ಬಿಬಿಎಂಪಿ ಕೋವಿಡ್ ಬೆಡ್ ಬುಕ್ಕಿಂಗ್ ಸಾಫ್ಟ್ ವೇರ್ ಮರುವಿನ್ಯಾಸಗೊಳಿಸುವ ಕಾರ್ಯ ಆರಂಭ…

ಬೆಂಗಳೂರು, ಮೇ 5, 2021  (www.justkannada.in): ರಾಜ್ಯದ, ಅದರಲ್ಲಿಯೂ ಬೆಂಗಳೂರು ನಗರದಲ್ಲಿ ಕೋವಿಡ್ ಸಾಂಕ್ರಾಮಿಕ  ರೋಗ ನಿಯಂತ್ರಣ ತಪ್ಪಿದೆ. ಕೋವಿಡ್ ಪೀಡಿತರು ಆಮ್ಲಜನಕ, ವೈದ್ಯಕೀಯ ಚಿಕಿತ್ಸೆ ಸಿಗದೆ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಈ ಮಧ್ಯೆ ಬೆಂಗಳೂರು ನಗರದಲ್ಲಿ ಬಿಬಿಎಂಪಿಯ ಬೆಡ್ ಬುಕ್ಕಿಂಗ್ ಮಾಡುವ ಸಾಫ್ಟ್ ವೇರನ್ನೇ ದುರ್ಬಳಕೆ ಮಾಡಿಕೊಂಡು ಹಣ ಲೂಟಿ ಮಾಡುತ್ತಿದ್ದ ಹಗರಣ ನಿನ್ನೆಯಷ್ಟೇ ಬಯಲಾಯಿತು.Beginning - redesign - BBMP -Covid Bed Booking -Software.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯರಾದ ತೇಜಸ್ವಿ ಸೂರ್ಯ, ಬಸವನಗುಡಿ ವಿಧಾಸಭಾ ಕ್ಷೇತ್ರದ ಎಂಎಲ್‌ ಎ ರವಿ ಸುಬ್ರಹ್ಮಣ ಹಾಗೂ ಎಂಎಲ್‌ ಎ ಸತೀಶ್ ರೆಡ್ಡಿ ಅವರ ಮುಂದಾಳತ್ವದ ಒಂದು ತಂಡ ಈ ಹಗರಣವನ್ನು ಸಾಕ್ಷಿ ಸಮೇತ ಬಯಲು ಮಾಡಿದ್ದು, ಈ ಸಂಬಂಧ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ.

ಈ ನಡುವೆ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ಅವರು ಈ ಬಿಬಿಎಂಪಿ ಬೆಡ್ ಬುಕ್ ಮಾಡುವ ಸಾಫ್ಟ್ ವೇರ್ ಅನ್ನು ಮರುವಿನ್ಯಾಸಗೊಳಿಸಿ, ಲೋಪಗಳನ್ನು ಸರಿಪಡಿಸುವಂತೆ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಾದ ನಂದನ್ ನೀಲೆಕಣಿ ಅವರನ್ನು ಕೋರಿದ್ದು, ಅವರು ಕೂಡಲೇ ಅತ್ಯುತ್ತಮ ತಂತ್ರಜ್ಞರ ತಂಡವನ್ನು ಈ ಕೆಲಸಕ್ಕೆ ನೇಮಿಸಿದ್ದಾರೆ. ಪ್ರಸ್ತುತ ಈ ತಂಡ ಬಿಬಿಎಂಪಿ ಬೆಡ್ ಬುಕ್ಕಿಂಗ್ ಸಾಫ್ಟ್ ವೇರ್ ಅನ್ನು ಮರುವಿನ್ಯಾಸಗೊಳಿಸಲು ಐಸ್ಪಿರಿಟ್@ಪ್ರಾಡಕ್ಟ್_ನೇಷನ್ ಎಂಬ ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚು ಸುರಕ್ಷಿತ, ಪಾರದರ್ಶಕವಾದ ಸಾಫ್ಟ್ ವೇರ್ ನಿರ್ಮಾಣದಲ್ಲಿ ತೊಡಗಿದ್ದಾರೆ.Beginning - redesign - BBMP -Covid Bed Booking -Software.

ತೇಜಸ್ವಿ ಸೂರ್ಯ ಅವರು ನಂದನ್ ನೀಲೆಕಣಿ ಹಾಗೂ ಅವರ ತಂಡಕ್ಕೆ ತಮ್ಮ ಧನ್ಯವಾದಗಳನ್ನು ಸಲ್ಲಿಸಿದ್ದು, ಬೆಂಗಳೂರಿನ ಜನರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Key words: Beginning – redesign – BBMP -Covid Bed Booking -Software.