ಮಾರ್ಚ್ 26 ರಂದು ಭಾರತ್ ಬಂದ್ ಗೆ ಕರೆ…

kannada t-shirts

ಮೈಸೂರು,ಮಾರ್ಚ್,24,2021(www.justkannada.in):  ಬೆಲೆ ಏರಿಕೆ, ಕೃಷಿ ಕಾಯ್ದೆ ಮತ್ತು ಖಾಸಗೀಕರಣವನ್ನು ವಿರೋಧಿಸಿ  ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾದಿಂದ ಮಾರ್ಚ್ 26 ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ.jk

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎ.ಐ.ಟಿ.ಯು.ಸಿ ಸಂಚಾಲಕ ದೇವದಾಸ್, ಮಾರ್ಚ್ 26 ಶುಕ್ರವಾರದಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ಭಾರತ್ ಬಂದ್ ಇರಲಿದೆ. ರೈತರು ಕೃಷಿ ಕಾನೂನುಗಳ ವಾಪಸ್ಸಿಗೆ ಮತ್ತು ಕನಿಷ್ಠ ಬೆಂಬಲ ಬೆಲೆಗೆ ನಿರಂತರ ಹೋರಾಟ ಮಾಡುತ್ತಿದ್ದಾರೆ.ಜೊತೆಗೆ ಕಾರ್ಮಿಕ ವಿರೋಧ ಕಾಯ್ದೆಯನ್ನು ಹಿಂಪಡೆಯುವಂತೆಯೂ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರ ಸರ್ವಾಧಿಕಾರ ಧೋರಣೆ ತೋರುತ್ತಿದೆ. ರೈತವರ್ಗ, ಕಾರ್ಮಿಕ ವರ್ಗಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.Bharat Bandh - March 26th- Oppose -price increases- Agricultural Act - privatization

ರೈತರು ನಿರಂತರ ಹೋರಾಟ ಮಾಡುತ್ತಿದ್ರೂ ಸ್ಪಂಧಿಸದ ಕೇಂದ್ರ ಸರ್ಕಾರದ ನಡೆ ಖಂಡನೀಯ. ಹಾಗಾಗಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಯುವಜನತೆ ನೇತೃತ್ವದಲ್ಲಿ ಬಂದ್ ಮಾಡಲಾಗುತ್ತಿದೆ ಎಂದು ಎ.ಐ.ಟಿ.ಯು.ಸಿ ಸಂಚಾಲಕ ದೇವದಾಸ್ ಮಾಹಿತಿ ನೀಡಿದರು.

Key words: Bharat Bandh – March 26th– Oppose -price increases- Agricultural Act – privatization

website developers in mysore