ಅಕ್ಟೋಬರ್ 8ರಿಂದ ಬಿಗ್ ಬಾಸ್ ಕನ್ನಡ ಗ್ರ್ಯಾಂಡ್ ಓಪನಿಂಗ್ !

Promotion

ಬೆಂಗಳೂರು, ಸೆಪ್ಟೆಂಬರ್ 28, 2023 (www.justkannada.in): ಅಕ್ಟೋಬರ್‌ 8ರಂದು ಬಹು ನಿರೀಕ್ಷೆಯ ಕಿರುತೆರೆ ಶೋ ಬಿಗ್‌ ಬಾಸ್‌ ಗ್ರ್ಯಾಂಡ್‌ ಓಪನಿಂಗ್‌ ಮೂಲಕ ಕಾರ್ಯಕ್ರಮ ತೆರೆಮೇಲೆ ಬರಲಿದೆ.

ಕಿಚ್ಚ ಸುದೀಪ್‌ ಅಭಿಮಾನಿಗಳು, ಬಿಗ್‌ಬಾಸ್‌ ಫ್ಲ್ಯಾನ್ಸ್‌ ಕಾತರದಿಂದ ಕಾಯುತ್ತಿರುವ ಕಾರ್ಯಕ್ರಮ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.

ಕಾರ್ಯಕ್ರಮದ ಮೊದಲ ದಿನ ಸ್ಪರ್ಧಿಗಳನ್ನು ಪರಿಚಯಿಸುವ ಕಾರ್ಯಕ್ರಮ ಹಿನ್ನೆಲೆ ಶೋ ಸಂಜೆ 6 ಗಂಟೆಯಿಂದಲೇ ಆರಂಭವಾಗಲಿದೆ. ನಂತರ  ಪ್ರತಿದಿನ ರಾತ್ರಿ 9.30ಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗಲಿದೆ.

ಬಿಗ್ ಬಾಸ್ ಹೊಸ ಸೀಸನ್ ಆರಂಭಕ್ಕೆ ಇನ್ನು ಕೆಲವೇ ದಿನ ಉಳಿದಿದೆ. ಹೀಗಾಗಿ ಕಿಚ್ಚ ಸುದೀಪ್‌ ಹೊಸ ಪ್ರೋಮೊ ಶೇರ್‌ ಮಾಡಿ ಕಾರ್ಯಕ್ರಮದ ಸಮಯವನ್ನು ತಿಳಿಸಿದ್ದಾರೆ.