ಇನ್ಮುಂದೆ ‘ಬಿಗ್ ಬಿಜಾರ್ ‘ಗಳಿಲ್ಲ: ಪ್ಯೂಚರ್ ಗ್ರೂಪ್‌ ನ ಸ್ವಾಮ್ಯತೆ ಹೊಂದುವ ಅಮೇಜಾನ್‌ ಗೆ ಶಾಕ್ ಕೊಟ್ಟ ರಿಲೈಯನ್ಸ್

kannada t-shirts

ಮುಂಬೈ, ಮಾರ್ಚ್ 7, 2022 (www.justkannada.in): ಕಳೆದ ವಾರ ಮುಂಬೈನಲ್ಲಿ ಫ್ಯೂಚರ್ ರೀಟೆಲ್‌ ನ ಬೃಹತ್ ಸೂಪರ್‌ಮಾರ್ಕೆಟ್ ಒಂದರಲ್ಲಿ ಕಾರ್ಮಿಕರು ರಿಲೈಯನ್ಸ್ ಗೆ ಸೇರಿದಂತಹ ಕ್ರೇಟ್‌ ಗಳಲ್ಲಿ ಪ್ರಕಾಶಮಾನವಾಗಿರುವಂತಹ ನೀಲಿ ಬಣ್ಣದ ದಿನಸಿ ವಸ್ತುಗಳ ಸರಕನ್ನು ಅನ್‌ಲೋಡ್ ಮಾಡುತ್ತಿದ್ದರು.

ಶಾಪಿಂಗ್ ಮಾಡಲು ಆಗಮಿಸಿದಂತಹ ಗ್ರಾಹಕರನ್ನು ಭದ್ರತಾ ಸಿಬ್ಬಂದಿಗಳು ಹಿಂದಕ್ಕೆ ಕಳುಹಿಸುತ್ತಿರುವುದು ಕಂಡು ಬಂತು. ಶಾಪಿಂಗ್ ಮಾಡಲು ಬಂದಂತಹ ಗ್ರಾಹಕರು ಬಿಗ್ ಬಜಾರ್ ಮುಚ್ಚಿರುವುದನ್ನು ಕಂಡು ಬಹಳ ನಿರಾಸೆಯಿಂದ ಹಿಂದುರುಗಿತ್ತಿರುವುದು ಕಂಡು ಬಂದು. ‘ಬಿಗ್ ಬಜಾರ್’ ಫ್ಯೂಚರ್ ಗ್ರೂಪ್‌ನ ಭಾರತದ ಅತಿ ದೊಡ್ಡ ಬ್ರ್ಯಾಂಡ್ ಆಗಿದೆ. ಆದರೆ ಇನ್ನು ಮುಂದೆ ಈ ಸೂಪರ್ ಮಾರ್ಕೆಟ್‌ಗಳು ರಿಲೈಯನ್ಸ್ ಔಟ್‌ಲೆಟ್‌ಗಳೆಂದು ಗುರುತಿಸಿಕೊಳ್ಳುತ್ತವೆ.

ಭಾರತದಾದ್ಯಂತ ಎಲ್ಲಾ ಬಿಗ್ ಬಜಾರ್ ಮಳಿಗೆಗಳಲ್ಲಿಯೂ ಇದೇ ರೀತಿಯ ಸನ್ನಿವೇಶಗಳು ಗೋಚರಿಸಿದವು. ಭಾರತದ ಅತಿ ದೊಡ್ಡ ವ್ಯಾಪಾರಿ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಮುಂದಾಳತ್ವದಲ್ಲಿ ನಡೆಯುತ್ತಿರುವ ರಿಲೈಯನಸ್ ಇಂಡಸ್ಟ್ರೀಸ್ ಫ್ಯೂಚರ್ ಗ್ರೂಪ್‌ ನ ಬಿಗ್ ಬಜಾರ್ ಸಮೂಹವನ್ನು ಖರೀದಿಸಿದ್ದಾರೆ. ಈ ಸಮೂಹವನ್ನು ಅಮೆಜಾನ್.ಕಾಂ ಖರೀದಿಸಲು ಪ್ರಯತ್ನಿಸುತಿತ್ತು.

ಕಾರ್ಪೊರೇಟ್ ವಲಯದ ಎರಡು ಬೃಹತ್ ಸಂಸ್ಥೆಗಳ ನಡುವಿನ ವಿವಾದಲ್ಲಿ ಅಮೆಜಾನ್, ರೂ.೨೬,೭೪೮ ಕೋಟಿ ಮೊತ್ತದಲ್ಲಿ ಫ್ಯೂಚರ್ ಗ್ರೂಫ್‌ನ ರೀಟೆಲ್ ಆಸ್ತಿಗಳನ್ನು ರಿಲೈಯನ್ಸ್ ಖರೀದಿಸುವ ಯೋಜನೆಯನ್ನು ಸ್ಥಗಿತಗೊಳಿಸಲು ಪ್ರಕರಣವನ್ನು ದಾಖಲಿಸಿದ್ದು, ಪ್ರಸ್ತುತ ಈ ಪ್ರಕರಣ ಭಾರತದ ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿದೆ.

