ಹಲವು ಅಚ್ಚರಿಗಳಿಂದ ತುಂಬಿರುವ ಬೆಂಗಳೂರಿನ ಬಗ್ಗೆ ತಮ್ಮ ಅನುಭವಗಳನ್ನು ಬಿಚ್ಚಿಟ್ಟ ಜಪಾನ್ ಡೆಪ್ಯೂಟಿ ಕೌನ್ಸಲರ್

ಬೆಂಗಳೂರು:ಆ-10:(www.justkannada.in) ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿಂದ ಜಪಾನ್ ಡೆಪ್ಯೂಟಿ ಕೌನ್ಸಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಟ್ಸುಮಾಸಾ ಮಾರು ಅವರು ಬೆಂಗಳೂರಿನಲ್ಲಿ ತಮ್ಮ ಅನುಭವಕ್ಕೆ ಬಂದ ಹಲವಾರು ಅಚ್ಚರಿ, ಅದ್ಭುತ ಹಾಗೂ ಕೂತೂಹಲ ಸಂಗತಿಗಳು ಅನುಭವಕ್ಕೆ ಬಂದಿದ್ದಾಗಿ ಪಟ್ಟಿಮಾಡಿ ತಿಳಿಸಿದ್ದಾರೆ.

ನಾನು ಬೆಂಗಳೂರಿನಲ್ಲಿ ಜಪಾನ್‌ನ ಡೆಪ್ಯೂಟಿ ಕಾನ್ಸುಲ್ ಜನರಲ್ ಆಗಿ ಒಂದು ತಿಂಗಳಿನಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಅವಧಿಯಲ್ಲಿ ನಾನು ಹಲವಾರು ಆಶ್ಚರ್ಯಗಳನ್ನು ಅನುಭವಿಸಿದೆ. ನನಗೆ ಆಶ್ಚರ್ಯವಾಯಿತು, ಏಕೆಂದರೆ ಭಾರತದ ಭೂದೃಶ್ಯಗಳು ಮತ್ತು ಪದ್ಧತಿಗಳು ಜಪಾನ್ ಅಥವಾ ನಾನು ಕೆಲಸ ಮಾಡಿದ ಇತರ ದೇಶಗಳಿಗಿಂತ ಭಿನ್ನವಾಗಿವೆ. ಇಲ್ಲಿಯೂ ಕೂಡ ಅಂತಹ ವ್ಯತ್ಯಾಸಗಳು ಕಾಣಬಹುದೆಂಬ ನಿರೀಕ್ಷೆಯಲ್ಲಿಯೇ ಇದ್ದೆ. ಆದರೆ ನನಗೆ ಆಶ್ಚರ್ಯವಾದ ಸಂಗತಿಯೆಂದರೆ ಬೆಂಗಳೂರು ಮತ್ತು ಜಪಾನ್ ನಡುವಿನ ನಿಕಟ ಸಂಬಂಧ. ಸಾಮ್ಯತೆಗಳು ಕಂದುಬಂದಿದ್ದಾಗಿ ತಿಳಿಸಿದ್ದಾರೆ.

ಮೊದಲನೆಯದಾಗಿ, ಬ್ಯಾಂಕಾಕ್‌ನ ಸುವರಾಣಭೂಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳಲೆಂದು ಕಾಯುತ್ತಿದ್ದಾಗ ಬೆಂಗಳೂರು ವಿಮಾನ ಹತ್ತಲು ಜಪಾನಿನ ಅನೇಕ ಪ್ರಯಾಣಿಕರು ಕಾಯುತ್ತಿರುವುದು ಹಾಗೂ ನಾನು ವಿಮಾನದೊಳಗೆ ಬಂದಾಗ, ಮುಂದಿನ ಸೀಟಿನಲ್ಲಿದ್ದ ಪ್ರಯಾಣಿಕರು ಕೂಡ ಜಪಾನೀಸ್ ಎಂಬುದನ್ನು ಕಂಡು ನನಗೆ ಅಚ್ಚರಿಯಾಯಿತು.

