ನಾಡದ್ರೋಹಿ ಘೋಷಣೆ ಕೂಗಿ ಮತ್ತೆ ಪುಂಡಾಟ ಮೆರೆದ ಶೀವಸೇನೆ…

Promotion

ಬೆಳಗಾವಿ,ಫೆಬ್ರವರಿ,8,2021(www.justkannada.in):  ರಾಜ್ಯದ ಕೆಲ ಭಾಗಗಳನ್ನ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಪದೇ ಪದೇ ಖ್ಯಾತೆ ತೆಗೆಯುತ್ತಿರುವ ಶಿವಸೇನೆ ಪುಂಡರು ಇದೀಗ ಮತ್ತೆ ನಾಡದ್ರೋಹಿ ಘೋಷಣೆ ಕೂಗುವ ಮೂಲಕ ಕಿರಿಕ್ ತೆಗೆದಿದ್ದಾರೆ.jk

ಬೆಳಗಾವಿಯ ರಾಮಲಿಂಗ ಖಿಂಡ್ ಗಲ್ಲಿಯಲ್ಲಿ ನಡೆದ ಮರಾಠಿ ಹೋರಾಟಗಾರರ ಹುತಾತ್ಮ ದಿನಾಚಾರಣೆಯಲ್ಲಿ ಶಿವಸೇನೆ ಪುಂಡರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ ಎನ್ನಲಾಗುತ್ತಿದೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಕಾರ್ಯಕ್ರಮದಲ್ಲಿ ಘೋಷಣೆ ಕೂಗಿದ್ದಾರೆ.

 belagavi- Shiv Sena – traitor- slogan
ಕೃಪೆ- internet

ಹಾಗೆಯೇ ಹೋರಾಟದಲ್ಲಿ ಮಡಿದವರಿಗೆ ಅಮರ್ ರಹೇ ಎಂದು ಶಿವಸೇನೆ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಈ ಮೂಲಕ ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನೆ ಮತ್ತೆ ಖ್ಯಾತೆ ತೆಗೆದಿದೆ.

Key words: belagavi- Shiv Sena – traitor- slogan