಜ್ ಇದೆ ಅಂತಾ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡಿದ್ರೆ ತಪ್ಪಾಗುತ್ತೆ. ಜನರು ಲೋನ್ ಮಾಡಿಯಾದ್ರೂ ಬೈಕ್ ತೆಗೆದುಕೊಂಡಿರುತ್ತಾರೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಟಿ.ವಿ, ಫ್ರಿಡ್ಜ್, ಬೈಕ್ ಇದ್ದೇ ಇರುತ್ತದೆ. ಹಾಗಂತ ಬಿಪಿಎಲ್ ಕಾರ್ಡ್ ರದ್ದು ಮಾಡಿದರೇ  ತಪ್ಪಾಗುತ್ತದೆ. ಈ ನಿರ್ಧಾರ ಸರಿಯಲ್ಲ. ಆ ರೀತಿ ನಿಯಮ ಮಾಡಿದರೇ ದೊಡ್ಡ ತಪ್ಪಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.bike-TV- fridge-Opposition - Minister -Umesh katti-MLA Somashekar

ಇನ್ನು ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸಲು ಟಿವಿ ಬೇಕು. ನಿಜವಾದ ಬಡವರನ್ನ ಆರ್ಥಿಕಮಟ್ಟದಿಂದ ಗುರುತಿಸಬೇಕು ಎಂದು ಸಚಿವ ಉಮೇಶ್ ಕತ್ತಿಗೆ ಶಾಸಕ ಸೋಮಶೇಖರ್ ರೆಡ್ಡಿ ಸಲಹೆ ನೀಡಿದ್ದಾರೆ.  ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಕಾಂಗ್ರೆಸ್ ಸೇರಿ ಜನಸಾಮಾನ್ಯರೂ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: bike-TV- fridge-Opposition – Minister -Umesh katti-MLA Somashekar