ಮುಂಗಾರು ಆರಂಭಕ್ಕೆ ಮುಂಚೆಯೇ ಬೇಲೂರು ಸಮೀಪದ ಯಗಚಿ ಜಲಾಶಯ ಭರ್ತಿ!

Promotion

ಬೆಂಗಳೂರು, ಮೇ 21, 2022 (www.justkannada.in): ಬೇಲೂರು ಸಮೀಪದ ಯಗಚಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗಿದ್ದರಿಂದ 5 ಕ್ರಸ್ಟ್ ಗೇಟ್‍ಗಳ ಮೂಲಕ ನದಿಗೆ ನೀರು ಬಿಡಲಾಗಿದೆ.

ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಬರುತ್ತಿರುವ ಮಳೆ ಹಾಗೂ ಮಲೆನಾಡು ಮತ್ತು ಯಗಚಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಸುರಿಯುತ್ತಿದೆ.

ಯಗಚಿ ಜಲಾಶಯಕ್ಕೆ 875 ಕ್ಯೂಸೆಕ್ಸ್ ನೀರಿನ ಒಳ ಹರಿವಿನಿಂದಾಗಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ 5 ಕ್ರಸ್ಟ್ ಗೇಟ್‍ಗಳ ಮೂಲಕ 500 ಕ್ಯೂಸೆಕ್ಸ್ ನೀರನ್ನು ಯಗಚಿ ನದಿಗೆ ಬಿಡಲಾಗಿದೆ.

ಮಳೆಯ ನಡುವೆಯೇ ಯಗಚಿ ಜಲಾಶಯಕ್ಕೆ ಭೇಟಿನೀಡಿ ನೀರು ಹರಿಯುತ್ತಿರುವುದನ್ನು ನೋಡಿ ಫೋಟೋ ಕ್ಲಿಕ್ಕಿಸಿ ಕೊಂಡು ಆನಂದಿಸುತ್ತಿದ್ದಾರೆ.