ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ- ಸಚಿವ ಅಶ್ವಥ್ ನಾರಾಯಣ್ ವಾಗ್ದಾಳಿ.

ಬೆಂಗಳೂರು,ಆಗಸ್ಟ್,6,2022(www.justkannada.in): ಬಿಬಿಎಂಪಿ ಚುನಾವಣೆ ಮೀಸಲಾತಿ  ಕುರಿತು ಕಾಂಗ್ರೆಸ್ ನಾಯಕರ ಪ್ರತಿಭಟನೆಗೆ ಕಿಡಿಕಾರಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್,  ಚುನಾವಣೆ ಬೇಡ ಎನ್ನೋದು ಕಾಂಗ್ರೆಸ್ ಉದ್ಧೇಶವಾಗಿದೆ.  ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್,  ಈಗ ಮೀಸಲಾತಿ ದೊಡ್ಡ ಸಮಸ್ಯೆ ಯಾಗಿದೆ. ಶೇ.50ರಷ್ಟು ಒಬಿಸಿಗೆ, ಶೇ. 50ರಷ್ಟು ಸಾಮಾನ್ಯ ಮೀಸಲಾತಿ. 50% ಮಹಿಳೆಯರಿಗೂ ಮೀಸಲಾತಿ ನೀಡಲಾಗಿದೆ. ಮೀಸಲಾತಿಗೆಗೆ ವಿಪಕ್ಷಗಳು ವಿರೋಧಿಸಿವೆ. ಹೀಗಾಗಿ ಆಕ್ಷೇಪಣೆ ಸಲ್ಲಿಸಲು ಸಮಯ ನೀಡಿದ್ದೇವೆ. ಕಾನೂನಿನ ಪ್ರಕಾರವೇ ಮೀಸಲಾತಿ ನೀಡಲಾಗಿದೆ. ನಿಯಮ ಮೀರಿ ಮೀಸಲಾತಿ ನೀಡಿದ್ರೆ ತೋರಿಸಲಿ. ಚುನಾವಣೆ ಬೇಡ ಅನ್ನೋದು ಕಾಂಗ್ರೆಸ್ ಉದ್ಧೇಶ. ಹೀಗಾಗಿ ಕಾಂಗ್ರೆಸ್ ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

6ಕ್ಕೆ 6 ವಾರ್ಡ್ ಮಹಿಳಾ ಮೀಸಲಾತಿ ಕುರಿತ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಕಿಡಿಕಾರಿದ ಸಚಿವ ಅಶ್ವಥ್ ನಾರಾಯಣ್,  ಮುಸ್ಲಿಂ ಮಹಿಳಾ ಪ್ರತಿನಿಧಿ ಬೇಡ ಅಂದಿದ್ರು. ಈಗ ಮಹಿಳಾ ಮೀಸಲಾತಿ ಬೇಡ ಅಂತಿದ್ದಾರೆ. ಮುಸ್ಲಿಂ ಮಹಿಳೆಯರು ಉನ್ನತಸ್ಥಾನಕ್ಕೆ ಬರಬಾರದಾ..? ಎಂದು ಪ್ರಶ್ನಿಸಿದರು.not-dead-black-fungus-dcm-ashwath-narayan-surprising-statement

ಸಿದ್ಧರಾಮೋತ್ಸವ ಕುರಿತು ವ್ಯಂಗ್ಯವಾಡಿದ ಸಚಿವ ಅಶ್ವಥ್ ನಾರಾಯಣ್, ನಿವೃತ್ತಿ ಆಗಲು ಸಿದ್ಧರಾಮೋತ್ಸವ ಮಾಡಿಕೊಂಡಿದ್ದಾರೆ. ಸಿಎಂ ಆಗಿದ್ದಾಗ ಮುಂದಿನ ಚುನಾವಣೆಯಲ್ಲಿ  ನಿಲ್ಲಲ್ಲ ಎಂದಿದ್ದರು. ಆದರೂ ನಿಂತರು. ಬಿಜೆಪಿಯಲ್ಲಿ ವ್ಯಕ್ತಿ ಪೂಜೆ ಇಲ್ಲ. ಆದರೆ ಕಾಂಗ್ರೆಸ್ ನಲ್ಲಿದೆ. ಡಿ.ಕೆ ಶಿವ ಕುಮಾರ್ ವ್ಯಕ್ತಿ ಪೂಜೆ ಇಲ್ಲ ಅಂದಿದ್ದರು.  ಅದರೇ ಡಿಕೆಶಿಯೇ ಅದನ್ನ ಹೇಳಿಕೊಳ್ಳಬೇಕು ಎಂದು ಟಾಂಗ್ ನೀಡಿದರು.

Key words: BBMP-Election-Reservation- Congress – Minister- Aswath Narayan

ENGLISH SUMMARY…

Congress has admitted its loss even before elections: Minister Ashwathnarayana
Bengaluru, August 6, 2022 (www.justkannada.in): Higher Education Minister Dr. Ashwathanarayana today expressed his ire upon the Congress leaders protest against the BBMP election reservations. “It is the intention of the Congress not to conduct elections. They have accepted defeat even before the elections,” he observed.information-private-hospitals-government-beds-oxygen-remedisivir-sast-portal-dcm-ashwath-narayan
Addressing the press persons today, Minister Ashwathanarayana said that the reservation has become a big problem. Reservation has been given equally to OBC (50%), General (50%), women (50%). However, the opposition parties have opposed it. Hence, we have given time to submit their objections, if any. Reservations have been provided as per law. However, the Congress doesn’t want elections. So, they have accepted defeat even before elections,” he ridiculed.