ಈ ನಡುವೆ ಫ್ಯೂಚರ್ ಗ್ರೂಪ್‌ ನ ರೀಟೆಲ್ ಮಳಿಗೆಗಳಾಧ ‘ಬಿಗ್ ಬಜಾರ್’ ಗಳನ್ನು ರಿಲೈಯನ್ಸ್ ಫೆಬ್ರವರಿ ೨೫ರಿಂದ ವಶಕ್ಕೆ ತೆಗೆದುಕೊಳ್ಳಲು ಆರಂಭಿಸಿ, ರಿಲೈಯನ್ಸ್ ನ ಸಿಬ್ಬಂದಿಗಳು ದೇಶದಾದ್ಯಂತ ಎಲ್ಲಾ ಬಿಗ್ ಬಜಾರ್ ಮಳಿಗೆಗಳಲ್ಲಿ ಕಾರ್ಯನಿರತರಾಗಿರುವುದು ಸಾಮಾನ್ಯ ದೃಶ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಫ್ಯೂಚರ್ ಸಮೂಹದ ನಿರ್ವಹನೆಯಡಿ ಇರುವಂತಹ ಅನೇಕ ಸಿಬ್ಬಂದಿಗಳು ಆತಂಕಕ್ಕೀಡಾಗಿದ್ದು, ತಮ್ಮ ಮೇಲಧಿಕಾರಿಗಳಿಗೆ ಆತಂಕದಿಂದ ತಮ್ಮ ಹುದ್ದೆಗಳ ಅಸ್ಥಿತ್ವದ ಕುರಿತು ದೂರವಾಣಿ ಕರೆಗಳನ್ನು ಮಾಡಲಾರಂಭಿಸಿದ್ದಾರೆ.

ಈ ಸಂಬಂಧ ಮಾತನಾಡಿದ ನವದೆಹಲಿಯ ಬಿಗ್ ಬಜಾರ್ ಮಳಿಗೆಯ ಓರ್ವ ಸಿಬ್ಬಂದಿ, “ನಮಗೆ ಇದು ಆತಂಕದ ಕ್ಷಣಗಳಾಗಿವೆ, ಎಲ್ಲರೂ ಆತಂಕಕ್ಕೀಡಾಗಿದ್ದಾರೆ. ಅವರೆಲ್ಲರು ಯಾರು ಎಂದು ನಮಗೆ ಗೊತ್ತೇ ಇರಲಿಲ್ಲ. ಅವರು ಮಳಿಗೆಯನ್ನು ವಶಕ್ಕೆ ತೆಗೆದುಕೊಳ್ಳಲು ಬಂದರು, ಈ ಕುರಿತು ನಮ್ಮ ಮೇಲಾಧಿಕಾರಿಗಳಿಗೂ ಮಾಹಿತಿ ಇರಲಿಲ್ಲ,” ಎಂದಿದ್ದಾರೆ.

ಹರ್ಯಾಣದ ಸೋನಿಪತ್‌ ನಲ್ಲಿರುವ ಒಂದು ಫ್ಯೂಚರ್ ಸ್ಟೋರ್‌ ಗೆ ಆಗಮಿಸಿದಂತಹ ಗ್ರಾಹಕರನ್ನು ಹಿಂದಿರುಗಿ ಕಳುಹಿಸಲಾಯಿತು. ಅದೇ ರೀತಿ ಪಶ್ಚಿಮ ಗುಜರಾತ್ ವಡೋದರಾದಲ್ಲಿರುವ ಫ್ಯೂಚರ್ ಸಂಸ್ಥೆಯ ಉದ್ಯೋಗಿಗಳು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಆಗಮಿಸಿದಾಗ ಅವರನ್ನು ಯಾವುದೇ ವಿವರಣೆ ನೀಡದೆ ಹಿಂದಿರುಗಿ ಕಳುಹಿಸಲಾಗಿದೆ.

ಫ್ಯೂಚರ್ ಗ್ರೂಪ್‌ನಿಂದ ಹಣ ಪಾವತಿ ಆಗದಿರುವ ಹಿನ್ನೆಲೆಯಲ್ಲಿ ರಿಲೈಯನ್ಸ್ ದೇಶದಾದ್ಯಂತ ಫ್ಯೂಚರ್ ಗ್ರೂಪ್‌ ನ ಸುಮಾರು ಬಿಗ್ ಬಜಾರ್ ಮಳಿಗೆಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಇನ್ನೂ ೨೫೦ ರೀಟೆಲ್ ಮಳಿಗೆಗಳನ್ನು ವಶಕ್ಕೆ ಪಡೆದುಕೊಳ್ಳಲು ಯೋಜಿಸಿದೆ.

