ಅವರಿಗೆ ನನ್ನಿಂದ ಯಾವುದೇ ತೊಂದರೆಯಾಗಲ್ಲ: ನನ್ನ ಮೇಲೆ ನಂಬಿಕೆ ಇಡಿ- ನಟ ಯಶ್ ಹೇಳಿಕೆ…

Promotion

ಹಾಸನ,ಮಾರ್ಚ್,10,2021(www.justkannada.in):  ಫಾರ್ಮ್ ಹೌಸ್ ಗೆ ರಸ್ತೆ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆಯಾದ ಹಿನ್ನೆಲೆ ಈ ಕುರಿತು ಮಾತನಾಡಿರುವ ನಟ ಯಶ್, ನನ್ನಿಂದ ಯಾರಿಗೂ ತೊಂದರೆಯಾಗಲ್ಲ. ಇನ್ನೊಬ್ಬರ ಜಾಗ ಕಿತ್ತುಕೊಳ್ಳುವ ಆಸೆ ಇಲ್ಲ. ನನ್ನ ಮೇಲೆ ನಂಬಿಕೆ ಇಡಿ ಎಂದು ಹೇಳಿಕೆ ನೀಡಿದ್ದಾರೆ.jk

ಹಾಸನದ ತಿಮ್ಮಲಾಪುರದಲ್ಲಿ ಕೃಷಿ ಜಮೀನಿಗೆ ಕಾಂಪೌಂಡ್ ನಿರ್ಮಿಸುವಾಗ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಹಾಗೂ ಯಶ್ ಪೋಷಕರ ನಡುವೆ ಗಲಾಟೆಯಾಗಿತ್ತು. ಈ ಸಂಬಂಧ ನಿನ್ನೆ ದುದ್ಧ ಪೊಲೀಸ್ ಠಾಣೆಗೆ ನಟ ಯಶ್ ಭೇಟಿ ನೀಡಿದ್ದರು.

ಈ ಕುರಿತು ಮಾತನಾಡಿರುವ  ನಟ ಯಶ್, ನಾನು ನಟನಾಗಿರುವುದರಿಂದ ಸಣ್ಣ ವಿಷಯ ದೊಡ್ಡದಾಗುತ್ತದೆ. ಎಲ್ಲದಕ್ಕೂ ನಾನು ಬಂದು ನಿಂತು ಕೆಲಸ ಮಾಡಿಸಲು ಆಗಲ್ಲ. ಇನ್ನೊಬ್ಬರ ಜಾಗ ಕಿತ್ತುಕೊಳ್ಳುವ ಆಸೆ ಇಲ್ಲ. ಯಶ್ ಗೆ ದುರಾಸೆ ಇಲ್ಲ. ನನ್ನ ಮೇಲೆ ನಂಬಿಕೆ ಇಡಿ ಎಂದರು.

believe-me-no-trouble-actor-yash-statement
ಕೃಪೆ-internet

ನಮ್ಮ ತಂದೆ ತಾಯಿ ದುಡುಕಿರಬಹುದು.ಇದು ನನ್ನ ಕಡೆಯ ಪ್ರಯತ್ನ. ಎಲ್ಲರೂ ತಾಳ್ಮೆಯಿಂದ ಕಾಯಬೇಕು. ನಾನು ನ್ಯಾಯಯುತವಾಗಿ ನಡೆದುಕೊಳ್ಳುವೆ. ಏನಾಗಿದೆ ಎಂದು ಪರಿಶೀಲಿಸಿ ಮುಂದಿನ ನಿರ್ಧಾರ ಮಾಡುವೆ ಎಂದು ನಟ ಯಶ್ ತಿಳಿಸಿದರು.

Key words: Believe – me- no trouble- Actor- Yash- statement