60 ಕೋಟಿ ರೂ.ಮೌಲ್ಯದ ಆಸ್ತಿ ವಶಪಡಿಸಿಕೊಂಡ ಬಿಡಿಎ.

kannada t-shirts

ಬೆಂಗಳೂರು, ಅಕ್ಟೋಬರ್,1,2021(www.justkannada.in): ಬಿಡಿಎಗೆ ಸೇರಿದ ಜಾಗವನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿರುವ ಬಿಡಿಎ ಅಧಿಕಾರಿಗಳು ಇಂದು ನಗರದ ಎಚ್ ಬಿಆರ್ ಬಡಾವಣೆಯಲ್ಲಿ ಸುಮಾರು 60 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಪಾಲಕ ಎಂಜಿನಿಯರ್ ಕುಮಾರ್ ನೇತೃತ್ವದ ಬಿಡಿಎ ಅಧಿಕಾರಿಗಳ ತಂಡವು ಈ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಿದ್ದು, ಎಚ್ ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಸರ್ವೆ ಸಂಖ್ಯೆ 194 ರ 1 ಎಕರೆ 23 ಗುಂಟೆ ಜಮೀನನ್ನು ವಶಕ್ಕೆ ಪಡೆದುಕೊಂಡಿದೆ.

ಈ ಜಾಗವನ್ನು ಬಿಡಿಎ ಬಡಾವಣೆ ನಿರ್ಮಾಣ ಮಾಡುವ ಸಲುವಾಗಿ 1978 ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, 1985 ರಲ್ಲಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ, ಭೂಮಾಲೀಕರು ಬಿಡಿಎ ವಿರುದ್ಧ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಬಿಡಿಎ ಪರ ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಕೋರ್ಟಿನಲ್ಲಿ ದಾವೆ ಹೂಡಿದರಾದರೂ ಅರ್ಜಿಯನ್ನು ತಿರಸ್ಕರಿಸಿ ಸದರಿ ಜಮೀನನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಿತ್ತು.

ತೀರ್ಪು ಬಂದು 30 ವರ್ಷವಾದರೂ ಸದರಿ ಜಮೀನಿನಲ್ಲಿ ಅನಧಿಕೃತವಾಗಿ ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿತ್ತು. ಬಿಡಿಎ ಅಧಿಕಾರಿಗಳು ಒಂದು ಕೈಗಾರಿಕಾ ಶೆಡ್, ಕಾರ್ಮಿಕರು ಉಳಿದುಕೊಳ್ಳಲು ನಿರ್ಮಾಣವಾಗಿದ್ದ 2 ಶೆಡ್ ಗಳನ್ನು ಹಾಗೂ ಕಾಂಪೌಂಡನ್ನು ನೆಲಸಮ ಮಾಡಿ ಸದರಿ ಜಾಗವನ್ನು ವಶಪಡಿಸಿಕೊಂಡಿದ್ದಾರೆ.  ಈ ಜಾಗದ ಪ್ರಸ್ತುತ ಮಾರುಕಟ್ಟೆ ಮೌಲ್ಯ 60 ಕೋಟಿ ರೂಪಾಯಿಗಳು.

ಬಿಡಿಎ ಅಧ್ಯಕ್ಷರ ಪ್ರತಿಕ್ರಿಯೆ:

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು, ಬಿಡಿಎಗೆ ಸೇರಬೇಕಾಗಿದ್ದ ಅಮೂಲ್ಯವಾದ ಆಸ್ತಿಗಳನ್ನು ಒತ್ತುವರಿದಾರರು ಮತ್ತು ಭೂಗಳ್ಳರು ಲಪಟಾಯಿಸುವ ಪ್ರಕರಣಗಳಿಗೆ ತಿಲಾಂಜಲಿ ಹಾಕಲು ಸಂಕಲ್ಪ ಮಾಡಿದ್ದೇವೆ. ಅದರಂತೆ, ನ್ಯಾಯಾಲಯದ ಸ್ಪಷ್ಟ ಆದೇಶಗಳನ್ನು ಪಡೆದುಕೊಂಡು ಪ್ರಾಧಿಕಾರ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಂದ ಬಿಡಿಎ ಆಸ್ತಿಯನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Key words: BDA- seized- property -worth -Rs 60 crore.

ENGLISH SUMMARY…

BDA acquires land worth Rs. 60 cr.
Bengaluru, October 1, 2021 (www.justkannada.in): The officials of the Bangalore Development Authority (BDA), who have continued acquisition of BDA land, today acquired land worth about Rs. 60 cr., in HBR Layout in Bengaluru.
The team of BDA officials led by Executive Engineer Kumar has continued its eviction drive. As part of this eviction and acquisition drive, they took over the one-acre, 23 gunta land located at Survey No. 194 in Kachkaranahalli in HBR Layout.
The BDA had issued a notification in 1978 to construct a BDA layout on this land. The final notification was issued in 1985. But the landowners had registered a case against BDA in the High Court, which had given its judgment after conducting the trials. The applicants had also sued in the Hon’ble Supreme Court, which was dismissed and directed to acquire the land.
Though the judgment was given 30 years ago illegal construction activities had continued here. Today the BDA officials evicted one industrial shed, 2 sheds which were used as residences for the labourers along with the compound wall. The total value of this land presently is said to be around Rs. 60 crore!
In his response about the eviction and acquisition drive BDA Chairman S.R. Vishwanath informed that the BDA has vowed to clear all encroachments and however influential he or she may be, they wouldn’t be spared.
Keywords: BDA/ eviction/ encroachment/ acquire/ land/ Rs. 60 crore

website developers in mysore