ನೈಟ್ ಕರ್ಫ್ಯೂ: ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್ !

ಬೆಂಗಳೂರು, ಡಿಸೆಂಬರ್ 30, 2021 (www.justkannada.in): ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿದ್ದ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ಪೊಲೀಸರು ಮುಚ್ಚಿಸುತ್ತಿದ್ದ ವೇಳೆ ಗೆಳೆಯನ ಜೊತೆ ಬಂದಿದ್ದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್ ಮಾಡಿಕೊಂಡಿದ್ದಾರೆ.

10 ಗಂಟೆ ಬಳಿಕವೂ ಎಂಜಿ ರಸ್ತೆಯಲ್ಲಿ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಓಡಾಡುತ್ತಿದ್ದು ಇದನ್ನು ಪ್ರಶ್ನಿಸಿದ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.

ಇದನ್ನು ಮಾಧ್ಯಮದವರೂ ಸೆರೆಹಿಡಿಯಲು ಮುಂದಾದಾಗ ದಿವ್ಯಾ ಸುರೇಶ್ ಮತ್ತು ಸ್ನೇಹಿತ ಮಾಧ್ಯಮದವರ ಕ್ಯಾಮೆರಾವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ.

ಬಳಿಕ ಪೊಲೀಸರು ಬುಕ್ ಮಾಡಿರುವ ಕ್ಯಾಬ್ ಬಂದಿದ್ದು ಹೋಗುವಂತೆ ಪೊಲೀಸರು ಸೂಚಿಸಿದ ಬಳಿಕ ಇಬ್ಬರು ಅಲ್ಲಿಂದ ತೆರಳಿದ್ದಾರೆ.