ಅಪಾಯಮಟ್ಟ ಮೀರಿ ಹರಿಯುತ್ತಿರುವ ಭೀಮಾ ನದಿ: ಗ್ರಾಮದ ಮನೆಗಳು ದೇಗುಲ ಜಲಾವೃತ…

ಕಲಬುರುಗಿ,ಅಕ್ಟೋಬರ್,18,2020(www.justkannada.in):  ಭಾರಿ ಮಳೆಯಾದ ಹಿನ್ನೆಲೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಭೀಮಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ.jk-logo-justkannada-logo

ಭೀಮಾ ನದಿ ನೀರು ನುಗ್ಗಿ ಕಲಬುರುಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಗಾಣಗಾಪುರದಲ್ಲಿ ಹಲವು ಮನೆಗಳು ಮತ್ತು ದೇಗುಲಗಳು ಜಲಾವೃತವಾಗಿದೆ. ಕಲ್ಲೇಶ್ವರ ದೇಗುಲ ಸೇರಿ ಹಲವು ದೇಗುಲ ಮತ್ತು ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು ಗ್ರಾಮದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.Bhima River-  flows –danger-kalburgi-Village -flood

ಹಾಗಯೇ ಅಫಜಲಪುರ ತಾಲ್ಲೂಕಿನ ಕೆರಕನಹಳ್ಳಿ ಗ್ರಾಮವೂ ಸಹ ಭೀಮಾ ನದಿ ನೀರಿನಿಂದ ಜಲಾವೃತವಾಗಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಭೀಮಾನದಿ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

Key words: Bhima River-  flows –danger-kalburgi-Village -flood