ಕಾನೂನು ವಿವಾದದಲ್ಲಿ ರಿಲೈಯನ್ಸ್ ಸಂಸ್ಥೆ ಸಾರ್ವಜನಿಕವಾಗಿ ದೊಡ್ಡ ಪಾತ್ರವನ್ನು ನಿರ್ವಹಿಸದೇ ಇದ್ದರೂ ಸಹ, ಮೂಲಗಳ ಪ್ರಕಾರ, ಭಾರತದ ನಂ.೨ ನೇ ಸ್ಥಾನದಲ್ಲಿದ್ದಂತಹ ನಗದು ಸಂಕಷ್ಟದಲ್ಲಿದ್ದಂತಹ ಫ್ಯೂಚರ್ ಗ್ರೂಪ್‌ನ ಅನೇಕ ಆಸ್ತಿಗಳನ್ನು ವಶಕ್ಕೆ ತೆಗೆದುಕೊಂಡಿತು.

ರಿಲೈಯನ್ಸ್ ಸಂಸ್ಥೆಯ ವತಿಯಿಂದ ಫ್ಯೂಚರ್ ಗ್ರೂಪ್‌ನ ಮಳಿಗೆಗಳನ್ನು ವಶಕ್ಕೆ ತೆಗೆದುಕೊಂಡಿರುವ ಈ ಪ್ರಕ್ರಿಯೆ, ಕೆಲವು ವಿಶ್ಲೇಷಕರ ಪ್ರಕಾರ, ರಿಲೈಯನ್ಸ್ ಗೆ ಫ್ಯೂಚರ್‌ ನ ಆಸ್ತಿಗಳ ವರ್ಗಾವಣೆಯನ್ನು ತಡೆಯುವ ಅಮೇಜಾನ್‌ ನ ಯೋಜನೆಯನ್ನು ನಾಶಪಡಿಸಿದಂತಹ ಒಂದು ದಾಳಿಯಾಗಿದೆ. ಯುಎಸ್‌ ನ ಇ-ವಾಣಿಜ್ಯ ವಲಯದ ರಾಕ್ಷಸ ಸಂಸ್ಥೆ ಅಮೆಜಾನ್, ಎರಡು ಭಾರತೀಯ ಮೂಲದ ಕಂಪನಿಗಳ ನಡುವಿನ ೨೦೨೦ರ ಒಪ್ಪಂದವನ್ನು ಬ್ಲಾಕ್ ಮಾಡುವ ಸಂಬಂಧ ನಡೆಸಿದಂತಹ ಸರಣಿ ಕಾನೂನು ಹೋರಾಟಗಳ ವಿಜಯದ ಹೊರತಾಗಿಯೂ ಈ ಬೆಳವಣಿಗೆಯಾಗಿದೆ.

ಯುಎಸ್ ಮೂಲದ ಅಮೆಜಾನ್‌ ನ ಕಾನೂನು ವಿವಾದ ಕುರಿತು ಮಾಹಿತಿ ಇರುವಂತಹ ನಿಕಟವಾದ ಮೂಲವೊಂದರ ಪ್ರಕಾರ, “ಈಗ ಅಮೆಜಾನ್ ಯಾವುದಕ್ಕಾಗಿ ಹೋರಾಡುತ್ತದೆ? ಮಳಿಗೆಗಳೆಲ್ಲವೂ ಹೋಗಿವೆ,” ಎಂದಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಲು ರಿಲೈಯನ್ಸ್, ಅಮೆಜಾನ್ ಹಾಗೂ ಫ್ಯೂಚರ್‌ನ ಪ್ರತಿನಿಧಿಗಳು ಲಭ್ಯವಾಗಲಿಲ್ಲ. ಈ ವಿವಾದದ ಸೂಕ್ಷ್ಮತೆಯಿಂದಾಗಿ ಸಿಬ್ಬಂದಿಗಳಾಗಲೀ, ಅಥವಾ ಅಧಿಕಾರಿಗಳಾಗಲೀ ಮಾಧ್ಯಮಗಳ ಕೈಗೆ ದೊರೆಯದಿರುವಂತೆ ಸೂಚಿಸಲಾಗಿದೆ ಎಂದು ಮೂಲಗಳ ಮೂಲಕ ತಿಳಿದು ಬಂದಿದೆ.

ಸುದ್ದಿ ಮುಲ: ಡೆಕ್ಕನ್ ಹೆರಾಲ್ಡ್

Key words: Big Bizar- Reliance – Amazon

website developers in mysore