ಮತ್ತೆ 300 ಕಾರ್ನರ್​ ಸೈಟುಗಳ ಹರಾಜಿಗೆ ಬಿಡಿಎ ಸಿದ್ಧತೆ….

ಬೆಂಗಳೂರು,ಜು,11,2020(www.justkannada.in):  ಬಿಡಿಎ ಹರಾಜಿಗಿಟ್ಟ 195 ಸೈಟುಗಳ ಪೈಕಿ ಶೇ. 85ರಷ್ಟು ಸೈಟುಗಳು ಹರಾಜಾಗಿದ್ದು ಈ ಬಗ್ಗೆ ಬಿಡಿಎ ಮಾಹಿತಿ ನೀಡಿದೆ. ಬಿಡಿಎ ಮತ್ತೆ 300 ಕಾರ್ನರ್​ ಸೈಟುಗಳ ಹರಾಜಿಗೆ ಸಿದ್ಧತೆ ಮಾಡಿಕೊಂಡಿದೆ.jk-logo-justkannada-logo

ಬಿಡಿಎ ಹರಾಜಿಗಿಟ್ಟ 195 ಸೈಟುಗಳಿಗೆ 2,500 ಕ್ಕೂ ಹೆಚ್ಚು ಜನ ಬಿಡ್ ಮಾಡಿದ್ದರು. 195 ಸೈಟುಗಳ ಪೈಕಿ 10 ಸೈಟುಗಳಿಗೆ ಯಾರೂ ಬಿಡ್ ಮಾಡಲಿಲ್ಲ. 19 ಸೈಟುಗಳಿಗೆ ಯಾರೂ ಸರಿಯಾದ ಮೊತ್ತ ಬಿಡ್ ಮಾಡದಿದ್ದರಿಂದ ರದ್ದು ಮಾಡಲಾಯ್ತು. ಈ ಹಿನ್ನಲೆ 166 ಕಾರ್ನರ್​ ಸೈಟುಗಳು ಮಾತ್ರ ಹರಾಜಾಗಿವೆ.

166 ಸೈಟುಗಳ ಮಾರಾಟದಿಂದ ಬಿಡಿಎಗೆ  210.82 ಕೋಟಿ ರೂಪಾಯಿ ಬರಲಿದೆ. ಸೈಟುಗಳು ಬಿಡ್ ಮಾಡಿದವರು ಮೂರು ದಿನದಲ್ಲಿ ಶೇ. 25 ರಷ್ಟು ಮುಂಗಡ ಕಟ್ಟಬೇಕು. ಮೂರು ದಿನದಲ್ಲಿ 52.70 ಕೋಟಿ ರೂಪಾಯಿ ಬಿಡಿಎಗೆ ಸಂದಾಯವಾಗುವ ನಿರೀಕ್ಷೆ ಇದೆ. ಮತ್ತೆ 300 ಕಾರ್ನರ್​ ಸೈಟುಗಳ ಹರಾಜಿಗೆ ಬಿಡಿಎ ಸಿದ್ಧತೆ ಮಾಡಿಕೊಂಡಿದೆ. ಇ ಹರಾಜಿಗೆ ಇದ್ದ ತಾಂತ್ರಿಕ ದೋಷವನ್ನ ಬಿಡಿಎ ಸರಿಪಡಿಸಿಕೊಂಡಿದ್ದು ಯಾವುದೇ ದೋಷ ಆಗದಂತೆ ಎರಡನೇ ಇ ಹರಾಜು ನಡೆಯಲಿದೆ.bda-ready-auction-300-corner-sites-again

ಈ ಹಿಂದೆ ಪ್ರತಿ ತಿಂಗಳು 50 sites ಹರಾಜು ಮಾಡಲಾಗುತ್ತಿತ್ತು. ಆ ವೇಳೆ ಶೇಕಡಾ 40% ಮಾತ್ರ ಗುರಿ ತಲುಪುತ್ತಿದ್ದೇವು. ಈ ಬಾರಿ ಸಮಾನ್ಯ – ಮಧ್ಯಮ ವರ್ಗದ ಜನರು ಹಾಗೂ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಹರಾಜಿನಲ್ಲಿ ಭಾಗವಹಿಸಿದ್ದಾರೆ. ಮಾದ್ಯಮಗಳ ಸಹಕಾರ & ಪ್ರಚಾರದ ಕ್ರಮವನ್ನು ಬದಲಾಯಿಸಿ, ಬಿಡ್ಡಿಂಗ್ ನ ಕೊನೆಯ ದಿನದ ವರೆಗೂ ವ್ಯವಸ್ಥಿತ ಪ್ರಚಾರ ಮಾಡಿದ್ದು, ಹರಾಜು ಹೆಚ್ಚಾಗಲು ಹಲವು ಕಾರಣಗಳಲ್ಲಿ ಒಂದಾಗಿದೆ ಎಂದು ಬಿಡಿಎ ತಿಳಿಸಿದೆ.

ಹರಾಜು ಹಾಕಲ್ಪಟ್ಟ ಸೈಟ್ ಗಳ ವಿವರ

1). ಹರಾಜು ಗೆ ಹಾಕಲ್ಪಟ ಒಟ್ಟು ಸೈಟ್ ಗಳು – 195

2) ಯಾವುದೇ ಪ್ರತಿಕ್ರಿಯೆ ಬಾರದ ಸೈಟ್ ಗಳ ಸಂಖ್ಯೆ – 10

3) ಬಿಡಿಯ ನಿಗಧಿಪಡಿಸಿದ ದರಕ್ಕಿಂತ ಶೇಕಡಾ 5 % ಮೌಲ್ಯ ಹೆಚ್ಚಿಗೆ ಬಾರದ ಹಿನ್ನೆಲೆಯಲ್ಲಿ ತಡೆಯಿಡಿದ ಸೈಟ್ ಗಳ ಸಂಖ್ಯೆ – 19

4) ಹರಾಜು ಮೂಲಕ ಮಾರಾಟವಾದ ಸೈಟ್ ಗಳು – 166

5) ಶೇಕಡಾವಾರು – 85%

6) ಹರಾಜಿನಿಂದ ಲಭ್ಯವಾಗುವ ಹಣದ ಒಟ್ಟು ಮೊತ್ತ – 210.82 ( ಕೋಟಿ)

7) ಮೂರು ದಿನದ ಒಳಗಡೆ ಯಶಸ್ವಿ ಬಿಡ್ಡುದಾರರು ಪಾವತಿ ಮಾಡುವ ಹಣದಿಂದ ಲಭ್ಯವಾಗುವ ಹಣ – 52.70 ( ಕೋಟಿ)

8) ಉಳಿಕೆ ಹಣ ಶೇಕಡಾ 75% ಹಣವನ್ನು, ಬಿಡಿಎ ಯಿಂದ ” ಯಶಸ್ವಿ ಬಿಡ್ಡಿಂಗ್” ಪತ್ರ ತಲುಪಿದ 45 ದಿನಗಳ ಒಳಗಾಗಿ ಪಾವತಿ ಮಾಡಬೇಕು‌

9) ಮುಂದಿನ ವಾರ 300 ಸೈಟ್ ಹರಾಜು ಹಾಕಲು ಸಿದ್ದತೆ‌.

Key words: BDA- ready -auction -300 corner sites- again.