ಅನಿಲ್ ಕುಂಬ್ಳೆ ಮನೆ ಆತಿಥ್ಯ: ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಫುಲ್ ಖುಷ್

Promotion

ಬೆಂಗಳೂರು, ಮಾರ್ಚ್ 06, 2020 (www.justkannada.in): ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮಾಜಿ ಕ್ರಿಕೆಟಿಗ  ಅನಿಲ್ ಕುಂಬ್ಳೆ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರ ಜೊತೆ ಕಾಲಕಳೆದಿದ್ದಾರೆ.

ಈ ಬಗ್ಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಶೈನ್, ನಾನು ಅನಿಲ್ ಕುಂಬ್ಳೆ ಸರ್ ಮನೆಗೆ ಭೇಟಿ ನೀಡಿದ್ದೆ.  ಚೇತನಾ ಕುಂಬ್ಳೆ ಅವರು ಒಳ್ಳೆಯ ಆತಿಥ್ಯ ನೀಡಿದರು. ಕುಂಬ್ಳೆಯವರ ಜೊತೆ ಒಂದು ಒಳ್ಳೆಯ ಸಂಜೆಯನ್ನು ಕಳೆದ ನಾನು ಧನ್ಯ. ನಮ್ಮ ದೇಶದ ಹೆಮ್ಮ ಅನಿಲ್ ಕುಂಬ್ಳೆ ಅವರು ತುಂಬ ಸರಳ ವ್ಯಕ್ತಿ ಎಂದು ಬರೆದುಕೊಂಡಿದ್ದಾರೆ.

ಸ್ವತಃ ಅನಿಲ್ ಕುಂಬ್ಳೆ ಅವರೇ ಶೈನ್ ಅವರಿಗೆ ಫೋನ್ ಮಾಡಿ ಆಹ್ವಾನ ನೀಡಿದ್ದರು ಎನ್ನಲಾಗಿದೆ. ಕುಂಬ್ಳೆ ಕುಟುಂಬ ಬಿಗ್‍ಬಾಸ್‍ನಲ್ಲಿ ಶೈನ್ ಶೆಟ್ಟಿ ಅವರ ಅಭಿಮಾನಿಗಳಾಗಿದ್ದು, ಅವರನ್ನು ಮಾತನಾಡಿಸಬೇಕು ಎಂದಿದ್ದರಂತೆ.