ಕ್ಯಾಂಟರ್ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ದುರ್ಮರಣ.

ಕೋಲಾರ,ಅಕ್ಟೋಬರ್,8,2022(www.justkannada.in): ಕ್ಯಾಂಟರ್ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು  ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಹೊರವಲಯದ ಕೋಲಾರಮ್ಮ ಕೆರೆ ಬಳಿ ಈ ಘಟನೆ ನಡೆದಿದೆ.  ಶಬ್ಬಿ ಉಲ್ಲಾ ಬೇಗ್( 41) ಇರ್ಷಾದ್ ಉಲ್ಲಾ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇಬ್ಬರು ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಬೇತಮಂಗಲ ನಿವಾಸಿಗಳಾಗಿದ್ದಾರೆ.

ಬೈಕ್ ಗೆ ಕ್ಯಾಂಟರ್ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.  ಕೋಲಾರ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: bike -canter –collision- Two people –death-kolar