ಮಳೆಯಿಂದ ಧರೆಗುರುಳಿದ್ಧ ಮರಕ್ಕೆ ಬೈಕ್ ಡಿಕ್ಕಿ: ಸವಾರ ಸಾವು.

Promotion

ಬೆಂಗಳೂರು,ಅಕ್ಟೋಬರ್,4,2021(www.justkannada.in):  ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಧರೆಗುರುಳಿದ್ಧ ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಮುಂಜಾನೆ 4.30ರ ವೇಳೆಗೆ ಈ ಘಟನೆ ನಡೆದಿದೆ.  ನಾಗರಾಜ್ ಮೃತಪಟ್ಟ ಬೈಕ್ ಸವಾರ. ನಿನ್ನೆ ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಮರ ಧರೆಗುರುಳಿತ್ತು. ಈ ನಡುವೆ ಮುಂಜಾನೆ ಅಂಗಡಿ ತೆರೆಯಲು ಬೈಕ್ ನಲ್ಲಿ ಆಗಮಿಸುತ್ತಿದ್ಧ ನಾಗರಾಜ್ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ.nice road-Car overturn-driver-death 

ಈ ವೇಳೆ ನಾಗರಾಜ್ ತ ಲೆಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

Key words: Bike -collision – rain-drenched- tree-death – rider.