ನನಗೆ ಆಶ್ಚರ್ಯವಾದ ಇನ್ನೊಂದು ವಿಷಯವೆಂದರೆ ನಾನು ತಂಗಿದ್ದ ಹೋಟೆಲ್. ಈ ಹೋಟೆಲ್ ಜಪಾನಿನ ಜನರಿಗೆ ಅನೇಕ ಸೇವೆಗಳು ಮತ್ತು ಸೌಲಭ್ಯಗಳನ್ನು ಹೊಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಆಶ್ಚರ್ಯಗೊಳಿಸಿದ ಸಂಗತಿಯೆಂದರೆ, ಹಲವು ಭಾರತೀಯರು ಜಪಾನಿನ ಶೈಲಿಯ ಸಾರ್ವಜನಿಕ ಸ್ನಾನ “ಸೆಂಟೋ” ನಲ್ಲಿ ಸ್ನಾನ ಮಾಡುತ್ತಿದ್ದರು. ಒಂದು ನಿರ್ದಿಷ್ಟ ಪ್ರಮಾಣದ ಹಣವನ್ನು ಪಾವತಿಸಿದರೆ ರುಚಿಕರವಾದ ಜಪಾನೀಸ್ ಆಹಾರವನ್ನು ಕೂಡ ನಾವಿಲ್ಲಿ ಪಡೆಯಬಹುದಾಗಿದೆ ಎಂಬುದು. ಇನ್ನು ನಾನು ಉಳಿದುಕೊಂಡ ಹೋಟೆಲ್ ನಮಗೆ ಜಪಾನೀಸ್ ಮತ್ತು ಭಾರತೀಯ ಉಪಾಹಾರದ ನಡುವೆ ಒಂದು ಆಯ್ಕೆಯನ್ನು ನೀಡಿತು. ಈ ಹೋಟೆಲ್‌ನಲ್ಲಿರುವ ರೆಸ್ಟೋರೆಂಟ್‌ಗಳು ಮಾತ್ರವಲ್ಲ, ಬೆಂಗಳೂರಿನ ಇತರ ರೆಸ್ಟೋರೆಂಟ್‌ಗಳಲ್ಲಿಯೂ ಸಹ, ಜಪಾನಿನ ಅಡುಗೆಯನ್ನು ತನ್ನ ಗ್ರಾಹಕರಿಗೆ ಹೆಮ್ಮೆಯಿಂದ ಅರ್ಪಿಸುತ್ತಾರೆ.

