ಬಿಗ್ ಬಾಸ್ ಕನ್ನಡ ಈ ವಾರ ಫೈನಲ್ಸ್! ಸ್ಪರ್ಧಿಗಳಿಗೆ ಅಡುಗೆ ಮಾಡಿ ಕಳುಹಿಸಿಕೊಟ್ಟ ಕಿಚ್ಚ!

ಬೆಂಗಳೂರು, ಆಗಸ್ಟ್ 4, 2021 (www.justkannada.in): ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ 8 ನೇ ಆವೃತ್ತಿ ಫೈನಲ್ ಈ ವಾರ ನಡೆಯಲಿದೆ.

ಮತ್ತೊಂದು ವಿಶೇಷ ಎಂದರೆ ಮನೆಯವರಿಗೆಲ್ಲಾ ಪ್ರತ್ಯೇಕವಾಗಿ ಸ್ವತಃ ಕಿಚ್ಚ ಸುದೀಪ್ ಅಡುಗೆ ಮಾಡಿ ಪ್ಯಾಕ್ ಮಾಡಿ ಜೊತೆಗೊಂದು ಒಕ್ಕಣೆ ಬರೆದು ಕಳುಹಿಸಿಕೊಟ್ಟಿದ್ದಾರೆ.

ಕಿಚ್ಚನ ಕೈಯಡುಗೆ ಸವಿದ ಸ್ಪರ್ಧಿಗಳು ಸಂಭ್ರಮಿಸಿದ್ದಾರೆ. ಇನ್ನು ಫೈನಲ‍್ ನಲಲಿ ಗೆದ್ದು ಯಾರು ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.