ಬಿಗ್ ಬಾಸ್ ಕನ್ನಡ: ಯಾವಾಗ ಶುರು ಆಗುತ್ತೆ? ಎಂಬ ಪ್ರಶ್ನೆಗೆ ಸಿಕ್ಕಿದೆ ಉತ್ತರ !

kannada t-shirts

ಬೆಂಗಳೂರು, ಜುಲೈ 13, 2022 (www.justkannada.in): ಸಾಕಷ್ಟು ಅಭಿಮಾನಿಗಳನ್ನು ಸೆಳೆಯುವ ಬಿಗ್ ಬಾಸ್ ಕನ್ನಡದ ಮತ್ತೊಂದು ಸೀಸನ್ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಗುವ ಕಾಲ ಬಂದಿದೆ.

ಹೌದು. ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಬಿಗ್ ಬಾಸ್ 9 ಶುರು ಮಾಡುತ್ತಿರುವುದರ ಬಗ್ಗೆ ಸುಳಿವು ನೀಡಿದ್ದಾರೆ.

ಬಿಗ್ ಬಾಸ್ 9 ಕ್ಕೆ ಬೇಕಾದ ಮನೆ ಸೆಟ್ ಅಪ್ ಮಾಡಲಾಗುತ್ತಿದೆ ಎಂದು ಪರಮೇಶ್ವರ್ ಗುಂಡ್ಕಲ್ ಮಾಹಿತಿ ಹಂಚಿಕೊಂಡಿದ್ದಾರೆ.

ಮೂಲಗಳ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ ಆಗಸ್ಟ್ ನಲ್ಲಿ ಆರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.

ಈ ಮೂಲಕ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ ಸದ್ಯದಲ್ಲೇ ಆರಂಭವಾಗಲಿದೆ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ. ಜತೆಗೆ ಯಾರು ಯಾರು ಬಿಗ್ ಮನೆ ಸೇರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

website developers in mysore