ವಾಗಶಿ ಎಂಬ ಜಪಾನಿನ ಸಾಂಪ್ರದಾಯಿಕ ಮಿಠಾಯಿಗಳನ್ನು ಪೂರೈಸುವ ರೆಸ್ಟೋರೆಂಟ್ ಸಹ ಇಲ್ಲಿದೆ. ನಾನು ಮೊದಲು ಕೆಲಸ ಮಾಡಿದ ದೇಶಗಳಲ್ಲಿ ಇವುಗಳನ್ನು ಯೋಚಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಇಲ್ಲಿನ ಹೋಟೆಲ್ ರೆಸ್ಟೋರೆಂಟ್‌ ಗಳಲ್ಲಿ ರುಚಿ ರುಚಿಯಾಗಿ ಮನೆಯಲ್ಲಿ ತಯಾರಿಸಿದಂತಹ ನ್ಯಾಟೋ ಮತ್ತು ಭಾರತದಲ್ಲಿ ತಯಾರಾದ ‘ಅಕಡಾಶಿ’ ರೆಡ್ ಮಿಸ್ಸೊವನ್ನು ಕೂಡ ಬಡಿಸಲಾಗುತ್ತದೆ ಎಂಬುದು ವಿಶೇಷ. ಬೆಂಗಳೂರಿಗೂ ಹಾಗೂ ಜಪಾನ್ ಗೂ ಹಲವಾರು ಸಾಮ್ಯತೆಗಳಿರುವುದು ಕಂಡು ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರೀತಿಯ ಓದುಗರೇ, ಕರ್ನಾಟಕ ರಾಜ್ಯದಲ್ಲಿ ಎಷ್ಟು ಜಪಾನೀಸ್ ಕಂಪನಿಗಳು ತಮ್ಮ ಕಚೇರಿಗಳನ್ನು ಹೊಂದಿವೆ ಎಂದು ನಿಮಗೆ ತಿಳಿದಿದೆಯೇ, ಅದರ ಮೇಲೆ ಬೆಂಗಳೂರಿನ ಜಪಾನ್ ಕಾನ್ಸುಲೇಟ್ ಜನರಲ್ ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದಾರೆ. ಅಕ್ಟೋಬರ್ 2017 ರ ಹೊತ್ತಿಗೆ, ಈ ಸಂಖ್ಯೆ 476 ಆಗಿತ್ತು. ಈ ಅಂಶದಿಂದ ನಾನು ತುಂಬಾ ಆಶ್ಚರ್ಯಚಕಿತನಾದೆ. ಈ ಸಂಖ್ಯೆಯನ್ನು ನಾನು ಪ್ರಪಂಚದ ಇತರ ಜಪಾನಿನ ರಾಯಭಾರ ಕಚೇರಿಗಳು, ಜನರಲ್‌ಗಳು ಮತ್ತು ಕಾನ್ಸುಲರ್ ಕಚೇರಿಗಳ ವ್ಯಾಪ್ತಿಯಲ್ಲಿರುವ ಕಂಪನಿಗಳ ಸಂಖ್ಯೆಯೊಂದಿಗೆ ಹೋಲಿಸಿದೆ. ಜಪಾನ್‌ನ 233 ಸಾಗರೋತ್ತರ ರಾಜತಾಂತ್ರಿಕ ಸಂಸ್ಥೆಗಳಲ್ಲಿ ಬೆಂಗಳೂರಿನಲ್ಲಿರುವ ನಮ್ಮ ಕಾನ್ಸುಲೇಟ್ ಜನರಲ್ 33 ನೇ ಸ್ಥಾನದಲ್ಲಿದೆ. ಅಕ್ಟೋಬರ್ 2018 ರ ಹೊತ್ತಿಗೆ, ಈ ಸಂಖ್ಯೆ 529 ಕ್ಕೆ ಏರಿಕೆಯಾಗಿದೆ. ಇದು ನನಗೆ ನಿಜಕ್ಕೂ ಆಶ್ಚರ್ಯವಾದ ವಿಷಯ ಎಂದು ತಿಳಿಸಿದ್ದಾರೆ.

ಜಪಾನ್‌ನೊಂದಿಗೆ ಇಂತಹ ನಿಕಟ ಸಂಬಂಧ ಹೊಂದಿರುವ ಬೆಂಗಳೂರು ನಗರದಲ್ಲಿ ಕೆಲಸ ಮಾಡಲು ನನ್ನನ್ನು ನಿಯೋಜಿಸಲ್ಪಟ್ಟಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಬೆಂಗಳೂರು ಮತ್ತು ಜಪಾನ್ ನಡುವಿನ ಮಾನಸಿಕ ಅಂತರವನ್ನು ಇನ್ನಷ್ಟು ಹತ್ತಿರಕ್ಕೆ ತರಲು ನನ್ನಿಂದ ಸಾಧ್ಯವಾದಷ್ಟು ಅತ್ಯುತ್ತಮವಾದ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಹಲವು ಅಚ್ಚರಿಗಳಿಂದ ತುಂಬಿರುವ ಬೆಂಗಳೂರಿನ ಬಗ್ಗೆ ತಮ್ಮ ಅನುಭವಗಾನ್ನು ಬಿಚ್ಚಿಟ್ಟ ಜಪಾನ್ ಡೆಪ್ಯೂಟಿ ಕೌನ್ಸಲರ್
Bengaluru is full of surprises