ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್: ರಾಜ್ಯದ ವಿವಿಧೆಡೆ ರೈತರಿಂದ ಪ್ರತಿಭಟನೆ…

ಬೆಂಗಳೂರು,ಡಿಸೆಂಬರ್,8,2020(www.justkannada.in):  ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು ಈ ಹಿನ್ನೆಲೆ ರಾಜ್ಯದಲ್ಲೂ ರೈತ ಸಂಘಟನೆಗಳು ಬಂದ್ ಆಚರಿಸುತ್ತಿವೆ.logo-justkannada-mysore

ರಾಜ್ಯದಲ್ಲೂ ‘ಭಾರತ್ ಬಂದ್’ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾನಿರತ ರೈತರು ಬಸ್​ ನಿಲ್ದಾಣ ಹಾಗೂ ಅಂಗಡಿ-ಮುಂಗಟ್ಟುಗಳನ್ನ ಬಂದ್ ಮಾಡಿಸಿ ಧರಣಿ ನಡೆಸುತ್ತಿದ್ದಾರೆ. ರಾಜ್ಯದೆಲ್ಲಡೆ ರೈತರು ಬೀದಿಗಿಳಿದು ರಸ್ತೆ ತಡೆ ಮಾಡಿ ಹೋರಾಟ ಮಾಡುತ್ತಿದ್ದಾರೆ. ಭಾರತ್​ ಬಂದ್​ನಿಂದ ಬಹುತೇಕ ಭಾಗಗಳಲ್ಲಿ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಬೆಂಗಳೂರಿನ ಯಶವಂತಪುರ ಎಪಿಎಂಸಿ ಆಹಾರ ಧಾನ್ಯ ಸಗಟು ವರ್ತಕರ ಸಂಘ, ಕೆ.ಆರ್. ಮಾರುಕಟ್ಟೆ ವ್ಯಪಾರಿಗಳ ಸಂಘವು ಭಾರತ್ ಬಂದ್ ಗೆ ಬೆಂಬಲ ನೀಡಿದೆ.  ಮಾರುಕಟ್ಟೆಗಳೂ ಬಂದ್ ಆಗಿವೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ರೈತ ಸಂಘಟನೆ ಸದಸ್ಯರು  ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಧಾರವಾಡ ಜ್ಯುಬಿಲಿ ಸರ್ಕಲ್‌ನಲ್ಲಿ ರೈತರು ಹಾಗೂ ಜಯ ಕರ್ನಾಟಕ ಸಂಘಟನೆಯ ಪ್ರತಿಭಟನಾಕಾರರು ಚಕ್ಕಡಿ ಎಳೆದ ಪ್ರತಿಭಟನೆ ಮಾಡಿದರು. ಅಲ್ಲದೆ ಧಾರವಾಡದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿಯಲ್ಲಿ ಮುಂಜಾನೆಯೇ ರೈತರು ಬೀದಿಗಿಳಿದಿದ್ದು, ರಸ್ತೆ ಬಂದ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.Bharat Bandh -opposition - Center's- Agricultural Act- Protests - farmers - state.

ಬೆಳಗಾವಿಯಲ್ಲೂ ರೈತರ ಪ್ರತಿಭಟನೆ ಕಿಚ್ಚು ಜೋರಾಗಿದ್ದು  ಬೆಳಗಾವಿ ಬಸ್ ನಿಲ್ದಾಣದ ಎದುರು ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ  ನಡೆಸಿದ್ದಾರೆ. ಚಾಮರಾಜನಗದಲ್ಲೂ ಬಂದ್​ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಕೊಯಮತ್ತೂರಿನಿಂದ ಮೈಸೂರಿಗೆ ಸಂಚರಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ತಡೆದು ಆಕ್ರೋಶ ಹೊರಹಾಕಿದ್ದಾರೆ.

English summary….

Road block, protests mark Bharath Bundh
Bengaluru, Dec. 8, 2020 (www.justkannada.in): Various organisations have called for a Bharath Bundh today, protesting against the new agricultural laws of the Government of India, and several farmer organisations in the State are also observing bundh.
In Bengaluru, protestors were found to be requesting shopkeepers and owners of commercial establishments to shut doors in several places. Protestors across the State have started demonstrating on the streets. Incidents of block roads have been reported from many places causing inconvenience to commuters.
The APMC Food Grains Wholesale Traders Association, Yeshwanthpur, K.R. Market Vendors Associations have also extended their support and hence all the shops remained closed. However, no untoward incidents have been reported from anywhere.Bharat Bandh -opposition - Center's- Agricultural Act- Protests - farmers - state.
Keywords: Bharath Bundh/ protest/ Government of India/ farmers

Key words: Bharat Bandh -opposition – Center’s- Agricultural Act- Protests – farmers – state.